ಕೇಂದ್ರ ಮಾನವ ಸಂಪನ್ಮೂಲ ಪ್ರಕಾಶ್ ಜಾವಡೇಕರ್ ಸಚಿವ ಇದ್ಯಾವ ಮಾದರಿಯ ಫೋನ್ ಇಟ್ಕೊಂಡಿದ್ದಾರೆಂದು ಅಚ್ಚರಿ ಪಡಬೇಡಿ!
ನವದೆಹಲಿ: ಕೇಂದ್ರ ಮಾನವ ಸಂಪನ್ಮೂಲ ಪ್ರಕಾಶ್ ಜಾವಡೇಕರ್ ಸಚಿವ ಇದ್ಯಾವ ಮಾದರಿಯ ಫೋನ್ ಇಟ್ಕೊಂಡಿದ್ದಾರೆಂದು ಅಚ್ಚರಿ ಪಡಬೇಡಿ!
ಇಂದು ಚಳಿಗಾಲ ಅಧಿವೇಶನದಲ್ಲಿ ಭಾಗವಹಿಸಲು ಸಂಸತ್ತಿಗೆ ಬಂದಿದ್ದ ಪ್ರಕಾಶ್ ಜಾವಡೇಕರ್ ಮೊಬೈಲ್ ಕರೆಯನ್ನು ಸ್ವೀಕರಿಸಿದಾಗ ಎಲ್ಲರಿಗೂ ಅಚ್ಚರಿ ಕಾದಿತ್ತು.
ಕರೆ ಸ್ವೀಕರಿಸಿದ ಜಾವಡೇಕರ್ ಸ್ಥಿರ ದೂರವಾಣಿಯ ರಿಸೀವರ್’ನಂತಿರುವ ನೇರಳೆ ಬಣ್ಣದ ಉಪಕರಣವನ್ನು ಹೊರತೆಗೆದು ಮಾತನಾಡಲಾರಂಭಿಸಿದ್ದಾರೆ.
ಮೊಬೈಲ್ ಫೋನ್ ಹೊರಸೂಸುವ ವಿಕಿರಣವನ್ನು ತಡೆಯುವ ಉದ್ದೇಶದಿಂದ ಈ ರೀತಿಯ ಉಪಕರಣವನ್ನು ಅವರು ಬಳಸುತ್ತಿದ್ದಾರೆಂದು ಹೇಳಾಲಾಗುತ್ತಿದೆ.
ಆದರೆ ಈ ಬಗ್ಗೆ ಜಾವಡೇಕರ್ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ.
