ಮುಖ್ಯಮಂತ್ರಿ ಎಚ್.ಡಿ,ಕುಮಾರಸ್ವಾಮಿ ಅವರಿಗೆ ಸುಪ್ರೀಂ ಕೋರ್ಟ್ ತಾತ್ಕಾಲಿಕವಾಗಿ ರಿಲೀಫ್ ನೀಡಿದೆ.
ಬೆಂಗಳೂರು, [ಅ.10]: ಜಂತಕಲ್ ಮೈನಿಂಗ್ ಕೇಸ್‌ನಲ್ಲಿ ಸದ್ಯಕ್ಕೆ ಮುಖ್ಯಮಂತ್ರಿ ಎಚ್.ಡಿ,ಕುಮಾರಸ್ವಾಮಿ ಅವರಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ.
ಜಂತಕಲ್ ಮೈನಿಂಗ್ ಪ್ರಕರಣದ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮತ್ತೊಂದು ತಿಂಗಳು ಮುಂದೂಡಿದೆ. ಇದ್ರಿಂದ ಕುಮಾರಸ್ವಾಮಿ ಕೊಂಚ ಮಟ್ಟಿಗೆ ನಿರಾಳರಾಗಿದ್ದಾರೆ.
ಎಚ್'ಡಿಕೆ ವಿರುದ್ಧದ ಜಂತಕಲ್ ಪ್ರಕರಣ: ಸುಪ್ರೀಂಗೆ ಮಧ್ಯಂತರ ವರದಿ ಸಲ್ಲಿಕೆ
ಈಗಾಗಲೇ ಜಂತಕಲ್ ಮೈನಿಂಗ್ ಪ್ರಕರಣದ ತನಿಖಾ ವರದಿಯನ್ನು ಎಸ್ಐಟಿ ಅಧಿಕಾರಿಗಳು ಸುಪ್ರೀಂ ಕೋರ್ಟ್ ಗೆ ಸಲ್ಲಿಸಿದ್ದರು. ಅದರಂತೆ ನಾಳೆ [ಗುರುವಾರ] ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ನಿಗದಿಯಾಗಿತ್ತು.
ವಿಚಾರಣೆಗೆ ಬರುವ ಒಂದು ದಿನ ಮುನ್ನವೇ ಒಂದು ತಿಂಗಳ ಕಾಲ ವಿಚಾರಣೆ ಮುಂದೂಡಿಕೆಯಾಗಿದೆ. ನವೆಂಬರ್ 14ಕ್ಕೆ ವಿಚಾರಣೆ ಮುಂದೂಡಿಕೆಯಾಗಿರುವುದಾಗಿ ಸುಪ್ರಿಂ ಕೋರ್ಟ್ ವೆಬ್ ಸೈಟ್ ನಲ್ಲಿ ಅಪ್ಡೇಟ್ ಆಗಿದೆ.
ಜಂತಕಲ್ ಮೈನಿಂಗ್ ಪ್ರಕರಣ: ಹೆಚ್'ಡಿಕೆಗೆ ನಿರೀಕ್ಷಣಾ ಜಾಮೀನು
ಜಂತಕಲ್ ಮೈನಿಂಗ್ ಕೇಸ್ ನಲ್ಲಿ ಸಿಎಂ ಕುಮಾರಸ್ವಾಮಿ ಸೇರಿ 13 ಮಂದಿ ಆರೋಪಿಗಳಾಗಿದ್ದಾರೆ. ಸದ್ಯದ ತನಿಖಾ ವರದಿಯನ್ನು ಎಸ್ಐಟಿ ಅಧಿಕಾರಿಗಳು ಸುಪ್ರೀಂ ಕೋರ್ಟ್ ಗೆ ಸಲ್ಲಿಸಿದ್ದು, ತನಿಖೆ ಮುಂದುವರೆಸಿದ್ದಾರೆ.
ಎಚ್'ಡಿಕೆಗೆ ಹೇಗೆ ಲಿಂಕ್?
2006ರಲ್ಲಿ ಎಚ್'ಡಿಕೆ ಸಿಎಂ ಆಗಿದ್ದ ಅವಧಿಯಲ್ಲೇ ಜಂತಕಲ್ ಮೈನಿಂಗ್ ಕಂಪನಿಯ ಗಣಿ ಲೈಸೆನ್ಸ್ ನವೀಕರಣದಲ್ಲಿ ಅಕ್ರಮ ನಡೆದಿದೆ. ಸಿಎಂ ಕಚೇರಿ ಸೂಚನೆ ಮೇರೆಗೆ ಗಣಿ ಲೈಸೆನ್ಸ್ ನವೀಕರಣ ಮಾಡಿದೆ ಎಂದು ಐಎಎಸ್ ಅಧಿಕಾರಿ ಗಂಗಾರಾಮ್ ಬಡೇರಿಯಾ ಹೇಳಿದ್ದರು.
