ಮನೆಗಾಗಿ ಜನಾರ್ದನ ರೆಡ್ಡಿ ಹುಡುಕಾಟ

First Published 15, Feb 2018, 8:15 AM IST
Janardhan Reddy Aims to Prepare Karnataka Assembly poll
Highlights

ಮೊಳಕಾಲ್ಮುರು ತಾಲೂಕಿನಲ್ಲಿ ಬುಧವಾರ ಇಂತಹದ್ದೊಂದು ಸುದ್ದಿ ಹರಿದಾಡಿತ್ತು. ಗಣಿ ಪ್ರಕರಣಗಳ ಹಿನ್ನಲೆಯಲ್ಲಿ ನ್ಯಾಯಾಲಯದ ಅನುಮತಿ ಇಲ್ಲದೆ ಜನಾರ್ದನ ರೆಡ್ಡಿ ಬಳ್ಳಾರಿ ಜಿಲ್ಲೆ ಪ್ರವೇಶಿಸುವಂತಿಲ್ಲ. ಹಾಗಾಗಿ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರಿನ ರಾಂಪುರ ಗ್ರಾಮದಲ್ಲಿ ಜನಾರ್ದನ ರೆಡ್ಡಿ ಬಾಡಿಗೆಗೆ ಅಥವಾ ಲೀಸ್‌ಗೆ ಮನೆ ಪಡೆದು ಮುಂದಿನ ವಿಧಾಸಭೆ ಚುನಾವಣೆಗೆ ತಂತ್ರಗಾರಿಕೆ ರೂಪಿಸುತ್ತಾರೆ ಎಂಬುದು ಹೈಲೈಟ್ಸ್‌.

ಮೊಳಕಾಲ್ಮುರು : ಮೊಳಕಾಲ್ಮುರು ತಾಲೂಕಿನಲ್ಲಿ ಬುಧವಾರ ಇಂತಹದ್ದೊಂದು ಸುದ್ದಿ ಹರಿದಾಡಿತ್ತು. ಗಣಿ ಪ್ರಕರಣಗಳ ಹಿನ್ನಲೆಯಲ್ಲಿ ನ್ಯಾಯಾಲಯದ ಅನುಮತಿ ಇಲ್ಲದೆ ಜನಾರ್ದನ ರೆಡ್ಡಿ ಬಳ್ಳಾರಿ ಜಿಲ್ಲೆ ಪ್ರವೇಶಿಸುವಂತಿಲ್ಲ. ಹಾಗಾಗಿ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರಿನ ರಾಂಪುರ ಗ್ರಾಮದಲ್ಲಿ ಜನಾರ್ದನ ರೆಡ್ಡಿ ಬಾಡಿಗೆಗೆ ಅಥವಾ ಲೀಸ್‌ಗೆ ಮನೆ ಪಡೆದು ಮುಂದಿನ ವಿಧಾಸಭೆ ಚುನಾವಣೆಗೆ ತಂತ್ರಗಾರಿಕೆ ರೂಪಿಸುತ್ತಾರೆ ಎಂಬುದು ಹೈಲೈಟ್ಸ್‌. ಇದು ಬಳ್ಳಾರಿ ಜಿಲ್ಲೆಯ ಗಡಿಭಾಗದಲ್ಲಿರುವುದರಿಂದ ಕಾರ್ಯತಂತ್ರ ರೂಪಿಸಲು ಅನುಕೂಲಕಾರಿ ಎಂದು ಹೇಳಲಾಗಿದೆ.

ರಾಂಪುರ ಅಮೃತ ಹೋಟೆಲ್‌, ತಮ್ಮೇನಹಳಿ ಎಸ್‌ಆರ್‌ಎಸ್‌ ಫಾಮ್‌ರ್‍ಹೌಸ್‌, ಶಿರೇಕೊಳ ಗ್ರಾಮದ ನಾಯ್ಡು ಪಾಮ್‌ರ್‍ಹೌಸ್‌ ಸೇರಿದಂತೆ ಹಲವು ಕಡೆಗಳಲ್ಲಿ ಬಳ್ಳಾರಿಯ ಮಾಜಿ ಶಾಸಕ ಸೋಮ ಶೇಖರರೆಡ್ಡಿ, ಮಾಜಿ ಸಂಸದ ಸಣ್ಣ ಪಕೀರಪ್ಪ, ಸ್ಥಳೀಯ ಮುಖಂಡ ಎಚ್‌.ಟಿ. ನಾಗರೆಡ್ಡಿ ಸೇರಿದಂತೆ ಹಲವರು ಪರಿಶೀಲನೆ ನಡೆಸಿದ್ದು ಈವರೆಗೂ ಅಂತಿಮಗೊಳಿಸಿಲ್ಲ ಎನ್ನಲಾಗಿದೆ. ಜನಾರ್ದನ ರೆಡ್ಡಿ ತಾಲೂಕಿನಲ್ಲಿ ವಾಸ ಮಾಡಿದರೆ ಬಿಜೆಪಿಗೆ ಬಲ ಸಿಕ್ಕಿದಂತಾಗುತ್ತದೆ ಎನ್ನುವ ಭೀತಿಯಿಂದ ಕಾಂಗ್ರೆಸ್‌ ನ ಸ್ಥಳೀಯ ಕೆಲ ಮುಖಂಡರಿಂದ ವಿರೋಧವೂ ವ್ಯಕ್ತವಾಗುತ್ತಿವೆ ಎನ್ನುವ ಮಾತುಗಳು ಕೂಡ ತಾಲೂಕಲ್ಲಿ ಕೇಳಿಬರುತ್ತಿವೆ.

ಜನಾರ್ದನ ರೆಡ್ಡಿ ರಾಂಪುರದಲ್ಲಿ ಮನೆ ಮಾಡಿದರೆ ಮೊಳಕಾಲ್ಮುರು ಹಾಗೂ ಚಳ್ಳಕೆರೆ ವಿಧಾಸನಸಭೆ ಕ್ಷೇತ್ರಗಳನ್ನು ಗೆಲ್ಲಿಸಿಕೊಳ್ಳುವ ಜವಾಬ್ದಾರಿಯನ್ನು ಪಕ್ಷವು ಅವರಿಗೆ ವಹಿಸುತ್ತಿದೆ ಎನ್ನಲಾಗಿದೆ. ಮೊಳಕಾಲ್ಮುರು, ಚಳ್ಳಕೆರೆ ವಿಧಾಸಭೆ ಕ್ಷೇತ್ರಗಳು ಪರಿಶಿಷ್ಟಪಂಗಡ (ನಾಯಕ) ಮೀಸಲಾಗಿದ್ದು ಶ್ರೀರಾಮುಲು ಅವರನ್ನು ಈ ಕ್ಷೇತ್ರಗಳಲ್ಲಿ ಸುತ್ತಾಡಿಸಿ ಗೆಲವು ದಾಖಲು ಮಾಡುವ ಉದ್ದೇಶ ಹೊಂದಲಾಗಿದೆ ಎನ್ನಲಾಗಿದೆ.

loader