ಹಣ ಕೊಡದಿದ್ದರೆ ಮಾನಹಾನಿ ಸುದ್ದಿ ಪ್ರಸಾರ ಮಾಡುವುದಾಗಿ ಬೆದರಿಕೆ ಹಾಕಿದ ಹಿನ್ನಲೆಯಲ್ಲಿ ಮೊದಲ ಕಂತಿನ ಹಣ ಪಡೆದುಕೊಳ್ಳುವಾಗ ಕೋರಮಂಗಲ ಪೊಲೀಸರು ರೆಡ್'ಹ್ಯಾಂಡಾಗಿ ಬಂಧಿಸಿದ್ದಾರೆ.
ಬೆಂಗಳೂರು(ಏ.15): ಉದ್ಯಮಿಯೊಬ್ಬರಿಗೆ 10 ಕೋಟಿ ಬ್ಲ್ಯಾಕ್'ಮೇಲ್ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಜನಶ್ರೀ ವಾಹಿನಿಯ ಸಿಇಒ ಲಕ್ಷ್ಮಿಪ್ರಸಾದ್ ವಾಜಪೇಯಿ ಎಂಬುವವರನ್ನು ಬಂಧಿಸಿದ್ದಾರೆ.
ಹಣ ಕೊಡದಿದ್ದರೆ ಮಾನಹಾನಿ ಸುದ್ದಿ ಪ್ರಸಾರ ಮಾಡುವುದಾಗಿ ಬೆದರಿಕೆ ಹಾಕಿದ ಹಿನ್ನಲೆಯಲ್ಲಿ ಮೊದಲ ಕಂತಿನ ಹಣ ಪಡೆದುಕೊಳ್ಳುವಾಗ ಕೋರಮಂಗಲ ಪೊಲೀಸರು ರೆಡ್'ಹ್ಯಾಂಡಾಗಿ ಬಂಧಿಸಿದ್ದಾರೆ. ಸಿಇಒ ಜೊತೆ ಮಿಥುನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ವಾಜಪೇಯಿ ವಿರುದ್ಧ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಸಹ ದೂರು ದಾಖಲಾಗಿದೆ.
