Asianet Suvarna News Asianet Suvarna News

ಆಂಧ್ರ ಸಿಎಂ ಆಗಿ ಜಗನ್ ಪ್ರಮಾಣವಚನ: ಬಾರದ ನಾಯ್ಡು!

ಆಂಧ್ರದ ಸಿಎಂ ಆಗಿ ಜಗನ್ ಮೋಹನ್ ರೆಡ್ಡಿ ಪ್ರಮಾಣವಚನ| ಆಂಧ್ರದ ನೊಗ ಹೊತ್ತ YSR ಕಾಂಗ್ರೆಸ್ ಮುಖ್ಯಸ್ಥ| ಪ್ರಮಾಣವಚನ ಬೋಧಿಸಿದ ರಾಜ್ಯಪಾಲ ESL ನರಸಿಂಹನ್| ಜಗನ್ ಪ್ರಮಾಣವಚನ ಸಮಾರಂಭಕ್ಕೆ ಬಾರದ ಚಂದ್ರಬಾಬು ನಾಯ್ಡು| ತೆಲಂಗಾಣ ಸಿಎಂ ಕೆಸಿಆರ್, ಡಿಎಂಕೆ ಮುಖ್ಯಸ್ಥ ಸ್ಟಾಲಿನ್ ಭಾಗಿ|

Jagan Mohan Reddy Sworn In As Andhra Pradesh Chief Minister
Author
Bengaluru, First Published May 30, 2019, 1:07 PM IST

ವಿಜಯವಾಡಾ(ಮೇ.30): ಆಂಧ್ರಪ್ರದೇಶದ ನೂತನ ಮುಖ್ಯಮಂತ್ರಿಯಾಗಿ YSR ಕಾಂಗ್ರೆಸ್ ಮುಖ್ಯಸ್ಥ ಜಗನ್ ಮೋಹನ್ ರೆಡ್ಡಿ ಪ್ರಮಾಣವಚನ ಸ್ವೀಕರಿಸಿದರು. ರಾಜ್ಯ ವಿಭಜನೆ ಬಳಿಕ ಆಂಧ್ರದ ಎರಡನೇ ಸಿಎಂ ಎಂಬ ಹೆಗ್ಗಳಿಕೆಗೆ ಜಗನ್ ಪಾತ್ರರಾಗಿದ್ದಾರೆ.

ವಿಜಯವಾಡಾದಲ್ಲಿ ನಡೆದ ಬೃಹತ್ ಸಾರ್ವಜನಿಕ ಸಮಾರಂಭದಲ್ಲಿ ರಾಜ್ಯಪಾಲ ESL ನರಸಿಂಹನ್ ಅವರು ಜಗನ್ ಮೋಹನ್ ರೆಡ್ಡಿಗೆ ಪ್ರಮಾಣವಚನ ಬೋಧಿಸಿದರು.

ಇನ್ನು ಜಗನ್ ಪ್ರಮಾಣವಚನ ಸಮಾರಂಭಕ್ಕೆ ತೆಲಂಗಾಣ ಸಿಎಂ ಕೆಸಿ ಚಂದ್ರಶೇಖರ್ ರಾವ್, ಡಿಎಂಕೆ ಮುಖ್ಯಸ್ಥ ಎಂ.ಕೆ.ಸ್ಟಾಲಿನ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.

ಆದರೆ ಜಗನ್ ಪ್ರಮಾಣವಚನ ಸಮಾರಂಭಕ್ಕೆ ನಿರ್ಗಮಿತ ಮುಖ್ಯಮಂತ್ರಿ, ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಗೈರು ಹಾಜರಾಗಿದ್ದರು. ಜಗನ್ ಅವರಿಗೆ ಶುಭ ಕೋರಲು ಟಿಡಿಪಿಯ ನಿಯೋಗ ಮಾತ್ರ ಹಾಜರಾಗಿತ್ತು.

ಒಟ್ಟು 175 ವಿಧಾನಸಭಾ ಕ್ಷೇತ್ರಗಳ ಪೈಕಿ 151 ಕ್ಷೇತ್ರಗಳಲ್ಲಿ ಜಯಬೇರಿ ಬಾರಿಸಿರುವ YSR ಕಾಂಗ್ರೆಸ್, 25 ಲೋಕಸಭಾ ಕ್ಷೇತ್ರಗಳ ಪೈಕಿ 22 ಲೋಕಸಭಾ ಕ್ಷೇತ್ರಗಳನ್ನು ಗೆದ್ದು ಸಂಪೂರ್ಣ ಆಂಧ್ರವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ.

Follow Us:
Download App:
  • android
  • ios