ಇನ್ನು ನಿಶ್ಚಿತಾರ್ಥದಂಥ ಸಣ್ಣ ಸಮಾರಂಭಗಳಿಗೆ 100 ಅತಿಥಿಗಳ ಮಿತಿ ವಿಧಿಸಲಾಗಿದೆ. ಯಾವುದೇ ಖಾಸಗಿ/ಸರ್ಕಾರಿ ಸಮಾರಂಭಗಳು ಇರಲಿ. ಅಲ್ಲಿ ಧ್ವನಿವರ್ಧಕ ಬಳಕೆ ಮತ್ತು ಪಟಾಕಿ ಸಿಡಿಸುವುದನ್ನು ನಿಷೇಧಿಸಲಾಗಿದೆ.

ಶ್ರೀನಗರ(ಫೆ.21): ದುಂದುವೆಚ್ಚದ ಮದುವೆಗಳಿಗೆ ಕಡಿವಾಣ ಹಾಕುವ ಕಾಯ್ದೆ ರೂಪಿಸಬೇಕು ಎಂದು ಇರುವ ಪ್ರಸ್ತಾಪ ಅನೇಕ ರಾಜ್ಯಗಳಲ್ಲಿ ಇನ್ನೂ ಪ್ರಸ್ತಾಪದ ಹಂತದಲ್ಲೇ ಇದೆ. ಆದರೆ ಜಮ್ಮು-ಕಾಶ್ಮೀರ ಸರ್ಕಾರ ಒಂದು ಹೆಜ್ಜೆ ಮುಂದೆ ಹೋಗಿ ಈ ಬಗ್ಗೆ ಅನಿರೀಕ್ಷಿತವಾಗಿ ಅಧಿಸೂಚನೆ ಹೊರಡಿಸಿ ದುಂದುವೆಚ್ಚದ ಮದುವೆ, ಇತರ ಸಮಾರಂಭಗಳಿಗೆ ಕಡಿವಾಣ ಹಾಕಿದೆ.

Add Asianetnews Kannada as a Preferred SourcegooglePreferred

ಅಧಿಸೂಚನೆಯ ಪ್ರಕಾರ, ಮಗನ ಮದುವೆಯಾದರೆ 400 ಹಾಗೂ ಮಗಳ ಮದುವೆಯಾದರೆ 500 ಜನರನ್ನು ಕರೆಯಲು ಅವಕಾಶವಿದೆ. ಇನ್ನು ನಿಶ್ಚಿತಾರ್ಥದಂಥ ಸಣ್ಣ ಸಮಾರಂಭಗಳಿಗೆ 100 ಅತಿಥಿಗಳ ಮಿತಿ ವಿಧಿಸಲಾಗಿದೆ.

ಯಾವುದೇ ಖಾಸಗಿ/ಸರ್ಕಾರಿ ಸಮಾರಂಭಗಳು ಇರಲಿ. ಅಲ್ಲಿ ಧ್ವನಿವರ್ಧಕ ಬಳಕೆ ಮತ್ತು ಪಟಾಕಿ ಸಿಡಿಸುವುದನ್ನು ನಿಷೇಧಿಸಲಾಗಿದೆ. ಇನ್ನು ಏಪ್ರಿಲ್ 1ರಿಂದ ಆಮಂತ್ರಣ ಪತ್ರಿಕೆಗಳನ್ನು ನೀಡುವಾಗ ಅವುಗಳೊಂದಿಗೆ ಒಣಹಣ್ಣು (ಡ್ರೈಫ್ರೂಟ್ಸ್)ಗಳನ್ನು ನೀಡುವಂತಿಲ್ಲ.

ಇತ್ತೀಚೆಗೆ ಲೋಕಸಭೆಯಲ್ಲೂ ಕಾಂಗ್ರೆಸ್ ಸಂಸದೆ ರಂಜೀತ್ ರಂಜನ್ ಅವರು ಇಂಥದ್ದೇ ಮಸೂದೆಯನ್ನು ಮಂಡಿಸಿದ್ದರು. 5 ಲಕ್ಷ ರು.ಗಳಿಗಿಂತ ಹೆಚ್ಚು ಖರ್ಚು ಮಾಡಿ ಮದುವೆ ಮಾಡುವವರು, ಆ ಮದುವೆಯ ಶೇ.10ರಷ್ಟು ಹಣವನ್ನು ಬಡ ಹುಡುಗಿಯರ ಮದುವೆಗೆ ಸಹಾಯ ಮಾಡುವುದನ್ನು ಕಡ್ಡಾಯಗೊಳಿಸಬೇಕು ಎಂದು ಅವರು ಆಗ್ರಹಿಸಿದ್ದರು.

ಈ ಮಸೂದೆಯು ಲೋಕಸಭೆಯ ಬಜೆಟ್ ಅವೇಶನದ ದ್ವಿತೀಯ ಚರಣದಲ್ಲಿ ಚರ್ಚೆಗೆ ಬರುವ ನಿರೀಕ್ಷೆಯಿದೆ.