ಆನ್‌ಲೈನ್ ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ವಿಷಯವನ್ನು ಟ್ರಾಲ್ ಅಥವಾ ಹಾಸ್ಯ ಮಾಡುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯ. ಇದಕ್ಕೆ ಹೊಸ ಉದಾಹರಣೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್’ರ ಪುತ್ರಿ ಇವಾಂಕಾ ಭಾರತ ಭೇಟಿ.

ನವದೆಹಲಿ: ಆನ್‌ಲೈನ್ ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ವಿಷಯವನ್ನು ಟ್ರಾಲ್ ಅಥವಾ ಹಾಸ್ಯ ಮಾಡುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯ. ಇದಕ್ಕೆ ಹೊಸ ಉದಾಹರಣೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್’ರ ಪುತ್ರಿ ಇವಾಂಕಾ ಭಾರತ ಭೇಟಿ.

ಇವಾಂಕಾ ಸಮ್ಮೇಳನದಲ್ಲಿ ಭಾಗಿಯಾಗಲು ಭಾರತಕ್ಕೆ ಬಂದಿದ್ದರು. ಆದರೆ ಇದೇ ಸಮಯ ನೋಡಿ ಜೋಸ್ ಕೋವಾಕೋ ಎಂಬ ಕಾಮೆಡಿಯನ್,‘ಬ್ರೇಕಿಂಗ್: ಎಕ್ಸ್’ಕ್ಲೂಸಿವ್. ಭ್ರಷ್ಟ ಮಾಧ್ಯಮಗಳು ಇದನ್ನು ತೋರಿಸುವುದಿಲ್ಲ. ಇವಾಂಕಾ ಟ್ರಂಪ್ ಭಾರತಕ್ಕೆ ನಿಜವಾಗಿಯೂ ಬಂದಿದ್ದು ಆಧಾರ್ ಕಾರ್ಡು ಮಾಡಿಸಿಕೊಳ್ಳೋದಕ್ಕೆ’ ಎಂದು ಕೊವಾಕೊ ಹೆಸರಿನಲ್ಲಿ ಟ್ವೀಟ್ ಮಾಡಲಾಗಿತ್ತು.

ಈ ಟ್ವೀಟ್‌ಗೆ ಭಾರಿ ವೈರಲ್ ಆಗಿತ್ತು. ಈ ಹಂತದಲ್ಲಿ ಆಧಾರ್ ಪ್ರಾಧಿಕಾರ ಮಧ್ಯಪ್ರವೇಶಿಸಿ, ‘ಇವಾಂಕಾ ಭಾರತೀಯ ನಾಗರಿಕಳಲ್ಲ. ಅವರಿಗೆ ಆಧಾರ್ ಕಾರ್ಡು ಮಾಡಿಸಿಕೊಳ್ಳಲು ಆಗದು’ ಎಂದು ಸ್ಪಷ್ಟನೆ ನೀಡಿದೆ!