ಇಡೀ ವಿಶ್ವವೇ ನೋಡಿ ಕಣ್ತುಂಬಿಕೊಳ್ಳುವ ಮೈಸೂರು ದಸರಾ ಜಂಬೂಸವಾರಿಗೆ ದಿನಗಣನೆ ಶುರುವಾಗಿದೆ. ಈಗಾಗಲೇ ಆನೆಗಳು ಅರಮೆನಯಲ್ಲಿ ಬೀಡು ಬಿಟ್ಟಿದ್ದು, ತಾಲೀಮು ಕೂಡ ನಡೆಸುತ್ತಿವೆ. ಆದರೆ ಜಂಬೂಸವಾರಿಯೆ ಕೇಂದ್ರಬಿಂದು ಅರ್ಜುನ  ಆನೆ ಮಾತ್ರ ವ್ಯಥೆಯಲ್ಲಿದೆ.

ಮೈಸೂರು(ಆ.24): ವಿಶ್ವ ವಿಖ್ಯಾತ ದಸರಾದಲ್ಲಿ ಅಂಬಾರಿ ಹೊರುವ ಅರ್ಜುನ ಆನೆ ಈ ಬಾರಿ ಸೊರಗಿಹೋಗಿದ್ದಾನೆ. ಕಳೆದ ಬಾರಿಗಿಂತ ಈ ಬಾರಿ ಬರೋಬ್ಬರಿ 365 ಕೆ.ಜಿ ಕಡಿಮೆಯಾಗಿದ್ದಾನೆ. ಇದಕ್ಕೆ ಕಾರಣ ಮಾವುತರ ನಡುವಿನ ವೈಮನಸ್ಸು..

ಅರ್ಜುನನ ವ್ಯಥೆ..?

ಈ ಬಾರಿ ದಸರಾ ಜಂಬೂ ಸವಾರಿ ನಡೆಸುವ ಅರ್ಜುನನ ಮೇಲೇರುವವನು ದಲಿತ ಮಾವುತನೇ ಆಗಿರಬೇಕು ಎಂಬ ಚಿಂತನೆ ಅದ್ಯಾರಿಗೆ ಬಂದಿದೆಯೋ ಗೊತ್ತಿಲ್ಲ. ಅದರ ಫಲವಾಗಿಯೇ ಹುಟ್ಟಿದಾಗಿನಿಂದ ಅರ್ಜುನ ಆನೆಯ ಜೊತೆಯೇ ಬೆಳೆದ ಮಹೇಶನನ್ನ ದೂರವಿಟ್ಟು, ದಲಿತ ಯುವಕ ವಿನುವನ್ನು ಅರ್ಜುನನ ಮೇಲೇರಿಸಲು ಪ್ರಯತ್ನ ನಡೆಯುತ್ತಿದೆ. ಇದರಿಂದ ಬುಡಕಟ್ಟು ಜೇನುಕುರುಬ ಸಮುದಾಯದ ಮಹೇಶನಿಗೆ ಅನ್ಯಾಯವಾಗುತ್ತಿದೆ ಎಂದು ಅಲವತ್ತುಕೊಳ್ಳುತ್ತಿದ್ದಾರೆ ಸಮುದಾಯದ ಮುಖಂಡರು.

ಕಳೆದ ವರ್ಷ ಜಂಬೂಸವಾರಿ ನಡೆಯುವ ಮುನ್ನವೇ ಅರ್ಜುನ ಆನೆಯ ಮಾವುತ ದೊಡ್ಡ ಮಾಸ್ತಿ ತೀರಕೊಂಡಿದ್ದ. ಆಗ ದೊಡ್ಡ ಮಾಸ್ತಿ ಮಗ ಮಹೇಶನಿಗೆ ಜಂಬೂಸವಾರಿ ನಡೆಸಲು ಅವಕಾಶ ಮಾಡಲಾಗಿತ್ತು. ಆದರೆ 2016ರ ಡಿಸೆಂಬರ್ ತಿಂಗಳಲ್ಲಿ ಸರ್ಕಾರ ಅರ್ಜುನನಿಗೆ ತೆರವಾಗಿದ್ದ ಮಾವುತನ ಸ್ಥಾನಕ್ಕೆ ಬಳ್ಳೆ ಹಾಡಿಯ ವಿನು ಎಂಬುವನನ್ನು ನೇಮಕ ಮಾಡಿದೆ. ಈ ಭಾರಿ ನಾನು ಅಂಬಾರಿಯನ್ನು ಮುನ್ನಡೆಸಲಿದ್ದು, ಒಂದು ವೇಳೆ ಅಧಿಕಾರಿಗಳು ಮಹೇಶನಿಗೆ ಅವಕಾಶ ನೀಡಿದರೆ ನಾನು ಮರಳಿ ಕಾಡಿಗೆ ತೆರಳುತ್ತೇನೆ ಎನ್ನುತ್ತಾನೆ ವಿನು.

ಇತ್ತ ಕಳೆದ ವರ್ಷ ಅಂಬಾರಿ ನಡೆಸಿದ್ದ ಮಹೇಶ್ ಕೂಡ ತನಗೆ ಅರ್ಜುನ ಆನೆಯ ಜೊತೆಗ ಭಾವನಾತ್ಮಕ ಸಂಬಂಧವಿದ್ದು, ನನಗೇ ಅವಕಾಶ ಮಾಡಿಕೊಡಬೇಕು ಎನ್ನುತ್ತಿದ್ದಾನೆ. ಅರ್ಜುನ ಆನೆಯನ್ನು ಮುನ್ನಡೆಸಲು ಇಬ್ಬರೂ ಸಮರ್ಥರಿದ್ದಾರೆ. ಆದರೆ ಸ್ಥಳಿಯರು ಹೇಳುವ ಪ್ರಕಾರ ಅರ್ಜುನ ಆನೆಗೆ ಮಾವುತನ ಆಯ್ಕೆಯಲ್ಲಿ ಜಾತಿ ರಾಜಕಾರಣ ಸುಳಿದಿದಿಯಂತೆ. ಸರ್ಕಾರ ಇಂತಾ ಕೆಲಸಗಳಿಗೂ ಜಾತಿ ರಾಜಕಾರಣ ಮಾಡಿದ್ದೇ ಆದಲ್ಲಿ ನಿಜಕ್ಕೂ ಶೇಮ್ ಶೇಮ್