ನೋಟು ಅಮಾನ್ಯ ಕ್ರಮವನ್ನು ಆರ್ಬಿಐ ಸರ್ಕಾರಕ್ಕೆ ಶಿಫಾರಸ್ಸು ಮಾಡಿರುವುದಿಲ್ಲ ಬದಲಾಗಿ ಸರ್ಕಾರವೇ ಆರ್ ಬಿಐ ಮೇಲೆ ಒತ್ತಡ ಹೇರಿದ್ದು ಎಂದು ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಟೀಕಿಸಿದ್ದಾರೆ.

ನವದೆಹಲಿ (ಫೆ.25): ನೋಟು ಅಮಾನ್ಯ ಕ್ರಮವನ್ನು ಆರ್ಬಿಐ ಸರ್ಕಾರಕ್ಕೆ ಶಿಫಾರಸ್ಸು ಮಾಡಿರುವುದಿಲ್ಲ ಬದಲಾಗಿ ಸರ್ಕಾರವೇ ಆರ್ ಬಿಐ ಮೇಲೆ ಒತ್ತಡ ಹೇರಿದ್ದು ಎಂದು ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಟೀಕಿಸಿದ್ದಾರೆ.

ನೋಟು ನಿಷೇಧದ ಬಳಿಕ ಅಂದಾಜು 2400 ಕೋಟಿ ನೋಟುಗಳನ್ನು ಹಿಂತೆಗೆದುಕೊಳ್ಳಲಾಗಿದೆ. ಆದರೆ ತಿಂಗಳಿಗೆ 300 ಕೋಟಿ ನೋಟುಗಳನ್ನು ಮಾತ್ರ ಮುದ್ರಿಸುವ ಸಾಮರ್ಥ್ಯವನ್ನು ಹೊಂದಿರುವಾಗ ಬಹುತೇಕ ಎಟಿಎಂಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಇನ್ನೂ ಕೂಡಾ ನಗದು ಕೊರತೆಯಿದೆ ಎಂದಿದ್ದಾರೆ.

ನೋಟು ಅಮಾನ್ಯದಿಂದ ಕಪ್ಪುಹಣ ವಾಪಸ್ ಬರುತ್ತದೆ ಎಂದು ಮೋದಿಯವರು ಹೇಳಿದ್ದರು ಆದರೆ ಪಂಜಾಬ್, ಉತ್ತರ ಪ್ರದೇಶ ಚುನಾವಣಾ ಸಂದರ್ಬದಲ್ಲಿ ಕೋಟ್ಯಾಂತರ ರೂಪಾಯಿ ಕಪ್ಪುಹಣವನ್ನು ವಶಪಡಿಸಿಕೊಳ್ಳಲಾಗಿದೆ. ದೇಶದಲ್ಲಿ ಇನ್ನೂ ಕಪ್ಪುಹಣವಿದೆಯೇ? ಉತ್ತರ ಪ್ರದೇಶದಲ್ಲಿ 121 ಕೋಟಿ, ಪಂಜಾಬ್ ನಲ್ಲಿ 70 ಕೋಟಿ ಸಿಕ್ಕಿದೆ. ಇದು ವೈಟ್ ಮನಿಯೇ ಎಂದು ಚಿದಂಬರಂ ಪ್ರಶ್ನಿಸಿದ್ದಾರೆ.