ಇಂದಿರಾ ಗಾಂಧಿಗೆ ಹೊಡೆಯಲು ಹೋಗಿದ್ದ ಬಂಗಾರಪ್ಪ..!

First Published 27, Jan 2018, 8:06 AM IST
Janardhana Poojary  Book Release
Highlights

ಶುಕ್ರವಾರ ಮಂಗಳೂರಿನಲ್ಲಿ ಬಿಡುಗಡೆಯಾಗಿರುವ ಕೇಂದ್ರ ಮಾಜಿ ಸಚಿವ, ಹಿರಿಯ ಕಾಂಗ್ರೆಸ್ ನಾಯಕ ಜನಾರ್ದನ ಪೂಜಾರಿ ಆತ್ಮಕತೆ ‘ಸಾಲ ಮೇಳದ ಸಂಗ್ರಾಮ’ದಲ್ಲಿ ಉಲ್ಲೇಖವಾಗಿರುವ ಕುತೂಹಲಕಾರಿ ಅಂಶಗಳು.

ಬೆಂಗಳೂರು (ಜ.27): ಬಂಗಾರಪ್ಪ ಇಂದಿರಾಗೆ ಹೊಡೆಯಲು ಹೋದದ್ದು, ಬೆಂಚು ಹೊತ್ತು ತಂದ ಆಸ್ಕರ್ ಫರ್ನಾಂಡಿಸ್‌ರನ್ನು ಎಂಪಿ ಮಾಡಿದ್ದು, ಅಚಾನಕ್ಕಾಗಿ ಬಂದ ಇಂದಿರಾ ಗಾಂಧಿ ದೂರವಾಣಿ ಕರೆಯಿಂದ ರಾಜಕೀಯಕ್ಕೆ ಧುಮುಕಿದ್ದು,ಇಂದಿರಾ ಕುಟುಂಬಕ್ಕೆ ಆಪ್ತರಾಗಿದ್ದು, ನಾಲ್ಕು ಬಾರಿ ಒಲಿದ ಸಿಎಂ ಪಟ್ಟ ತಿರಸ್ಕರಿಸಿದ್ದು, ಸಾಲ ಮೇಳಗಳ ಹೋರಾಟ ಸಂದರ್ಭ ಕೊಲೆ ಯತ್ನಗಳು, ಇಂದಿರಾ ವಿರುದ್ಧ ನಾಯಕರ ಒಳಸಂಚು, ಚಿಕ್ಕಮಗಳೂರು ಉಪಚುನಾವಣೆ ಪ್ರಚಾರ ಸಂದರ್ಭ ಇಂದಿರಾ ಗಾಂಧಿ ಅವರನ್ನು ಎದುರಾಳಿಗಳಿಂದ ರಕ್ಷಿಸಿದ್ದು.

ಇವು ಶುಕ್ರವಾರ ಮಂಗಳೂರಿನಲ್ಲಿ ಬಿಡುಗಡೆಯಾಗಿರುವ ಕೇಂದ್ರ ಮಾಜಿ ಸಚಿವ, ಹಿರಿಯ ಕಾಂಗ್ರೆಸ್ ನಾಯಕ ಜನಾರ್ದನ ಪೂಜಾರಿ ಆತ್ಮಕತೆ ‘ಸಾಲ ಮೇಳದ ಸಂಗ್ರಾಮ’ದಲ್ಲಿ ಉಲ್ಲೇಖವಾಗಿರುವ ಕುತೂಹಲಕಾರಿ ಅಂಶಗಳು.

. ಇಂತಹ ಅನೇಕ ಅಂಶಗಳನ್ನು ಅವರು ತಮ್ಮ ಪುಸ್ತಕದಲ್ಲಿ ಉಲ್ಲೇಖ ಮಾಡಿದ್ದಾರೆ..

loader