ಹಿಮಾಚಲ ಪ್ರದೇಶದ ಸಿಎಂ ಆಗಿ ಜೈರಾಮ್ ಠಾಕೂರ್​ ಆಯ್ಕೆಯಾಗಿದ್ದಾರೆ ಜೈರಾಮ್ ಠಾಕೂರ್ ಪತ್ನಿ ಡಾ. ಸಾಧನಾ ಠಾಕೂರ್ ಓರ್ವ ಕನ್ನಡತಿ

ಶಿಮ್ಲಾ: ಹಿಮಾಚಲ ಪ್ರದೇಶದ ಸಿಎಂ ಆಗಿ ಜೈರಾಮ್ ಠಾಕೂರ್​ ಆಯ್ಕೆಯಾಗಿದ್ದಾರೆ.

ಇಂದು ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಜೈರಾಮ್ ಠಾಕೂರ್ ಅವರನ್ನು ನಾಯಕನಾಗಿ ಆಯ್ಕೆ ಮಾಡಲಾಗಿದೆ.

28 ವರ್ಷಕ್ಕೇ ಶಾಸಕರಾಗಿದ್ದ ಜೈರಾಮ್ ಠಾಕೂರ್ ಪತ್ನಿ ಡಾ. ಸಾಧನಾ ಠಾಕೂರ್ ಓರ್ವ ಕನ್ನಡತಿ. ಮೂಲತ: ಶಿವಮೊಗ್ಗದವರಾದ ಸಾಧನಾ ಕುಟುಂಬವು ಜೈಪುರಕ್ಕೆ ವಲಸೆ ಹೋಗಿ ನೆಲೆಸಿತ್ತು.

ಎಬಿವಿಪಿ ಕಾರ್ಯಕರ್ತೆಯಾಗಿದ್ದ ಸಾಧನಾ ಅವರನ್ನು ಜೈರಾಮ್ ಠಾಕೂರ್ ಮದುವೆಯಾಗಿದ್ದರು.

ಸಿಎಂ ಅಭ್ಯರ್ಥಿಯಾಗಿದ್ದ ಪ್ರೇಮಚಂದ್ರ ಧುಮಾಲ್ ಸೋಲಿನ ಹಿನ್ನೆಲೆಯಲ್ಲಿ ಜೈರಾಮ್​ಗೆ ಸಿಎಂ ಪಟ್ಟ ದಕ್ಕಿದೆ.