ಆದಾಗ್ಯೂ ಜಲ್ಲಿಕಟ್ಟಿಗೆ ಖ್ಯಾತವಾಗಿರುವ ಮಧುರೈನ ಅಳಂಗನಲ್ಲೂರಿನಲ್ಲಿ ಪ್ರತಿಭಟನೆ ಮುಂದುವರಿದಿದ್ದು ಶಾಶ್ವತ ಪರಿಹಾರ ಒದಗಿಸಬೇಕೆಂದು ಹೋರಾಟಗಾರರು ಉತ್ಸವವನ್ನು ಬಹಿಷ್ಕರಿಸಿದ್ದಾರೆ.
ಚೆನ್ನೈ(ಜ.22): ತಮಿಳುನಾಡಿನ ಸಾಂಪ್ರದಾಯಿಕ ಉತ್ಸವ ಜಲ್ಲಿಕಟ್ಟುವಿಗೆ ತಿರುಚನಾಪಳ್ಳಿ ಒಳಗೊಂಡು ಹಲವು ಜಿಲ್ಲೆಗಳಲ್ಲಿ ಅದ್ದೂರಿ ಚಾಲನೆ ದೊರೆತಿದೆ. ಜಿಲ್ಲೆಯ ಮನಪ್ಪರೈನಲ್ಲಿ ಗೂಳಿಯಾಟಕ್ಕೆ ಸಾವಿರಾರು ಜನರು ಸಾಕ್ಷಿಯಾದರು. ಕ್ರೀಡೆಯಲ್ಲಿ 100 ಕ್ಕೂ ಹೆಚ್ಚು ಗೂಳಿಗಳೊಂದಿಗೆ 500ಕ್ಕೂ ಹೆಚ್ಚು ರೈತರು ಪಾಲ್ಗೊಂಡಿದ್ದಾ.
ಆದಾಗ್ಯೂ ಜಲ್ಲಿಕಟ್ಟಿಗೆ ಖ್ಯಾತವಾಗಿರುವ ಮಧುರೈನ ಅಳಂಗನಲ್ಲೂರಿನಲ್ಲಿ ಪ್ರತಿಭಟನೆ ಮುಂದುವರಿದಿದ್ದು ಶಾಶ್ವತ ಪರಿಹಾರ ಒದಗಿಸಬೇಕೆಂದು ಹೋರಾಟಗಾರರು ಉತ್ಸವವನ್ನು ಬಹಿಷ್ಕರಿಸಿದ್ದಾರೆ. ಉತ್ಸವಕ್ಕೆ ಇಂದು ಬೆಳಿಗ್ಗೆ ಮುಖ್ಯಮಂತ್ರಿ ಓ.ಪನ್ನೀರ್ ಸೆಲ್ವಂ ಚಾಲನೆ ನೀಡಬೇಕಿತ್ತು. ಪ್ರತಿಭಟನೆಯ ಹಿನ್ನೆಲೆಯಲ್ಲಿ ಉದ್ಘಾಟನೆಯಿಂದ ಹಿಂದೆ ಸರಿದಿದ್ದಾರೆ. 2014ರಲ್ಲಿ ಪ್ರಾಣಿಗಳ ಮೇಲೆ ಹಿಂಸೆ ನಡೆಯುತ್ತಿದೆ ಎಂಬ ಕಾರಣಕ್ಕಾಗಿ ಸುಪ್ರೀಂ ಕೋರ್ಟ್ ಜಲ್ಲಿಕಟ್ಟನ್ನು ನಿಷೇಧಿಸಿತ್ತು. ಸುಪ್ರೀಂ ಕೋರ್ಟ್ ನಿಷೇಧವನ್ನು ಖಂಡಿಸಿ ರಾಜಕೀಯ, ಸಿನಿಮಾ ಸೇರಿದಂತೆ ಎಲ್ಲ ಕ್ಷೇತ್ರದ ಗಣ್ಯರು ರಾಜ್ಯದಾದ್ಯಂತ ಪ್ರತಿಭಟನೆ ಹಮ್ಮಿಕೊಂಡು ಸಾಂಪ್ರದಾಯಿಕ ಉತ್ಸವಕ್ಕೆ ಜಯ ದೊರಕಿಸಿಕೊಡಲು ಯಶಸ್ವಿಯಾಗಿದ್ದಾರೆ.
