ಹೈದರಾಬಾದ್(ಜೂ.06): ಸಿಎಂ ಆಗಿ ಅಧಿಕಾರ ಸ್ವೀಕರಿಸಿದ ಮರುಕ್ಷಣವೇ ತಮ್ಮ ಅಧಿಕಾರ ನಡೆಸುವ ಪರಿಯನ್ನು ತಿಳಿಸಿರುವ ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿ, ಮಾಜಿ ಸಿಎಂ ನಾಯ್ಡು ಅಧಿಕಾರಾವಧಿಯ ಆದೇಶಗಳ ಮರು ಪರಾಮರ್ಶೆ ನಡೆಸಿದ್ದಾರೆ.

ಪ್ರಮುಖವಾಗಿ ಸಿಬಿಐಗೆ ರಾಜ್ಯದಲ್ಲಿ ಯಾವುದೇ ತನಿಖೆ ನಡೆಸಲು ರಾಜ್ಯ ಸರ್ಕಾರದ ಅನುಮತಿ ಪಡೆಯಬೇಕೆಂಬ ನಾಯ್ಡು ಆದೇಶವನ್ನು ಜಗನ್ ರದ್ದುಗೊಳಿಸಿದ್ದಾರೆ.

ಸಿಬಿಐಗೆ ರಾಜ್ಯದಲ್ಲಿ ಮುಕ್ತ ಅವಕಾಶ ನೀಡಿರುವ ಜಗನ್ ಮೋಹನ್ ರೆಡ್ಡಿ, ತನಿಖೆಗಾಗಿ ರಾಜ್ಯ ಸರ್ಕಾರದ ಪೂರ್ವಾನುಮತಿ ಪಡೆಯುವ ಅಗತ್ಯವಿಲ್ಲ ಎಂದು ಜಗನ್ ಆದೇಶಿಸಿದ್ದಾರೆ.

"

ಈ ಹಿಂದೆ ಚಂದ್ರಬಾಬು ನಾಯ್ಡು ಸರ್ಕಾರ ಸಿಬಿಐಗೆ ಸೀಮಿತ ಅಧಿಕಾರ ನೀಡಿತ್ತು. ಅಲ್ಲದೇ ತನ್ನ ಪೂರ್ವಾನುಮತಿ ಇಲ್ಲದೇ ರಾಜ್ಯದಲ್ಲಿ ಯಾವುದೇ ತನಿಖೆಯನ್ನು ಸ್ವತಂತ್ರವಾಗಿ ಕೈಗೆತ್ತಿಕೊಳ್ಳುವಂತಿಲ್ಲ ಎಂದು ಆದೇಶಿಸಿತ್ತು.

ಆದರೆ ಜಗನ್ ರೆಡ್ಡಿ ನೇತೃತ್ವದ ನೂತನ ಸರ್ಕಾರ ಈ ಆದೇಶವನ್ನು ರದ್ದುಗೊಳಿಸಿದ್ದು, ಸಿಬಿಐಗೆ ಈ ಮೊದಲಿದ್ದ ಸಂಪೂರ್ಣ ಅಧಿಕಾರವನ್ನು ನೀಡಿದೆ.

ಇಷ್ಟೇ ಅಲ್ಲದೇ ನಾಯ್ಡು ಜಾರಿಗೆ ತಂದಿದ್ದ ಅನ್ನದಾತ ಸುಖೀಭವ ಯೋಜನೆಯನ್ನು ಬದಲಿಸಿರುವ ರೈತೂ ಭರೋಸಾ ಎಂಬ ಯೋಜನೆಯನ್ನು ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿ ಜಾರಿಗೆ ತಂದಿದ್ದಾರೆ.