ಮನೋಹರ್ ಪರ್ರಿಕರ್ ರಾಜಿನಾಮೆಯಿಂದ ರಕ್ಷಣಾ ಮಂತ್ರಿ ಸ್ಥಾನ ತೆರವಾಗಿತ್ತು. ಪರ್ರಿಕರ್ ಗೋವಾ ಮುಖ್ಯಮಂತ್ರಿಯಾಗಿ ರಾಜ್ಯ ರಾಜಕಾರಣಕ್ಕೆ ಮರಳಲಿದ್ದಾರೆ.

ನವದೆಹಲಿ (ಮಾ.13): ದೇಶದ ರಕ್ಷಣಾ ಮಂತ್ರಿ ಮಂತ್ರಿಯಾಗಿ ಇಂದು ಅರುಣ್ ಜೇಟ್ಲಿ ಅವರು ಅಧಿಕಾರ ಸ್ವೀಕರಿಸಿದ್ದಾರೆ. ಕೇಂದ್ರ ಹಣಕಾಸು ಸಚಿವರಾಗಿರುವ ಜೇಟ್ಲಿ ಹೆಚ್ಚುವರಿಯಾಗಿ ಈ ಹೊಣೆಯನ್ನು ನಿಭಾಯಿಸಲಿದ್ದಾರೆ.

ಮನೋಹರ್ ಪರ್ರಿಕರ್ ರಾಜಿನಾಮೆಯಿಂದ ರಕ್ಷಣಾ ಮಂತ್ರಿ ಸ್ಥಾನ ತೆರವಾಗಿತ್ತು. ಪರ್ರಿಕರ್ ಗೋವಾ ಮುಖ್ಯಮಂತ್ರಿಯಾಗಿ ರಾಜ್ಯ ರಾಜಕಾರಣಕ್ಕೆ ಮರಳಲಿದ್ದಾರೆ.

ಜೇಟ್ಲಿ ಈ ಹಿಂದೆಯೂ ಎರಡೆರಡೂ ಖಾತೆಗಳನ್ನು ನಿಭಾಯಿಸಿದ್ದರು. 2014ರಲ್ಲಿ ಆರು ತಿಂಗಳುಗಳ ಕಾಲ ( ಮೇ 26 ರಿಂದ 9 ನವೆಂಬರ್) ವರೆಗೆ ಜೇಟ್ಲಿ ಹಣಕಾಸು ಇಲಾಖೆಯೊಂದಿಗೆ ರಕ್ಷಣಾ ಖಾತೆಯನ್ನು ನಿಭಾಯಿಸಿದ್ದರು.