ಕೆಲ ದಿನಗಳ ಹಿಂದೆ ಬೆಳಗಾವಿ ಡಿಪೋಗೆ ಸೇರಿದ ಬಸ್‌ಗಳ ಮೇಲೆ ‘ಜೈ ಮಹಾರಾಷ್ಟ್ರ' ಎಂದು ಬರೆದು ಎಂಇಎಸ್‌ ಬೆಂಬಲಿತ ಪುಂಡರು ಕನ್ನಡಿಗರ ತಾಳ್ಮೆ ಕೆಣಕುವ ಕೆಲಸ ಮಾಡಿದ್ದರು. ಅದರ ಬೆನ್ನಲ್ಲೇ ಈಗ ಬೀದರ್‌ ಡಿಪೋಗೆ ಸೇರಿದ ಬಸ್‌ಗಳ ಮೇಲೂ ಇದೇ ರೀತಿಯ ಬರಹ ಕಾಣಿಸಿಕೊಳ್ಳುತ್ತಿದೆ.
ಭಾಲ್ಕಿ: ಎಂಇಎಸ್'ಅನ್ನು ಉದ್ದೇಶಿಸಿ ‘ನಾಡದ್ರೋಹಿಗಳ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಕಾನೂನು ರೂಪಿಸಲಿದೆ' ಎಂಬ ಸಚಿವ ರೋಷನ್ ಬೇಗ್ ಹೇಳಿಕೆ ಬಳಿಕ ಮಹಾರಾಷ್ಟ್ರದಲ್ಲಿ ಕರ್ನಾಟಕದ ಸಾರಿಗೆ ಬಸ್ಗಳ ಮೇಲೆ ‘ಜೈ ಮಹಾರಾಷ್ಟ್ರ' ಎಂದು ಬರೆಯುವ, ಈ ಮೂಲಕ ಭಾಷಾ ಸಾಮರಸ್ಯ ಕದಡುವ ಪ್ರಯತ್ನ ಹೆಚ್ಚುತ್ತಿದೆ.
ಕೆಲ ದಿನಗಳ ಹಿಂದೆ ಬೆಳಗಾವಿ ಡಿಪೋಗೆ ಸೇರಿದ ಬಸ್ಗಳ ಮೇಲೆ ‘ಜೈ ಮಹಾರಾಷ್ಟ್ರ' ಎಂದು ಬರೆದು ಎಂಇಎಸ್ ಬೆಂಬಲಿತ ಪುಂಡರು ಕನ್ನಡಿಗರ ತಾಳ್ಮೆ ಕೆಣಕುವ ಕೆಲಸ ಮಾಡಿದ್ದರು. ಅದರ ಬೆನ್ನಲ್ಲೇ ಈಗ ಬೀದರ್ ಡಿಪೋಗೆ ಸೇರಿದ ಬಸ್ಗಳ ಮೇಲೂ ಇದೇ ರೀತಿಯ ಬರಹ ಕಾಣಿಸಿಕೊಳ್ಳುತ್ತಿದೆ.

ಬೀದರ್ನಿಂದ ಪೂನಾ ಮಾರ್ಗವಾಗಿ ಸಂಚರಿಸುವ ಕೆಎ 38 ಎಫ್ 972 ಸಂಖ್ಯೆಯ ಬಸ್ನ ಎರಡೂ ಬದಿಯ ನಾಲ್ಕು ಕಡೆಗಳಲ್ಲಿ ಆಯಿಲ್ ಪæೕಂಟ್ನಿಂದ ‘ಜೈ ಮಹಾರಾಷ್ಟ್ರ' ಎಂದು ದೊಡ್ಡ ಅಕ್ಷರಗಳಲ್ಲಿ ಬರೆದಿರುವುದು ಭಾನುವಾರ ಬೆಳಕಿಗೆ ಬಂದಿದೆ. ಬೀದರ್ ಡಿಪೋಗೆ ಸೇರಿದ ಬಸ್ಗಳ ಮೇಲೆ ಈ ರೀತಿಯ ಬರಹ ಇದೇ ಮೊದಲಲ್ಲ, ಕಳೆದ ಕೆಲ ದಿನಗಳಿಂದ ಹಲವು ಬಸ್ಗಳ ಮೇಲೆ ಈ ರೀತಿ ಬರೆಯಲಾಗಿದೆ ಎನ್ನಲಾಗುತ್ತಿದೆ. ಜತೆಗೆ, ಕೆಲ ಪುಂಡರು ರಾಜ್ಯ ಸಾರಿಗೆ ಸಿಬ್ಬಂದಿಗೆ ಕಿರುಕುಳ ನೀಡುತ್ತಿರುವ ಆರೋಪವೂ ಕೇಳಿ ಬರುತ್ತಿದೆ.
(ಸಾಂದರ್ಭಿಕ ಚಿತ್ರ)
