ಸಚಿವೆ ಸ್ಮೃತಿ ಇರಾನಿಯನ್ನು ‘ಆಂಟಿ’ ಎಂದು ಕರೆದ ನಟಿ ಶ್ರೀದೇವಿ ಪುತ್ರಿ ಜಾಹ್ನವಿ ಕ್ಷಮೆ ಕೋರಿದ ಘಟನೆ ನಡೆದಿದೆ.

ಮುಂಬೈ[ಡಿ.29]: ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರನ್ನು ಇತ್ತೀಚೆಗೆ ಭೇಟಿ ಮಾಡಿದ್ದ ನಟಿ ಶ್ರೀದೇವಿ ಅವರ ಮಗಳು ಜಾಹ್ನವಿ ಕಪೂರ್‌ ಅವರು, ಸ್ಮೃತಿ ಅವರನ್ನು ‘ಆಂಟಿ’ ಎಂದು ಕರೆದು ಸುದ್ದಿ ಮಾಡಿದ್ದಾರೆ. ಬಳಿಕ, ಹೀಗೆ ಕರೆದಿದ್ದಕ್ಕೆ ಸ್ಮೃತಿ ಅವರಲ್ಲಿ ಕ್ಷಮೆಯನ್ನೂ ಯಾಚಿಸಿದ್ದಾರೆ!

ಸ್ಮೃತಿ ಅವರನ್ನು ‘ಟೆಲಿಗ್ರಾಫ್‌’ ಆಂಗ್ಲ ದೈನಿಕವು ‘ಆಂಟಿ ನ್ಯಾಷನಲ್‌’ ಎಂಬ ತಲೆಬರಹದಲ್ಲಿ ಈ ಹಿಂದೆ ಟೀಕಿಸಿತ್ತು. ಹೀಗಾಗಿ ಸ್ಮೃತಿ ಅವರಿಗೆ ಆಂಟಿ ಎಂದು ಕರೆದರೆ ಕೋಪ ಬರುತ್ತದಂತೆ.

View post on Instagram

ಆದರೆ ತಮ್ಮನ್ನು ಜಾಹ್ನವಿ ‘ಆಂಟಿ’ ಎಂದು ಕರೆದಿದ್ದನ್ನು ಖುದ್ದು ಇನ್‌ಸ್ಟಾಗ್ರಾಂನಲ್ಲಿ ಹೇಳಿಕೊಂಡಿರುವ ಸ್ಮೃತಿ, ‘ಈಗಿನ ಕಾಲದ ಮಕ್ಕಳು ಏನೇನೋ ಮಾತಾಡ್ತವೆ. ಆಂಟಿ ಎಂದು ಕರೆದಿದ್ದಕ್ಕೆ ನನ್ನಲ್ಲಿ ಜಾಹ್ನವಿ ಕ್ಷಮೆ ಕೂಡ ಯಾಚಿಸಿದಳು’ ಎಂದು ಆಕೆಯ ಜತೆಗಿರುವ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ.