ಕಾಂಗ್ರೆಸ್ ಪಕ್ಷದ ನಾಯಕರಾದ ಆನಂದ್ ಶರ್ಮಾ, ಬಿ.ಕೆ.ಹರಿಪ್ರಸಾದ್, ದಿಗ್ವಿಜಯ್ ಸಿಂಗ್ ಸೇರಿದಂತೆ ಹಲವು ಗಣ್ಯರಿಗೆ ಮೊದಲ ಸಾಲಿನಲ್ಲಿ ಕೂರಲು ಅವಕಾಶ ಕಲ್ಪಿಸಲಾಗಿತ್ತು.

ನವದೆಹಲಿ(ಜ.11): ನೋಟ್ ಅಮಾನ್ಯ ವಿರೋಧಿಸಿ ರಾಷ್ಟ್ರರಾಜಧಾನಿಯಲ್ಲಿ ಕಾಂಗ್ರೆಸ್ ಹಮ್ಮಿಕೊಂಡಿದ್ದ ಜನವೇದನಾ ಸಮಾವೇಶದ ವೇದಿಕೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕಡೆಗಣಿಸಲಾಗಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

ಮೊದಲ ಸಾಲಿನಲ್ಲಿ ಸೋತ ನಾಯಕರಿಗೆ ಮನ್ನಣೆ ನೀಡಿದ ಕಾಂಗ್ರೆಸ್ ಹೈಕಮಾಂಡ್, ಕಾಂಗ್ರೆಸ್ ಸರ್ಕಾರದ ಆಡಳಿತವಿರುವ ಮುಖ್ಯಮಂತ್ರಿಯನ್ನು ಕೊನೆಯ ಸಾಲಿನಲ್ಲಿ ಕೂರಿಸುವ ಮೂಲಕ ಅವರಿಗೆ ಸೂಕ್ತ ಮನ್ನಣೆ ನೀಡಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ಇದಷ್ಟೇ ಅಲ್ಲದೆ ಸಿದ್ದರಾಮಯ್ಯ ಅವರಿಗೆ ವೇದಿಕೆಯಲ್ಲಿ ಮಾತನಾಡಲೂ ಕೂಡ ಅವಕಾಶವನ್ನು ನೀಡಿಲ್ಲ.

ಕಾಂಗ್ರೆಸ್ ಪಕ್ಷದ ನಾಯಕರಾದ ಆನಂದ್ ಶರ್ಮಾ, ಬಿ.ಕೆ.ಹರಿಪ್ರಸಾದ್, ದಿಗ್ವಿಜಯ್ ಸಿಂಗ್ ಸೇರಿದಂತೆ ಹಲವು ಗಣ್ಯರಿಗೆ ಮೊದಲ ಸಾಲಿನಲ್ಲಿ ಕೂರಲು ಅವಕಾಶ ಕಲ್ಪಿಸಲಾಗಿತ್ತು.