Asianet Suvarna News Asianet Suvarna News

8 ಸಾವಿರ ಕೋಟಿ ಒಡೆಯ ಎಂಥಾ ಪ್ಲಾನ್ ಮಾಡಿದ್ರು? ಇನ್ಕಮ್ ಟ್ಯಾಕ್ಸ್ ಹದ್ದಿನ ಕಣ್ಣಿಟ್ಟಿದ್ದು ಸುಳ್ಳಾ? : ಇಲ್ಲಿದೆ ಫುಲ್ ಡಿಟೇಲ್ಸ್

ರೆಡ್ಡಿ ತಮ್ಮ ಮಗಳ ಮದುವೆಯನ್ನ ಅದ್ಧೂರಿಯಾಗಿ ಮಾಡಿದ್ದಾರೆ ನಿಜ. ಆದ್ರೆ ಇಷ್ಟೋಂದು ಹಣ ರೆಡ್ಡಿಗೆ ಎಲ್ಲಿಂದ ಬಂತು? ರೆಡ್ಡಿ ನೂರಾರು ಕೋಟಿಯನ್ನ ಎಲ್ಲಿಟ್ಟಿದ್ರು? ಪ್ರಧಾನಿ ನರೇಂದ್ರ ಮೋದಿ, 1000 ಮತ್ತು 500 ರೂಪಾಯಿ ನೋಟ್​ಗಳನ್ನ​ ಬ್ಯಾನ್​ ಮಾಡಿದ್ದಾರೆ. ನೂರು ರೂಪಾಯಿ ಕೂಡ ಸಿಗ್ತಾ ಇಲ್ಲ ಅಂತ, ಜನ ಬ್ಯಾಂಕ್​ ಮುಂದೆ ನಿಂತ್ಕೊಂಡು ಹಣಕ್ಕಾಗಿ ಪರಿತಪಿಸ್ತಾ ಇದ್ದಾರೆ. ದೇಶವೇ ದುಡ್ಡಿಗಾಗಿ ಕಣ್ಣು ಬಾಯಿ ಬಿಡ್ತಾ ಇದೆ. ಅಂಥಾದ್ರಲ್ಲಿ, ರೆಡ್ಡಿ ತಮ್ಮ ಮಗಳ ಮದುವೆಗೆ ದುಡ್ಡನ್ನ ಎಲ್ಲಿಂದ ತಂದ್ರು? ಇದು ಈಗಲೂ ಎಲ್ಲರನ್ನ ಕಾಡ್ತಾ ಇದೆ. ಇದಕ್ಕೆ ಏನ್ ಮಾಡಿದ್ರು ಗೊತ್ತೆ

Janardhan reddy daughter marriage story

ಗಾಲಿ ಜನಾರ್ದನ ರೆಡ್ಡಿ, ಅದ್ಧೂರಿಯಾಗಿ ತಮ್ಮ ಮಗಳ ಮದುವೆಯನ್ನ ಮಾಡಿ ಮುಗಿಸಿದ್ದಾರೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ, ಇಂದ್ರಲೋಕವನ್ನೇ ಸೃಷ್ಟಿಸಿದ್ರು. ಸಾವಿರಾರು ಗಣ್ಯರು ಮದುವೆಗೆ ಬಂದು ವಧುವರರನ್ನ ಹರಸಿ, ಹಾರೈಸಿದ್ರು. ಇದೆಲ್ಲಾ ಈಗ ಹಳೆ ಕಥೆ. ಆದ್ರೆ ರೆಡ್ಡಿಗೆ ಅಷ್ಟೋಂದು ದುಡ್ಡು ಎಲ್ಲಿಂದ ಬಂತು ಅನ್ನೋದೇ ಇಂಟ್ರೆಸ್ಟಿಂಗ್​ ವಿಷ್ಯ. ಮಗಳ ಮದುವೆಗೆ ಅಂತ, ಜನಾರ್ದನ ರೆಡ್ಡಿ ಒಂದು ವರ್ಷದ ಹಿಂದೇನೇ ಪ್ಲಾನಿಂಗ್ ಮಾಡ್ತಿದ್ರು. ಮದುವೆಗೆ ಮೊದಲೇ ಕಪ್ಪುಹಣವನ್ನ ವೈಟ್​ ಮಾಡಿದ್ರಂತೆ ಗಾಲಿ ಜನಾರ್ಧನ ರೆಡ್ಡಿ. ಬ್ಲ್ಯಾಕ್​ ಮನಿಯನ್ನ ವೈಟ್ ಮಾಡಿದ್ದು ಹೇಗೆ ಗೊತ್ತಾ? 8 ಸಾವಿರ ಕೋಟಿ ಒಡೆಯ, ಬ್ಲ್ಯಾಕ್ ಮನಿ ಹಣ ಉಳಿಸಿಕೊಳ್ಳಲು ಎಂಥಾ ದಾರಿ ಹುಡುಕಿದ್ರು ಗೊತ್ತಾ? ಇದೇ ಕೋಟಿ ಕಲ್ಯಾಣದ ಕಥೆ.

ಜೈಲಿಗೆ ಹೋದರೂ ವರ್ಚಸ್ಸು ಕಳೆದುಕೊಳ್ಳಲಿಲ್ಲ

ಗಾಲಿ ಜನಾರ್ಧನ ರೆಡ್ಡಿ.. ಜೈಲಿಗೆ ಹೋಗಿ ಬಂದ್ರೂ ತನ್ನ ವರ್ಚಸ್ಸನ್ನ ಕಳೆದುಕೊಳ್ಳದೇ, ಮೊದಲಿನ ಚಾರ್ಮ್​ನಲ್ಲಿ ಅಬ್ಬರಿಸಿದ ರಾಜಕೀಯ ನಾಯಕ. ಬಳ್ಳಾರಿಯಲ್ಲಿ ಇಂದಿಗೂ ತನ್ನ ಪ್ರಭಾವವನ್ನು ಉಳಿಸಿಕೊಂಡಿರೋ ಗಣಿಧಣಿ. ಇದಕ್ಕೆ ಸಾಕ್ಷಿ ಎಂಬಂತಿತ್ತು, ನವೆಂಬರ್​ 16 ರಂದು, ಬೆಂಗಳೂರಿನ ಅರಮನೆ ಮೈದಾನದಲ್ಲಿ ಮಗಳು ಬ್ರಹ್ಮಣಿಯನ್ನು

ಹೈದ್ರಾಬಾದ್​ ಮೂಲದ ಉದ್ಯಮಿ ರಾಜೀವ್ ರೆಡ್ಡಿಯ ಜೊತೆ ಅದ್ದೂರಿಯಾಗಿ ವಿವಾಹ ನೆರವೇರಿಸಿದರು.

ಮದುವೆಗೆ ರಾಜಕೀಯ ಧುರೀಣರು ಆಗಮಿಸಿದ್ರು. ಸಿನಿಮಾ ತಾರೆಯರು ಬಂದು ನವವಧುವರರಿಗೆ ಹಾರೈಸಿದ್ರು.

ದುಡ್ಡು ಎಲ್ಲಿಂದ ತಂದ್ರು

ಮದುವೆ ಅಂದಾಕ್ಷಣ, ಅದ್ಧೂರಿತನ ಇರುತ್ತೆ. ಆರ್​ಕೆಸ್ಟ್ರಾ ಇರುತ್ತೆ. ಬಂದು ಬಳಗ ಇರುತ್ತೆ. ಸ್ನೇಹಿತರ ಶುಭ ಹಾರೈಕೆ ಇರುತ್ತೆ. ಆದ್ರೆ ರೆಡ್ಡಿ ಮಗಳ ಮದುವೆಯಲ್ಲಿ, ಒಂದು ಪ್ರಶ್ನೆ ಇದೆ. ಆ ಪ್ರಶ್ನೆ ಇಡೀ ದೇಶದ ಜನರೇ ಕೇಳ್ತಾ ಇದ್ದಾರೆ. ಅಷ್ಟಕ್ಕೂ ಆ ಪ್ರಶ್ನೆ ಏನು ಗೊತ್ತಾ? ರೆಡ್ಡಿ ತಮ್ಮ ಮಗಳ ಮದುವೆಯನ್ನ ಅದ್ಧೂರಿಯಾಗಿ ಮಾಡಿದ್ದಾರೆ ನಿಜ. ಆದ್ರೆ ಇಷ್ಟೋಂದು ಹಣ ರೆಡ್ಡಿಗೆ ಎಲ್ಲಿಂದ ಬಂತು? ರೆಡ್ಡಿ ನೂರಾರು ಕೋಟಿಯನ್ನ ಎಲ್ಲಿಟ್ಟಿದ್ರು? ಪ್ರಧಾನಿ ನರೇಂದ್ರ ಮೋದಿ, 1000 ಮತ್ತು 500 ರೂಪಾಯಿ ನೋಟ್​ಗಳನ್ನ​ ಬ್ಯಾನ್​ ಮಾಡಿದ್ದಾರೆ. ನೂರು ರೂಪಾಯಿ ಕೂಡ ಸಿಗ್ತಾ ಇಲ್ಲ ಅಂತ, ಜನ ಬ್ಯಾಂಕ್​ ಮುಂದೆ ನಿಂತ್ಕೊಂಡು ಹಣಕ್ಕಾಗಿ ಪರಿತಪಿಸ್ತಾ ಇದ್ದಾರೆ. ದೇಶವೇ ದುಡ್ಡಿಗಾಗಿ ಕಣ್ಣು ಬಾಯಿ ಬಿಡ್ತಾ ಇದೆ. ಅಂಥಾದ್ರಲ್ಲಿ, ರೆಡ್ಡಿ ತಮ್ಮ ಮಗಳ ಮದುವೆಗೆ ದುಡ್ಡನ್ನ ಎಲ್ಲಿಂದ ತಂದ್ರು? ಇದು ಈಗಲೂ ಎಲ್ಲರನ್ನ ಕಾಡ್ತಾ ಇದೆ. ಇದಕ್ಕೆ ಏನ್ ಮಾಡಿದ್ರು ಗೊತ್ತೆ

235 ಕೋಟಿಗೂ ಹೆಚ್ಚು ಖರ್ಚು

ಯಸ್.. ನವೆಂಬರ್​ 8 ನೇ ತಾರೀಕು ರಾತ್ರಿ 8 ಗಂಟೆಗೆ, ಪ್ರಧಾನಿ ನರೇಂದ್ರ ಮೋದಿ, ಸಡನ್ನಾಗಿ 1000 ಮತ್ತು 500 ರೂಪಾಯಿ ಮುಖಬೆಲೆಯ ಹಳೆ ನೋಟ್​ಗಳನ್ನ ಬ್ಯಾನ್ ಮಾಡಿದ್ರು. ಇದಾದ ನಂತರ ಇಡೀ ದೇಶವೇ ಕಂಗಾಲಾಗಿತ್ತು. ಖರ್ಚಿಗೆ ಕಾಸಿಲ್ಲದೇ, ನೂರು ರೂಪಾಯಿ ಸಿಕ್ರೂ ಸಾಕಪ್ಪ ಅಂತ, ಜನ ಬ್ಯಾಂಕ್​ ಮುಂದೆ ಕ್ಯೂ ನಿಲ್ಲುವಂಥ ಪರಿಸ್ಥಿತಿ ಬಂದೊದಗಿತ್ತು. ದೇಶವೇ ನೋಟ್​ ಸಿಗದೇ ತತ್ತರಿಸಿರುವಾಗ, ಗಾಲಿ ಜನಾರ್ದನ ರೆಡ್ಡಿ ಮಾತ್ರ, 235 ಕೋಟಿಗೂ ಹೆಚ್ಚು ಹಣವನ್ನ ಖರ್ಚು ಮಾಡಿ ಮಗಳ ಮದುವೆ ಮಾಡಿದ್ರು.

ಅನುಮಾನ ಹುಟ್ಟು ಹಾಕಿತ್ತು ಅದ್ದೂರಿ ಮದುವೆ..!

ಇಷ್ಟೋಂದು ಹಣವನ್ನ ರೆಡ್ಡಿ ತಂದಿದ್ದಾದ್ರೂ ಎಲ್ಲಿಂದ? ಅನ್ನೋ ಪ್ರಶ್ನೆ ಈಗ ಎಲ್ಲರನ್ನೂ ಕಾಡ್ತಾ ಇದೆ. ಮದುವೆಗೆ ಬೇಕಾಗಬಹುದು ಅಂತಾನೇ, ರೆಡ್ಡಿ ನೂರರ ನೋಟ್​ಗಳನ್ನ ಮೊದಲೇ ರೆಡಿ ಮಾಡ್ಕೊಂಡು ಇಟ್ಟುಕೊಂಡಿದ್ರಾ? ಸಾವಿರ, 500 ರೂಪಾಯಿ ನೋಟ್​ಗಳ ಬದಲಿಗೆ, ಎಲ್ಲವನ್ನೂ ನೂರರ ನೋಟ್​ಗಳಾಗಿ ಬದಲಾಯಿಸಿದ್ರಾ ಅನ್ನೋ ಅನುಮಾನ ಎಲ್ಲರನ್ನೂ ಕಾಡ್ತಾ ಇದೆ. ಒಂದು ವೇಳೆ ರೆಡ್ಡಿ, ಮೊದಲೇ ನೂರರ ನೋಟ್​ಗಳನ್ನು ಪಡೆದಿದ್ರು ಅನ್ನೋದೇ ಸತ್ಯವಾದ್ರೆ, ಸುಮಾರು 235 ಕೋಟಿ ಮೌಲ್ಯದ ನೂರರ ನೋಟ್​ಗಳು ರೆಡ್ಡಿಗೆ ಸಿಕ್ಕಿದ್ದು ಹೇಗೆ ಅನ್ನೋ ಯಕ್ಷ ಪ್ರಶ್ನೆ, ಬಹುತೇಕರನ್ನ ಕಾಡ್ತಾ ಇದೆ. ಈ ಪ್ರಶ್ನೆಗಳ ನಡುವಲ್ಲೇ, ರೆಡ್ಡಿ ಮಗಳ ಮದುವೆ ನಡೆದು ಹೋಗಿದೆ.

ಮದುವೆಗಾಗಿ ವಿಜಯನಗರ ಸಾಮ್ರಾಜ್ಯದ ಮರುಸ್ಥಾಪನೆ!

ತನ್ನನ್ನು ತಾನು ಆಧುನಿಕ ಶ್ರೀಕೃಷ್ಣದೇವರಾಯ ಎಂದುಕೊಂಡಿರೋ ಜನಾರ್ದನ ರೆಡ್ಡಿ, ತಮ್ಮ ಮಗಳು ಬ್ರಹ್ಮಣಿ ಮದುವೆಗಾಗಿ, ಅರಮನೆ ಮೈದಾನದ 36 ಎಕರೆ ಪ್ರದೇಶದಲ್ಲಿ, ವಿಜಯನಗರ ಸಾಮ್ರಾಜ್ಯದ ವೈಭವವನ್ನು ಮರುಸ್ಥಾಪನೆ ಮಾಡಿದ್ರು.ಈ ಸೆಟ್​ಗಾಗಿ ಸುಮಾರು ಒಟ್ಟು 25 ಕೋಟಿ ರೂಪಾಯಿ ಖರ್ಚು ಮಾಡಿದ್ದಾರೆ ಅಂತ ಹೇಳಲಾಗ್ತಿದೆ.

600 ಕಲಾಕಾರರಿಂದ ಸೃಷ್ಟಿಯಾಯ್ತು ಅದ್ಭುತವಾದ ಪುಷ್ಪವನ

ಇನ್ನು ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ, ವಿಜಯ ವಿಠಲ ದೇವಸ್ಥಾನವನ್ನು ನಿರ್ಮಿಸಿದ್ರು. ಜೊತೆಗೆ , ತಿರುಪತಿಯ ಆರಾಧಕರಾಗಿರೋ ಜನಾರ್ಧನ ರೆಡ್ಡಿ, ತಮ್ಮ ಮಗಳ ಮದುವೆಗಾಗಿ ಶ್ರೀ ವೆಂಕಟೇಶ್ವರನನ್ನೇ ಕರೆತಂದಿದ್ರು. ಕಲಾವಿದರಿಂದ ಬಾಲಾಜಿ  ದೇಗುಲವನ್ನೂ ಇಲ್ಲಿ ನಿರ್ಮಿಸಿದ್ರು. ಸುಮಾರು 600 ಕ್ಕೂ ಹೆಚ್ಚು ಹೈದ್ರಾಬಾದ್ ಕಲಾವಿದರು, ರೆಡ್ಡಿ ಮಗಳ ಮದುವೆಗಾಗಿ ದುಡಿದಿದ್ರು. ಈ ಇಂದ್ರಲೋಕದಲ್ಲಿ ಅದ್ಭುತವಾದ ಪುಷ್ಪವನವನ್ನ ಸೃಷ್ಟಿ ಮಾಡಿದ್ರು..

ಒಡವೆ  ವಸ್ತ್ರಗಳಿಗೆ  150 ಕೋಟಿ ವೆಚ್ಚ

* ಪ್ರಾಚೀನ  ಶೈಲಿಯ ಆಭರಣಕ್ಕೆ 150 ಕೋಟಿ

* ಬ್ರಹ್ಮಣಿಯ ನೆಕ್​ಲೇಸ್​ಗೆ  25 ಕೋಟಿ

* ಬ್ರಹ್ಮಣಿಯ ಒಂದು ಸೀರಿಯ ಬೆಲೆ  40 ಲಕ್ಷ

ಬ್ರಹ್ಮಣಿ ಮೈಮೇಲಿರೋ ಒಡವೆ ವಸ್ತ್ರಗಳಿಗೇನೇ 150 ಕೋಟಿ ರೂಪಾಯಿ ವೆಚ್ಚ ಮಾಡಿದ್ದಾರೆ ಅಂತ ಹೇಳಲಾಗುತ್ತಿದೆ. ಪ್ರಾಚೀನ  ಶೈಲಿಯ ಆಭರಣ ಆಗಿದ್ರಿಂದ, 150 ಕೋಟಿ ರೂಪಾಯಿ ಖರ್ಚು ಮಾಡಿದ್ದಾರೆ ಅನ್ನೋ ಸುದ್ದಿ ಇದೆ. ಇಷ್ಟೇ ಅಲ್ಲ, ಒಂದು ನೆಕ್​ಲೇಸ್​ ಬೆಲೇನೇ  25 ಕೋಟಿ ಇದೆ. ಇನ್ನು ಬ್ರಹ್ಮಣಿ ಉಟ್ಕೊಂಡಿದ್ದ ಒಂದು ಸೀರಿ ಬೆಲೆ ನೇ ಬರೋಬ್ಬರಿ 40 ಲಕ್ಷ.

ಮೇಕಪ್ಗೆ  30 ಲಕ್ಷ ರೂ. ವೆಚ್ಚ

* 40-50 ಜನ  ಮೇಕಪ್ ಮೆನ್​ಗಳನ್ನು ಕರೆಸಲಾಗಿತ್ತು

* ಒಬ್ಬರಿಗೆ  ಪ್ರತಿದಿನಕ್ಕೆ  50,000 ರೂ. ನೀಡಲಾಗಿತ್ತು

* ಮದುಮಗಳ ಮೇಕಪ್​ಗೆ  6 ಲಕ್ಷ 

ಬ್ರಹ್ಮಣಿ ಮದುವೆಗೆ ಅಂತಾನೇ ಸುಮಾರು 40 ರಿಂದ 50 ಮಂದಿ ಮೇಕಪ್​ಮೆನ್​ಗಳನ್ನ ಕರೆಸಲಾಗಿತ್ತು. ಒಬ್ಬೊಬ್ಬೊಬ್ಬರಿಗೆ ತಲಾ 50 ಸಾವಿರ ರೂಪಾಯಿಗಳನ್ನ ನೀಡಲಾಗಿತ್ತು. ಮೇಕಪ್​​ಗೆ ಅಂತಾನೇ ಒಟ್ಟು 30 ಲಕ್ಷ ರೂಪಾಯಿಗಳನ್ನ ಖರ್ಚು ಮಾಡಲಾಗಿದೆ. ಅದ್ರಲ್ಲೂ ಮಧುಮಗಳ ಮೇಕಪ್​ಗೇನೆ ಸುಮಾರು 6 ಲಕ್ಷ ಖರ್ಚಾಗಿದೆ.

ಕೇಳಿದ್ರಲ್ಲಾ.. ಬರೀ ಮೇಕಪ್​ಗೆ 30 ಲಕ್ಷ ಖರ್ಚಾಗಿದೆ. ಒಡವೆಗೆ 150 ಕೋಟಿ ವೆಚ್ಚ ಮಾಡಿದ್ದಾರೆ. ವಿಜಯನಗರ ಸಾಮ್ರಾಜ್ಯವನ್ನ ಮರುಸ್ಥಾಪಿಸೋದಕ್ಕೆ 25 ಕೋಟಿ ಕೊಟ್ಟಿದ್ದಾರೆ.

ಅಡುಗೆಗೆ ಖರ್ಚಾಗಿತ್ತು 60  ಕೋಟಿ

* ಕಲ್ಯಾಣೋತ್ಸವದಲ್ಲಿ ಐವತ್ತು ಸಾವಿರ ಗಣ್ಯರು ಭಾಗಿ

* ಮದುವೆ ಮನೆಯಲ್ಲಿದ್ದವು 16 ವಿಧದ  ಸಿಹಿ ಖಾದ್ಯಗಳು

*  ಒಂದು ಪ್ಲೇಟ್​ಗೆ  3000 ರೂಪಾಯಿ

ಇನ್ನು ಒಂದು ಅಂದಾಜಿನ ಪ್ರಕಾರ, ಸುಮಾರು 50 ಸಾವಿರ ಗಣ್ಯಾತಿ ಗಣ್ಯರು ರೆಡ್ಡಿ ಮಗಳ ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ರು ಅಂತ ಹೇಳಲಾಗುತ್ತಿದೆ. ಎಲ್ಲಾ ಗಣ್ಯರಿಗೂ ಇಷ್ಟವಾಗೋ ಥರ, ಸುಮಾರು 16 ವಿಧದ ಸಿಹಿ ಖಾದ್ಯಗಳನ್ನ ಮದುವೆ ಮನೆಯಲ್ಲಿ ಮಾಡಿಸಲಾಗಿತ್ತು. ಈ ಮದುವೆ ಮನೆ ಊಟ ಎಷ್ಟು ಕಾಸ್ಟ್ಲಿ ಅಗಿತ್ತು ಅಂದ್ರೆ, ಒಂದು ಪ್ಲೇಟ್​ ಊಟದ ಬೆಲೆನೇ ಬರೋಬ್ಬರಿ 3000 ರೂಪಾಯಿ ಇತ್ತು. ಬರೀ ಅಡುಗೆಗೆ ಅಂತಾನೇ  ಸುಮಾರು 60 ಕೋಟಿ ಖರ್ಚು ಮಾಡಿದ್ರು ರೆಡ್ಡಿಗಾರು..

ಡಿಜೆ, ಲೆನ್ಸೆಮನ್ಗಳಿಗೆ 20 ಲಕ್ಷ ವೆಚ್ಚ

* ಸುಗಮ ಸಂಗೀತ ಕಾರ್ಯಕ್ರಮಕ್ಕೆ  8 ಲಕ್ಷ

* 15 ಮಂದಿ ಛಾಯಾಗ್ರಾಹಕರಿಗೆ  12 ಲಕ್ಷ

ರೆಡ್ಡಿ ಮಗಳ ಮದುವೆಯಲ್ಲಿ ಡಿಜೆ ಮತ್ತು ಸಂಗೀತ ಸುಧೆ ಹರೀತಾನೇ ಇತ್ತು. ತೆಲುಗು ಸಿನಿಮಾ ರಂಗದ ಗಣ್ಯರು, ಕನ್ನಡ ಚಿತ್ರರಂಗದ ನಟ ನಟಿಯರು ಬ್ರಹ್ಮಣಿ ಮದುವೆಯಲ್ಲಿ ಹಾಡಿ ಕುಣಿದು ಸಂಭ್ರಮಿಸಿದ್ರು. ಸುಗಮ ಸಂಗೀತಕ್ಕೆ ಕಾರ್ಯಕ್ರಮಕ್ಕೆ ಅಂತಾನೇ ಸುಮಾರು 8 ಲಕ್ಷ ವೆಚ್ಚ ಮಾಡಲಾಗಿದೆ ಅಂತ ಹೇಳಲಾಗ್ತಿದೆ. ಇನ್ನು ಮದುವೆ ಸಂಭ್ರಮವನ್ನ ಸೆರೆ ಹಿಡಿಯೋದಕ್ಕೆ ಅಂತ 15 ಮಂದಿ ಛಾಯಾಗ್ರಾಹಕರುಗಳನ್ನ ನೇಮಿಸಲಾಗಿತ್ತು. ಇದಕ್ಕಾಗಿ ಬರೋಬ್ಬರಿ 12 ಲಕ್ಷ ವೆಚ್ಚ ಮಾಡಿದ್ರು ರೆಡ್ಡಿಗಾರು..

ಭದ್ರತೆಗಾಗಿ ಖರ್ಚು ಮಾಡಿದ್ರು 60 ಲಕ್ಷ

* 5 ದಿನಗಳಿಗೆ  3000 ಸೆಕ್ಯೂರಿಟಿ  ಸಿಬ್ಬಂದಿ ನಿಯೋಜನೆ

* ಒಂದು ದಿನಕ್ಕೆ  3000 ಸೆಕ್ಯೂರಿಟಿಗೆ 12 ಲಕ್ಷ  ಪಾವತಿ

ಇನ್ನು 5 ದಿನಗಳ ಮದುವೆ ಸಂಭ್ರಮಕ್ಕೆ ಭದ್ರತೆ ನೀಡೋದಕ್ಕೆ ಅಂತಾನೇ, ಸುಮಾರು 3 ಸಾವಿರ ಸೆಕ್ಯೂರಿಟಿ ಗಾರ್ಡ್​ಗಳನ್ನ ನಿಯೋಜಿಸಲಾಗಿತ್ತು. ಇದ್ರಲ್ಲಿ ಬೌನ್ಸರ್​ಗಳೂ ಇದ್ರು. ಎಲ್ಲರಿಗೂ ಸೇರಿ, ಭದ್ರತೆಗೆ ಅಂತಾನೇ ದಿನಕ್ಕೆ 12 ಲಕ್ಷ ಪಾವತಿಸಿದ್ದಾರೆ ಅಂತ ಹೇಳಲಾಗ್ತಿದೆ. ಅಂದ್ರೆ 5 ದಿನಕ್ಕೆ 60 ಲಕ್ಷ ಬರೀ ಭದ್ರತೆಗೆ ಕೊಟ್ಟಿದ್ದಾರಂತೆ. ಇನ್ನು ಮದುವೆಗೆ ಬಂದ ಅತಿಥಿಗಳಿಗೆ ಪಾನ್​ ಬೀಡಾ ಕೊಡೋದಕ್ಕೆ ಅಂತಾನೇ, ಮುಂಬೈನಿಂದ ಮಾಡೆಲ್​ಗಳು ಬಂದಿದ್ರು.. ಬ್ರೆಜಿಲ್​, ರಷ್ಯಾ, ಜರ್ಮನಿಯಿಂದ ನೃತ್ಯಗಾರ್ತಿಯರು ಆಗಮಿಸಿದ್ರು. ಹೀಗೆ ತುಂಬಾ ಅದ್ಧೂರಿಯಾಗಿ ಮಗಳ ಮದುವೆ ಮಾಡಿರೋ ಗಾಲಿ ಜನಾರ್ದನ ರೆಡ್ಡಿ, ಇದಕ್ಕಾಗಿ ಖರ್ಚು ಮಾಡಿದ್ದು ಬರೋಬ್ಬರಿ 235 ಕೋಟಿ ಅಂತ ಹೇಳಲಾಗುತ್ತಿದೆ.

8 ಸಾವಿರ ಕೋಟಿ ಆಸ್ತಿ

ಒಂದು ಅಂದಾಜಿನ ಪ್ರಕಾರ, ಜನಾರ್ಧನ ರೆಡ್ಡಿ  8 ಸಾವಿರ ಕೋಟಿಗೆ ಒಡೆಯ ಅಂತ ಅಂದಾಜಿಸಲಾಗ್ತಿದೆ. ಅದರಲ್ಲಿ ಮಗಳ ಮದುವೆಗೆ ಅಂತ 400 ಕೋಟಿ ರೂಪಾಯಿಗಳನ್ನ ವೈಟ್​ ಮಾಡಿಕೊಂಡಿದ್ರಂತೆ ಗಾಲಿ ಜನಾರ್ಧನ ರೆಡ್ಡಿ

ಒಂದು ವರ್ಷದ ಹಿಂದೆ ನಡೆದ ಪ್ಲ್ಯಾನ್

ಇದಕ್ಕೆಲ್ಲಾ ದುಡ್ಡು ಎಲ್ಲಿಂದ ಬಂತು ಗೊತ್ತಾ? ಒಂದು ವರ್ಷದ ಹಿಂದೇನೇ ಜನಾರ್ದನ ರೆಡ್ಡಿ ತಮ್ಮ ಬ್ಲ್ಯಾಕ್​ ಮನಿಯನ್ನ ವೈಟ್​ ಮಾಡಿಕೊಂಡಿದ್ರಂತೆ. 8 ಸಾವಿರ ಕೊಟಿಯ ಒಡೆಯ ಬ್ಲ್ಯಾಕ್​ ಮನಿಯನ್ನ ವೈಟ್ ಮನಿ ಮಾಡ್ಕೊಂಡು, ಯಾರಿಗೂ ಜಗ್ಗದೇ, ಇನ್​ಕಂಟ್ಯಾಕ್ಸ್​​ಗೂ ಹೆದರದೇ ಮಗಳ ಮದುವೆಯನ್ನ ಅದ್ಧೂರಿಯಾಗಿ ಮದುವೆ ಮಾಡಿದ್ರು ಅಂತ ಹೇಳಲಾಗ್ತಿದೆ. ಮೋದಿ ಅಧಿಕಾರಕ್ಕೆ  ಬಂದಾಗ, ಎಲ್ಲಾ ಕಪ್ಪು ಕುಬೇರರಿಗೆ ಒಂದು ಖಡಕ್ ಎಚ್ಚರಿಕೆ ಕೊಟ್ಟಿದ್ರು. ಆ ಖಡಕ್​ ಎಚ್ಚರಿಕೆಯನ್ನ ಸೂಕ್ಷ್ಮವಾಗಿ ಅವಲೋಕಿಸಿದ ಜನಾರ್ದನ ರೆಡ್ಡಿ, ಅವತ್ತೇ ತಮ್ಮ ಬ್ಲ್ಯಾಕ್​ ಮನಿಯನ್ನ ವೈಟ್ ಮಾಡಿಕೊಳ್ಳೋದಕ್ಕೆ ಪ್ಲಾನ್ ಮಾಡಿದ್ರು ಅಂತ ಹೇಳಲಾಗ್ತಿದೆ.

ಮೋದಿ ಅಧಿಕಾರಕ್ಕೆ ಬರೋದಕ್ಕೆ ಮೊದಲೇ, ಬ್ಲಾಕ್ ಮನಿ ವಿರುದ್ಧ ಗುಡುಗ್ತಾ ಇದ್ರು. ಪ್ರಧಾನಿಯಾದ್ಮೇಲಂತೂ, ಕಪ್ಪು ಹಣದ ಕುಬೇರರ ವಿರುದ್ಧ ಸಮರವನ್ನೇ ಸಾರಿದ್ರು. ಇದರ ನಡುವಲ್ಲೇ ಕೊನೇದಾಗಿ ಒಂದು ಚಾನ್ಸ್​ ಕೊಟ್ಟಿದ್ರು. ನಿಮ್ಮಲ್ಲಿರೋ ಕಪ್ಪು ಹಣವನ್ನು ಘೋಷಣೆ ಮಾಡಿ. ಸರ್ಕಾರಕ್ಕೆ ಲೆಕ್ಕ ಕೊಡಿ. ದಂಡ ಕಟ್ಟೋ ಮೂಲಕ, ವೈಟ್ ಮಾಡ್ಕೊಳ್ಳಿ ಅಂತ ಹೇಳಿದ್ರು. ಸೆಪ್ಟೆಂಬರ್​ 30ರ ಒಳಗೆ ಬ್ಲ್ಯಾಕ್ ಮನಿಯನ್ನ ಘೋಷಣೆ ಮಾಡ್ಕೊಳ್ಳಿ.. ಸರ್ಕಾರಕ್ಕೆ ಟ್ಯಾಕ್ಸ್​ ಕಟ್ಟಿ ನಿಮ್ಮ ಹಣವನ್ನ ವೈಟ್ ಮಾಡ್ಕೊಳ್ಳಿ. ಇಲ್ಲ ಅಂದ್ರೆ ಸರ್ಕಾರಕ್ಕೆ ವಂಚಿಸೋ ಯಾರೊಬ್ಬರನ್ನೂ ನಾವು ಬಿಡೋದಿಲ್ಲ ಅಂದಿದ್ರು ಮೋದಿ,. ಮೋದಿ ಮಾತು ಕೇಳ್ತಾ ಇದ್ದಂತೆ, ಹೈದ್ರಾಬಾದ್​ನ ನಾಲ್ವರು ಉದ್ಯಮಿಗಳು ತಮ್ಮ ಕಪ್ಪು ಹಣವನ್ನು ಘೋಷಿಸಿಕೊಂಡಿದ್ರು. ಅದರಲ್ಲಿ ಓರ್ವ ಹೈದ್ರಾಬಾದ್ ಉದ್ಯಮಿ, 10 ಸಾವಿರ ಕೋಟಿ ಬ್ಲ್ಯಾಕ್ ಮನಿಯನ್ನ ಘೋಷಣೆ ಮಾಡಿಕೊಂಡಿದ್ದ.

ಸರ್ಕಾರದ ನಿಯಮದಂತೆ ಟ್ಯಾಕ್ಸ್​ ಮತ್ತು ದಂಡ ಪಾವತಿ ಮಾಡಿ, ಬ್ಲ್ಯಾಕ್ ಮನಿಯನ್ನ ವೈಟ್ ಮಾಡ್ಕೊಂಡಿದ್ರು ಹೈದ್ರಾಬಾದ್​ನ ನಾಲ್ವರು ಉದ್ಯಮಿಗಳು. ಹೀಗೆ ಕಪ್ಪು ಹಣವನ್ನ ವೈಟ್ ಮಾಡಿಕೊಂಡಿದ್ದ ಉದ್ಯಮಿಗಳಲ್ಲಿ ಗಾಲಿ ಜನಾರ್ದನ ರೆಡ್ಡಿ ಕೂಡ ಒಬ್ಬರು ಎಂಬ ಸುದ್ದಿ ಇದೆ. ಗಾಲಿ ಜನಾರ್ದನ ರೆಡ್ಡಿ ಹತ್ರ ಸುಮಾರು 8 ಸಾವಿರ ಕೋಟಿ ಬೆಲೆ ಬಾಳೋ ಆಸ್ತಿ ಇದೆ ಅಂತ ಹೇಳಲಾಗುತ್ತಿದೆ. ಇದರಲ್ಲಿ ಶೇ.20 ರಷ್ಟು ಕಪ್ಪುಹಣವನ್ನು ಸರ್ಕಾರದ ನಿಯಮದಂತೆ ಘೋಷಣೆ ಮಾಡಿಕೊಂಡು, ತೆರಿಗೆ ಮತ್ತು ದಂಡವನ್ನು ಕಟ್ಟಿ ವೈಟ್ ಮಾಡಿಕೊಂಡಿದ್ದಾರೆ ಅಂತ ಹೇಳಲಾಗುತ್ತಿದೆ. ಇದೇ ಹಣದಲ್ಲಿ ರೆಡ್ಡಿ  ತಮ್ಮ ಮಗಳ ಮದುವೆಯನ್ನ ಅದ್ಧೂರಿಯಾಗಿ ಮಾಡಿ ಮುಗಿಸಿದ್ದಾರೆ ಅನ್ನೋ ಸುದ್ದಿ ಇದೀಗ ಎಲ್ಲೆಡೆ ಹರಿದಾಡುತ್ತಿದೆ.

ಲೆಕ್ಕ ಕೊಡ್ತಾರಂತೆ

ರೆಡ್ಡಿ ತಮ್ಮ ಮಗಳ ಮದುವೆಯನ್ನ ಅದ್ದೂರಿಯಾಗಿ ಮಾಡಿ ಮುಗಿಸಿದ್ದಾರೆ. ಇನ್ನು ಇನ್​ಕಂ ಟ್ಯಾಕ್ಸ್​ ಅಧಿಕಾರಿಗಳೂ ಈ ಅದ್ಧೂರಿ ಮದುವೆ ಮೇಲೆ ಕಣ್ಣಿಟ್ಟಿದ್ರು ಅಂತ ಹೇಳಲಾಗ್ತಿದೆ. ಆದ್ರೆ, ಎಲ್ಲಾ ಥರದ ಡಾಕ್ಯುಮೆಂಟ್ಸ್​ ಇಟ್ಟಿದ್ದೀವಿ. ಇನ್​ಕಂಟ್ಯಾಕ್ಸ್​ಗೆ ಎಲ್ಲಾ ಲೆಕ್ಕಾನೂ ಕೊಡ್ತೀವಿ ಅಂತ ಹೇಳಿದ್ದಾರೆ ರೆಡ್ಡಿಗಾರು. ಆದ್ರೆ ಕೃಷ್ಣನ ಲೆಕ್ಕಾ ಕೊಡ್ತಾರಾ ಅಥವ ರಾಮನ ಲೆಕ್ಕಾ ಕೊಡ್ತಾರಾ ಅನ್ನೋದು ಕಾದು ನೋಡ್ಬೇಕು.

ವರದಿ : ಶೇಖರ್ ಪೂಜಾರ್, ಸುವರ್ಣ ನ್ಯೂಸ್

Follow Us:
Download App:
  • android
  • ios