ಮಾಜಿ ಸಚಿವ ಗಾಲಿ ಜನಾರ್ಧನ್ ರೆಡ್ಡಿ ಹಾಗೂ ಸಂಸದ ಶ್ರೀರಾಮುಲು ಇಂದು ಇರುಮಿಡಿ ಹೊತ್ತು ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ತೆರಳಿದ್ದಾರೆ. 

ಬೆಂಗಳೂರು (ಜೂ.15): ಮಾಜಿ ಸಚಿವ ಗಾಲಿ ಜನಾರ್ಧನ್ ರೆಡ್ಡಿ ಹಾಗೂ ಸಂಸದ ಶ್ರೀರಾಮುಲು ಇಂದು ಇರುಮಿಡಿ ಹೊತ್ತು ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ತೆರಳಿದ್ದಾರೆ. 

85 ಜನ ಬೆಂಬಲಿಗರೊಂದಿಗೆ ವಿಶೇಷ ವಿಮಾನದಲ್ಲಿ ತೆರಳಿದ ರೆಡ್ಡಿ, ಶ್ರೀರಾಮುಲು ಶಬರಿಮಲೈಗೆ ತೆರಳಿದ್ದಾರೆ. ಕಳೆದ 5 ವರ್ಷಗಳಿಂದ ಇರುಮುಡಿ ಸೇವೆ ಮಾಡುತ್ತಿರುವ ಶ್ರೀರಾಮುಲು, ಈ ಬಾರಿ ಜನಾರ್ಧನ್ ರೆಡ್ಡಿ ಅಯ್ಯಪ್ಪಸ್ವಾಮಿ ಬೆಟ್ಟ ಹತ್ತಲಿದ್ದಾರೆ. ನಾಳೆ ಬೆಳಗ್ಗೆ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಕಳೆದ 5 ವರ್ಷಗಳಿಂದ ಇರುಮುಡಿ ಸೇವೆ ಮಾಡಿದ್ದ ಶ್ರೀರಾಮುಲು ಸ್ನೇಹಿತ ಜನಾರ್ಧನ ರೆಡ್ಡಿ ಅವ್ರಿಗೂ ಇರುಮುಡಿ ಸೇವೆ ಮಾಡಲು ಸಲಹೆ ನೀಡಿದ್ದಾರೆ. ಇದೇ ವೇಳೆ ಜನರ ಒಳಿತಿಗಾಗಿ ನಾನು ಪ್ರತಿವರ್ಷ ಇರಮುಡಿ ಹೊತ್ತು ಅಯ್ಯಪ್ಪನ ದರ್ಶನ ಮಾಡುತ್ತೇನೆ ಎಂದು ಜನಾರ್ಧನ್ ರೆಡ್ಡಿ ತಿಳಿಸಿದ್ದಾರೆ.