ಕಾಶ್ಮೀರ ಕಣಿವೆಯ ಶಾಲೆಯೊಂದಕ್ಕೆ ಮರುನಾಮಕರಣ ಮಾಡಿರುವ ಭಾರತೀಯ ಸೇನೆ, ಉಗ್ರರಿಂದ ಅಪಹರಣಕ್ಕೊಳಗಾಗಿ ಹತ್ಯೆಗೈಯಲ್ಪಟ್ಟ ಸೇನಾ ಅಧಿಕಾರಿಯ ಹೆಸರನ್ನು ಇಟ್ಟಿದೆ. ಬೇಹಿಬಾಗ್’ನಲ್ಲಿರುವ ಗುಡ್’ವಿಲ್ ಶಾಲೆಗೆ ಸ್ವಾತಂತ್ರ್ಯ ದಿನದ ಸಂದರ್ಭದಲ್ಲಿ ‘ಶಹೀದ್ ಲೆ. ಉಮರ್ ಫಯಾಝ್ ಗುಡ್’ವಿಲ್’ ಶಾಲೆಯೆಂದು ಮರುನಾಮಕರಣ ಮಾಡಲಾಗಿದೆ.
ಬೇಹಿಬಾಗ್, ಜಮ್ಮು ಮತ್ತು ಕಾಶ್ಮೀರ: ಕಾಶ್ಮೀರ ಕಣಿವೆಯ ಶಾಲೆಯೊಂದಕ್ಕೆ ಮರುನಾಮಕರಣ ಮಾಡಿರುವ ಭಾರತೀಯ ಸೇನೆ, ಉಗ್ರರಿಂದ ಅಪಹರಣಕ್ಕೊಳಗಾಗಿ ಹತ್ಯೆಗೈಯಲ್ಪಟ್ಟ ಸೇನಾ ಅಧಿಕಾರಿಯ ಹೆಸರನ್ನು ಇಟ್ಟಿದೆ.
ಬೇಹಿಬಾಗ್’ನಲ್ಲಿರುವ ಗುಡ್’ವಿಲ್ ಶಾಲೆಗೆ ಸ್ವಾತಂತ್ರ್ಯ ದಿನದ ಸಂದರ್ಭದಲ್ಲಿ ‘ಶಹೀದ್ ಲೆ. ಉಮರ್ ಫಯಾಝ್ ಗುಡ್’ವಿಲ್’ ಶಾಲೆಯೆಂದು ಮರುನಾಮಕರಣ ಮಾಡಲಾಗಿದೆ.
ಕಳೆದ ಮೇ ತಿಂಗಳಿನಲ್ಲಿ, ಸಂಬಂಧಿಕರ ಮನೆಗೆ ಮದುವೆ ಸಮಾರಂಭದಲ್ಲಿ ಭಾಗವಹಿಸಲು ಅಖ್ನೂರ್’ಗೆ ತೆರಳಿದ್ದ ಸಂದರ್ಭದಲ್ಲಿ ಉಗ್ರರು ಲೆ. ಉಮರ್ ಫಯಾಝ’ರನ್ನು ಅಪಹರಿಸಿ ಹತ್ಯೆ ಮಾಡಿದ್ದರು.
2016 ಡಿಸೆಂಬರ್’ನಲ್ಲಿ ನ್ಯಾಷನಲ್ ಡಿಫೆನ್ಸ್ ಅಕಾಡಮಿ (ಎನ್’ಡಿಏ) ಯಿಂದ ಕೋರ್ಸ್ ಮುಗಿಸಿ ಸೇನೆಗೆ ಸೇರಿದ್ದ ಉಮರ್ ಫಯಾಝ್ ಮುಂಬರುವ ಸೆಪ್ಟೆಂಬರ್’ನಲ್ಲಿ ಯುವ ಅಧಿಕಾರಿಗಳ ಕೋರ್ಸನ್ನು ಕೂಡಾ ಸೇರುವವರಿದ್ದರು.
