ಅದೃಷ್ಟ ಇದ್ದರೆ ಐದಲ್ಲಾ, ಹತ್ತು ವರ್ಷ ಸಿಎಂ ಆಗ್ಲಿ ಬೇಡ ಅಂದವರಾರು? ಆದರೆ ಪಕ್ಷದ ತೀರ್ಮಾನಕ್ಕೆ ಮುಂಚಿತವಾಗಿಯೇ ನಾನೇ ಸಿಎಂ ಅಂತಾ ಹೇಳುವುದು ಎಷ್ಟು ಸರಿ ಅಂತಾ ಕಾಂಗ್ರೆಸ್ ಹಿರಿಯ ಮುಖಂಡ ಸಿ ಕೆ ಜಾಫರ್ ಷರೀಫ್ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರು (ಸೆ.28): ಅದೃಷ್ಟ ಇದ್ದರೆ ಐದಲ್ಲಾ, ಹತ್ತು ವರ್ಷ ಸಿಎಂ ಆಗ್ಲಿ ಬೇಡ ಅಂದವರಾರು? ಆದರೆ ಪಕ್ಷದ ತೀರ್ಮಾನಕ್ಕೆ ಮುಂಚಿತವಾಗಿಯೇ ನಾನೇ ಸಿಎಂ ಅಂತಾ ಹೇಳುವುದು ಎಷ್ಟು ಸರಿ ಅಂತಾ ಕಾಂಗ್ರೆಸ್ ಹಿರಿಯ ಮುಖಂಡ ಸಿ ಕೆ ಜಾಫರ್ ಷರೀಫ್ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಪಕ್ಷದ ತೀರ್ಮಾನಕ್ಕೆ ಮುಂಚಿತವಾಗಿ ನಾನೇ ಸಿಎಂ ಎಂದು ಹೇಳಿಕೊಳ್ಳುತ್ತಿರುವ ಸಿಎಂ ವಿರುದ್ಧ ವಾಗ್ದಾಳಿ ನಡೆಸುತ್ತಾ ಮಾತನಾಡಿದ ಅವರು ಕಾಂಗ್ರೆಸ್ ಪಕ್ಷಕ್ಕೆ ತನ್ನದೇ ಆದ ಪರಂಪರೆ ಇದೆ. ಸರ್ಕಾರ ನಡೆಸೋದೇ ಬೇರೆ, ಪಕ್ಷ ನಡೆಸೋದೇ ಬೇರೆ. ಸಿದ್ದರಾಮಯ್ಯಗಿಂತ ಬೇರೆ ಯಾರೇ ಆಗಲಿ ಪಕ್ಷಕ್ಕಿಂತ ದೊಡ್ಡವರಲ್ಲ ಅಂತಾ ಹರಿಹಾಯ್ದಿದ್ದಾರೆ.
