ಮಾಜಿ ಸಚಿವ ಜನಾರ್ದನ ರೆಡ್ಡಿ ಕುಟುಂಬ ಸಮೇತ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿರುವ ಆಂಜನಾದ್ರಿ ಬೆಟ್ಟಕ್ಕೆ ಭೇಟಿ ನೀಡಿದ್ದಾರೆ. ಪತ್ನಿ ಅರುಣಾ ಲಕ್ಷ್ಮೀಯೊಂದಿಗೆ ಭೇಟಿ ನೀಡಿದ ರೆಡ್ಡಿ, 575 ಮೆಟ್ಟಿಲುಗಳನ್ನೇರಿ ದರ್ಶನ ಪಡೆದಿದ್ದಾರೆ.
ಕೊಪ್ಪಳ: ಮಾಜಿ ಸಚಿವ ಜನಾರ್ದನ ರೆಡ್ಡಿ ಕುಟುಂಬ ಸಮೇತ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿರುವ ಆಂಜನಾದ್ರಿ ಬೆಟ್ಟಕ್ಕೆ ಭೇಟಿ ನೀಡಿದ್ದಾರೆ. ಪತ್ನಿ ಅರುಣಾ ಲಕ್ಷ್ಮೀಯೊಂದಿಗೆ ಭೇಟಿ ನೀಡಿದ ರೆಡ್ಡಿ, 575 ಮೆಟ್ಟಿಲುಗಳನ್ನೇರಿ ದರ್ಶನ ಪಡೆದಿದ್ದಾರೆ.
ಆಂಜನೇಯ ಹುಟ್ಟಿದ ಸ್ಥಳವಗಿರುವ ಆಂಜನಾದ್ರಿ ಬೆಟ್ಟದಲ್ಲಿ ರೆಡ್ಡಿ ಕುಟುಂಬವು ಕುಂಕುಮಾರ್ಚನೆ, ಹನುಮಾನ ಹವನ ಪೂಜೆ, ಸುಂದರ ಕಾಂಡ ಪೂಜೆ ಹೀಗೆ ವಿವಿಧ ಬಗೆಯ ಪೂಜೆ ಸಲ್ಲಿಸಿದೆ. ಮೊದಲ ಶ್ರಾವಣ ಸೊಮವಾರ ಹಿನ್ನಲೆಯಲ್ಲಿ ರೆಡ್ಡಿ ಕುಟುಂಬ ಭೇಟಿ ನೀಡಿದೆ.
ಸಂಕಲ್ಪ ಮಾಡಿದಂತೆ ಪ್ರತಿ ವರ್ಷ ಕುಟುಂಬ ಸಮೇತ ಇಲ್ಲಿಗೆ ಬರುವ ಜನಾರ್ಧನ ರೆಡ್ಡಿಗೆ ಅರ್ಚಕ ವಿದ್ಯಾದಾಸ ಬಾಬಾ ಸನ್ಮಾನಿಸಿದರು.
