ಜಾರಕಿಹೊಳಿ Vs ಜಾರಕಿಹೊಳಿ

news | Friday, February 16th, 2018
Suvarna Web Desk
Highlights

ಕಳೆದ ಬಾರಿಯ ಚುನಾವಣೆಯಲ್ಲಿ ಪರಾಭವಗೊಂಡಿದ್ದ ಮಾರುತಿ ಅಷ್ಟಗಿ ಅವರೇ ಬಿಜೆಪಿಯಿಂದ ಅಭ್ಯರ್ಥಿಯಾಗಿ ಈ ಬಾರಿ ಕಣಕ್ಕಿಳಿಯುವ ಸಾಧ್ಯತೆ ಇದೆ.

ಯಮಕನಮರಡಿ ಎಸ್‌ಟಿ ಮೀಸಲು ಕ್ಷೇತ್ರ. ಪ್ರಭಾವಿ ರಾಜಕೀಯ ಮುಖಂಡ, ಎಐಸಿಸಿ ಕಾರ್ಯದರ್ಶಿ ಸತೀಶ ಜಾರಕಿಹೊಳಿ ಈ ಕ್ಷೇತ್ರ ಪ್ರತಿನಿಧಿಸುತ್ತಿದ್ದಾರೆ. ಪಕ್ಷ ತೊರೆಯುವುದಿಲ್ಲ ಎಂದು ಸತೀಶ್ ಜಾರಕಿಹೊಳಿ ಅವರು ಪದೇಪದೇ ಹೇಳಿದರೂ ಪಕ್ಷ ತೊರೆವ ವದಂತಿಗಳು ಮಾತ್ರ ಇನ್ನೂ ನಿಂತಿಲ್ಲ.

ಈ ನಡುವೆ, ಅವರ ವಿರುದ್ಧ ಸಹೋದರ, ಉದ್ಯಮಿ ಲಖನ್ ಜಾರಕಿಹೊಳಿ ಅವರು ಕಾಂಗ್ರೆಸ್ಸಿನಿಂದ ಕಣಕ್ಕಿಳಿಯುವ ಇಂಗಿತ ವ್ಯಕ್ತಪಡಿಸಿದ್ದಾರೆ. ಈ ವಿಚಾರವಾಗಿ ಜಾರಕಿಹೊಳಿ ಸಹೋದರರ ನಡುವೆ ವಾಕ್ಸಮರವೂ ನಡೆದಿದೆ. ಕಳೆದ ಬಾರಿಯ ಚುನಾವಣೆಯಲ್ಲಿ ಪರಾಭವಗೊಂಡಿದ್ದ ಮಾರುತಿ ಅಷ್ಟಗಿ ಅವರೇ ಬಿಜೆಪಿಯಿಂದ ಅಭ್ಯರ್ಥಿಯಾಗಿ ಈ ಬಾರಿ ಕಣಕ್ಕಿಳಿಯುವ ಸಾಧ್ಯತೆ ಇದೆ. ಒಂದು ವೇಳೆ ಸತೀಶ್ ಜಾರಕಿಹೊಳಿ ಕಾಂಗ್ರೆಸ್ಸಿಂದ ಕಣಕ್ಕಿಳಿದಲ್ಲಿ ಅವರ ವಿರುದ್ಧ ಲಖನ್ ಜಾರಕಿಹೊಳಿ ಅವರು ಜೆಡಿಎಸ್ ಅಥವಾ ಬಿಜೆಪಿಯತ್ತ ಮುಖ ಮಾಡುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.

Comments 0
Add Comment

  Related Posts

  Gandhi nagar Ramesh Aravind News

  video | Wednesday, April 11th, 2018

  BSY Reacts NR Ramesh BJP Ticket Row

  video | Monday, April 9th, 2018

  Election War Modi Vs Siddu

  video | Thursday, March 15th, 2018

  BSY Vs Siddaramaiah

  video | Tuesday, February 27th, 2018

  Gandhi nagar Ramesh Aravind News

  video | Wednesday, April 11th, 2018
  Suvarna Web Desk