ನವ​ದೆ​ಹ​ಲಿ[ಆ.14]: ಉಸಿ​ರಾ​ಟದ ತೊಂದ​ರೆಯಿಂದಾಗಿ ದೆಹ​ಲಿಯ ಏಮ್ಸ್‌ ಆಸ್ಪ​ತ್ರೆಗೆ ದಾಖ​ಲಾ​ಗಿ​ರುವ ಮಾಜಿ ಕೇಂದ್ರ ವಿತ್ತ ಸಚಿವ ಅರುಣ್‌ ಜೇಟ್ಲಿಯವ​ರಿಗೆ ಐಸಿ​ಯು​ನಲ್ಲಿ ಚಿಕಿ​ತ್ಸೆ ಮುಂದು​ವ​ರಿ​ಸ​ಲಾ​ಗಿದ್ದು, ಅವರ ಆರೋಗ್ಯ ಗಂಭೀ​ರ​ವಾ​ಗಿ​ಯೇ ಮುಂದುವರೆದಿದೆ.

ಆದರೆ ಹೃದಯ ಬಡಿತ ಹಾಗೂ ರಕ್ತ ಸಂಚಾರ ಸ್ಥಿರ​ವಾ​ಗಿದೆ ಎಂದು ಆಸ್ಪತ್ರೆ ಮೂಲ​ಗಳು ತಿಳಿ​ಸಿವೆ. 68 ವರ್ಷ​ದ ಜೇಟ್ಲಿ​ಯ​ವ​ರನ್ನು ಉಸಿ​ರಾ​ಟದ ತೊಂದ​ರೆ​ಯಿಂದಾಗಿ ಆ.9 ​ರ ಬೆಳಿಗ್ಗೆ 10 ಗಂಟೆಗೆ ಏಮ್ಸ್‌ಗೆ ದಾಖಲು ಮಾಡ​ಲಾ​ಗಿತ್ತು.

ಬಹು ವೈದ್ಯರ ತಂಡ ಜೇಟ್ಲಿ ಆರೋ​ಗ್ಯದ ಮೇಲೆ ನಿಗಾ ವಹಿ​ಸಿ​ದ್ದು, ಆರೋಗ್ಯ ಪರಿ​ಸ್ಥಿತಿ ಗಂಭೀ​ರ​ವಾ​ಗಿ​ದ್ದರೂ ಚಿಕಿ​ತ್ಸೆಗೆ ಸ್ಪಂದಿ​ಸು​ತ್ತಿ​ದ್ದಾರೆ ಎಂದು ಏಮ್ಸ್‌ ಮೂಲ​ಗ​ಳು ತಿಳಿ​ಸಿವೆ.