ಭಯೋತ್ಪಾದಕ ಚಟುವಟಿಕೆಗಳಿಗೆ ಕುಮ್ಮಕ್ಕು ನೀಡಿದ ಆರೋಪ ಹೊತ್ತಿರುವ ಇಸ್ಲಾಮಿಕ್‌ ಪ್ರವಚನಕಾರ ಝಾಕೀರ್‌ ನಾಯ್ಕ್‌ ಗೆ ಮತ್ತೊಮ್ಮೆ ಸಂಕಷ್ಟ ಎದುರಾಗಿದೆ.  

ನವದೆಹಲಿ (ನ.23): ಭಯೋತ್ಪಾದಕ ಚಟುವಟಿಕೆಗಳಿಗೆ ಕುಮ್ಮಕ್ಕು ನೀಡಿದ ಆರೋಪ ಹೊತ್ತಿರುವ ಇಸ್ಲಾಮಿಕ್‌ ಪ್ರವಚನಕಾರ ಝಾಕೀರ್‌ ನಾಯ್ಕ್‌ ಗೆ ಮತ್ತೊಮ್ಮೆ ಸಂಕಷ್ಟ ಎದುರಾಗಿದೆ.

ಐಸಿಸ್ ಉಗ್ರ ಅಬು ಅನಾಸ್ ಗೆ ಸ್ಕಾಲರ್ಷಿಪ್ ಗಾಗಿ ಝಾಕಿರ್ ನಾಯ್ಕ್ ಅಧಿಪತ್ಯದ ಇಸ್ಲಾಮಿಕ್‌ ರೀಸರ್ಚ್‌ ಫೌಂಡೇಶನ್‌ 80 ಸಾವಿರ ನಗದು ನೀಡಿರುವುದಾಗಿ ಎನ್ಐಎ ಹೇಳಿದೆ. ಕಳೆದ ಕೆಲ ದಿನಗಳಿಂದ ಇಸ್ಲಾಮಿಕ್‌ ರೀಸರ್ಚ್‌ ಫೌಂಡೇಶನ್‌’ ಸ್ವಯಂಸೇವಾ ಸಂಸ್ಥೆಯ ಕಚೇರಿಗಳಿಗೆ ಕೇಂದ್ರ ಸರಕಾರ ಐದು ವರ್ಷ ನಿಷೇಧಿಸಿದ ಬೆನ್ನಲ್ಲೇ ಎನ್ಐಎ ದಾಳಿ ನಡೆಸುತ್ತಿದೆ.

ಕೆಲ ದಿನಗಳ ಹಿಂದೆ ಐಸಿಸ್ ಉಗ್ರ ಸಂಘಟನೆಯ ಭಾರತೀಯ ಏಜೆಂಟ್ ಗಳ ನೆಲೆಗಳ ಮೇಲೆ ದಾಳಿ ನಡೆಸಿದ್ದ ಹೈದರಾಬಾದ್ ನಲ್ಲಿ ಅಬು ಅನಾಸ್ ನನ್ನು ಬಂಧಿಸಿದ್ದರು. ವಿಚಾರಣೆ ವೇಳೆ ಆತನಿಗೆ ವಿದ್ಯಾರ್ಥಿ ವೇತನಕ್ಕಾಗಿ ಐಆರ್ ಎಫ್ 80000 ರೂ. ನಗದನ್ನು ನೀಡಿರುವುದು ಬೆಳಕಿಗೆ ಬಂದಿದೆ. 

ಝಾಕೀರ್‌ ನಾಯ್ಕ್‌ ಸೇರಿದಂತೆ ಐಆರ್‌ಎಫ್ ವಿರುದ್ಧ ಉಗ್ರ ಚಟುವಟಿಕೆಗಳಿಗೆ ಕಾರಣವಾದುದಕ್ಕೆ ಎನ್‌ಐಎ ಎಫ್ಐಆರ್‌ ದಾಖಲಿಸಿಕೊಂಡಿದೆ.