ನವದೆಹಲಿ (ಮೇ.01): ಬಾಲಿವುಡ್ ಬ್ಲಾಕ್ ಬ್ಯುಟಿ ಕಾಜೋಲ್ ಗೋಮಾಂಸ ತಿಂದಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್'ಲೋಡ್ ಮಾಡಿ ಟ್ರೋಲ್ ಆದ ನಂತರ ಇದೀಗ ತಮ್ಮ ವಿಡಿಯೋ ಬಗ್ಗೆ ಸ್ಪಷ್ಟೀಕರಣ ನೀಡಿದ್ದಾರೆ.

ನಾನು ಸೇವಿಸಿದ್ದು ಗೋಮಾಂಸವಾಗಿರಲಿಲ್ಲ. ಬದಲಿಗೆ ಎತ್ತಿನ ಮಾಂಸವಾಗಿತ್ತು. ಜನರ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡುವ ಉದ್ದೇಶ ನನಗಿಲ್ಲ ಎಂದು ಕಾಜೋಲ್ ಸಮರ್ಥನೆ ನೀಡಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಅವರು ಅಪ್ ಲೋಡ್ ಮಾಡಿದ ವಿಡಿಯೋ ಟ್ರೋಲ್ ಆಗಿ ಜನರ ಆಕ್ರೋಶಕ್ಕೆ ಗುರಿಯಾದ ಕೂಡಲೇ ಕಾಜೋಲ್ ಅದನ್ನು ಡಿಲೀಟ್ ಮಾಡಿದ್ದಾರೆ.

ವಿಡಿಯೋದಲ್ಲಿ ಇದ್ದ ಡಿಶ್ ನನ್ನ ಫ್ರೆಂಡ್ ಒಬ್ಬರು  ತಯಾರು ಮಾಡಿದ್ದು. ಅದು ಗೋಮಾಂಸವಾಗಿರಲಿಲ್ಲ.ಅಲ್ಲಿದ್ದದ್ದು ಎತ್ತಿನ ಮಾಂಸವಾಗಿತ್ತು.  ಕಾನೂನಿನ ಪ್ರಕಾರ ಎಲ್ಲಾ ಕಡೆ ಸಿಗುತ್ತದೆ. ಇದೊಂದು ಸೂಕ್ಷ್ಮವಾದ ವಿಚಾರವಾಗಿದ್ದು, ಜನರ ಭಾವನೆಗಳಿಗೆ ನೋವುಂಟು ಮಾಡುವ ುದ್ದೇಶ ನನಗಿಲ್ಲ. ಹಾಗಾಗಿ ನಾನು ಈ ಸ್ಷಪ್ಟೀಕರಣವನ್ನು ನೀಡುತ್ತಿದ್ದೇನೆ ಎಂದಿದ್ದಾರೆ.