ರೋಮ್ :  ಇಟಲಿಯ ಡೆಪ್ಯುಟಿ ಪ್ರಧಾನ ಮಂತ್ರಿಯೊಂದಿಗೆ ಬ್ರೇಕಪ್ ಮಾಡಿಕೊಂಡಿರುವುದಾಗಿ ಪ್ರೇಯಸಿ ಗ್ಲಾಮರಸ್ ಟಿವಿ ಸ್ಟಾರ್ ನಗ್ನವಾಗಿರುವ ಬೆಡ್ ರೂಂ ಫೊಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ. 

ಪ್ರೇಯಸಿ ಎಲಿಸಾ ಇಸೋರ್ಡಿ  ಹಾಗೂ ಡೆಪ್ಯುಟಿ ಪ್ರಧಾನಿ ಮ್ಯಾಟೂ ಸಾಲ್ವನಿ ಬ್ರೇಕಪ್ ವಿಚಾರ ಇದೀಗ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ.

35 ವರ್ಷದ ಇಸ್ರೋರ್ಡಿ ಅವರು ಈ ಇನ್ ಸ್ಟಾಗ್ರಾಮ್ನಲ್ಲಿ ಬಿಳಿ ಟವೆಲ್ ಸುತ್ತಿಕೊಂಡು ಬೆಡ್ ಮೇಲೆ ಇರುವ ಫೋಟೊಗಳನ್ನು ಇನ್ ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. 

ಫೊಟೊ ಜೊತೆಗೆ ತಾವು ನಿಜವಾದ ಪ್ರೀತಿಗೆ ಬೆಲೆ ಕೊಡುತ್ತೇವೆ. ನಿಜವಾಗಲೂ ಮ್ಯಾಟೂ ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತೇನೆ. ಥ್ಯಾಂಕ್ಯೂ ಮ್ಯಾಟೂ ಎಂದು ಬರೆದುಕೊಂಡಿದ್ದಾರೆ. 

ಕಳೆದು ಮೂರು ವರ್ಷಗಳಿಂದ ಜೊತೆಗೆ ವಾಸಿಸಿದ್ದ ಇಬ್ಬರ ಸಂಬಂಧ ಇದೀಗ ಕೊನೆಗೊಳ್ಳುತ್ತಿದ್ದು, ಕಳೆದ ಕೆಲ ದಿನಗಳ ಹಿಂದೆಯೇ ಗಾಸಿಪ್ ಆಗಿತ್ತು. ಇದೀಗ ಅಧಿಕೃತವಾಗಿ ಅವರೇ ಘೋಷಿಸಿಕೊಂಡಿದ್ದಾರೆ.