Asianet Suvarna News Asianet Suvarna News

ಭಾರತ್ ಬಂದ್ ಗೆ ಹಿರಿಯ ಕಾಂಗ್ರೆಸ್ ಮುಖಂಡ ವಿರೋಧ

ದೇಶದಲ್ಲಿ ಏರಿಕೆಯಾಗುತ್ತಿರುವ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯನ್ನು ಖಂಡಿಸಿ ಇದೀಗ ವಿಪಕ್ಷಗಳು ಬಂದ್ ಗೆ ಕರೆ ನೀಡಿದ್ದು ಇದಕ್ಕೆ ಸ್ವತಃ ಕಾಂಗ್ರೆಸ್ ಹಿರಿಯ ಮುಖಂಡರೇ ವಿರೋಧ ವ್ಯಕ್ತಪಡಿಸಿದ್ದಾರೆ. 

Janardhan Poojary Oppose Bharat Bandh
Author
Bengaluru, First Published Sep 10, 2018, 7:28 AM IST

ಮಂಗಳೂರು :  ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ವಿರೋಧಿಸಿ ವಿಪಕ್ಷಗಳು ನಡೆಸುತ್ತಿರುವ ಭಾರತ್ ಬಂದ್ ಗೆ ಇದೀಗ ಸ್ವತಃ ಹಿರಿಯ ಕಾಂಗ್ರೆಸ್ ಮುಖಂಡ ವಿರೋಧ ವ್ಯಕ್ತಪಡಿಸಿದ್ದಾರೆ.  

 ಹಿರಿಯ ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿ ಅವರು ಭಾರತ್ ಬಂದ್ ಗೆ ಕರೆ ಕೊಡುವುದು ಈ ದೇಶಕ್ಕೆ ವಿರೋಧ ಎಂದು ಹೇಳಿದ್ದಾರೆ. ಬಂದ್  ಗೆ  ಯಾವ  ಪಕ್ಷ ಕರೆ ನೀಡುತ್ತದೆಯೋ ಅವರು ನಷ್ಟವನ್ನು ಭರಿಸಬೇಕು ಎಂದು ಈಗಾಗಲೇ ಸುಪ್ರೀಂ ಕೋರ್ಟ್ ಹೇಳಿದೆ.  ಹಾಗಾಗಿ ಬಂದ್ ಗೆ ಕರೆ ಕೊಡುವವರು ಬಹಳ ಜಾಗೃತೆಯಿಂದ ಇರಬೇಕು ಎಂದಿದ್ದಾರೆ. 

ನಾಳೆ ಕೇಸ್ ಮಾಡಿದರೆ ಅದರಿಂದ ಪಾರಾಗಲು ಯಾರಿಂದಲೂ ಸಾಧ್ಯವಿಲ್ಲ. ಕರೆ ಕೊಟ್ಟ ನಂತರ ದೇಶದಲ್ಲಿ ಆಗುವ ಸಾವಿರಾರು ಕೋಟಿ ನಷ್ಟಕ್ಕೆ ಪಕ್ಷ ಹಾಗೂ ಬಂದ್ ಗೆ ಕರೆ ನೀಡಿದವರೇ ಹೊಣೆಯಾಗಬೇಕಾಗುತ್ತದೆ. ಕಾಂಗ್ರೆಸ್ ಇರಲಿ, ಬಿಜೆಪಿ ಇರಲಿ ಅಥವಾ ಪೂಜಾರಿಯೇ ಇರಲಿ ಬಂದ್ ಗೆ ಕರೆ ನೀಡುವುದು ತಪ್ಪು. 

ರಾಜ್ಯ ಆಗಲೀ ಕೇಂದ್ರ ಆಗಲೀ ಸೆಸ್ ಕಡಿಮೆ ಮಾಡಿದರೆ ಜನರಿಗೆ ಪ್ರಯೋಜನ ಆಗಲಿದೆ ಎನ್ನುವುದು ಭ್ರಮೆ. ತಾವೂ ಕೂಡ ದೇಶದ ಅರ್ಥ ಖಾತೆ ಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದು ಸೆಸ್ ಕಡಿಮೆ ಮಾಡಲು ಸಾಕಷ್ಟು ಪ್ರಯತ್ನ ಮಾಡಿದ್ದೆವು. ಸರ್ಕಾರ ನಡೆಯಬೇಕು ಎಂದರೆ ಸೆಸ್ ಕಡಿಮೆ ಮಾಡಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ. ಅಲ್ಲದೇ ಈ ರೀತಿ ಬಂದ್ ಗೆ ಕರೆ ನೀಡುವುದು ತಪ್ಪು ಎಂದಿದ್ದಾರೆ. 

Follow Us:
Download App:
  • android
  • ios