Asianet Suvarna News Asianet Suvarna News

ಮೈನಿಂಗ್ ಆಯ್ತು ಎಚ್'ಡಿಕೆಗೆ ಈಗ ಐಟಿ ಕಂಟಕ: ಇದು ಯಡಿಯೂರಪ್ಪ ಅವರ ಕುತಂತ್ರ ಎಂದ ಕುಮಾರಸ್ವಾಮಿ

ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿ ಜಂತ್ಕಲ್ ಮೈನಿಂಗ್ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಪಡೆದಿರುವ ಬೆನ್ನಲ್ಲೇ ಈಗ ಮತ್ತೊಂದು ಗಂಭೀರ ಆರೋಪ ಕೇಳಿ ಬಂದಿದೆ. ಆದಾಯ ತೆರಿಗೆ ಇಲಾಖೆಯಲ್ಲಿ ಎಚ್​'ಡಿಕೆ ವಿರುದ್ಧ ದೂರು ದಾಖಲಾಗಿದೆ. ಕುಮಾರಸ್ವಾಮಿ ಕುಟುಂಬ ಬರೋಬ್ಬರಿ 20 ಸಾವಿರ ಕೋಟಿ ಬೇನಾಮಿ ಆಸ್ತಿ ಮಾಡಿದೆ. ಅಮೇರಿಕಾ, ದೆಹಲಿ ಸೇರಿದಂತೆ ವಿವಿಧ ಕಡೆಗಳಲ್ಲಿ, ದೇವೆಗೌಡರ ಹಿರಿಯ ಸೊಸೆಯ ಹೆಸರಲ್ಲಿ ಮತ್ತು ಜೆಡಿಎಸ್ ಕಾರ್ಯಕರ್ತರ ಹೆಸರಲ್ಲೂ ಅಕ್ರಮ ಆಸ್ತಿ ಇದೆ ಎಂದು ಆದಾಯ ತೆರಿಗೆ ಇಲಾಖೆಗೆ ಎಸ್ ವೆಂಕಟೇಶ್ ಎನ್ನುವ ಕಾಂಗ್ರೆಸ್ ಕಾರ್ಯಕರ್ತ ದೂರು ನೀಡಿದ್ದಾರೆ. ಕುಮಾರಸ್ವಾಮಿ ಮಾತ್ರ ನಾನವನಲ್ಲ ಎನ್ನುತ್ತಿದ್ದಾರೆ.

IT Shock To HD kumaraswamy

ಬೆಂಗಳೂರು(ಮೇ.25): ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿ ಜಂತ್ಕಲ್ ಮೈನಿಂಗ್ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಪಡೆದಿರುವ ಬೆನ್ನಲ್ಲೇ ಈಗ ಮತ್ತೊಂದು ಗಂಭೀರ ಆರೋಪ ಕೇಳಿ ಬಂದಿದೆ. ಆದಾಯ ತೆರಿಗೆ ಇಲಾಖೆಯಲ್ಲಿ ಎಚ್​'ಡಿಕೆ ವಿರುದ್ಧ ದೂರು ದಾಖಲಾಗಿದೆ. ಕುಮಾರಸ್ವಾಮಿ ಕುಟುಂಬ ಬರೋಬ್ಬರಿ 20 ಸಾವಿರ ಕೋಟಿ ಬೇನಾಮಿ ಆಸ್ತಿ ಮಾಡಿದೆ. ಅಮೇರಿಕಾ, ದೆಹಲಿ ಸೇರಿದಂತೆ ವಿವಿಧ ಕಡೆಗಳಲ್ಲಿ, ದೇವೆಗೌಡರ ಹಿರಿಯ ಸೊಸೆಯ ಹೆಸರಲ್ಲಿ ಮತ್ತು ಜೆಡಿಎಸ್ ಕಾರ್ಯಕರ್ತರ ಹೆಸರಲ್ಲೂ ಅಕ್ರಮ ಆಸ್ತಿ ಇದೆ ಎಂದು ಆದಾಯ ತೆರಿಗೆ ಇಲಾಖೆಗೆ ಎಸ್ ವೆಂಕಟೇಶ್ ಎನ್ನುವ ಕಾಂಗ್ರೆಸ್ ಕಾರ್ಯಕರ್ತ ದೂರು ನೀಡಿದ್ದಾರೆ. ಕುಮಾರಸ್ವಾಮಿ ಮಾತ್ರ ನಾನವನಲ್ಲ ಎನ್ನುತ್ತಿದ್ದಾರೆ.

ದೂರಿನ ಹಿಂದೆ ಯಡಿಯೂರಪ್ಪ ಇದ್ದಾರೆ ಎಂದ ಎಚ್​'ಡಿಕೆ

ತಮ್ಮ ಮೇಲಿನ ಆರೋಪ ನಿರಾಕರಿಸಿದ ಕುಮಾರಸ್ವಾಮಿ ಇದೆಲ್ಲವೂ ರಾಜಕೀಯ ಪ್ರೇರಿತ. ಇದರ ಹಿಂದೆ ಸ್ವತಃ ಯಡಿಯೂರಪ್ಪನವರ ಕೈ ಕೆಲಸ ಮಾಡಿದೆ. ದೂರಿನ ಕಾಪಿ ಸಹ ಬಿಜೆಪಿ ಕಚೇರಿಯಲ್ಲೇ ರೆಡಿಯಾಗಿದೆ ಎಂದು ಆರೋಪಿಸಿದ್ದಾರೆ. ಅಷ್ಟೇ ಅಲ್ಲ  ಚುನಾವಣಾ ದೃಷ್ಟಿಯಿಂದ ಇಂಥ ಆರೋಪ ಮಾಡಿದ್ದಾರೆ. ದಾಖಲೆಗಳಿದ್ದರೆ ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದ್ದರು.

ಆರೋಪ-ಪ್ರತ್ಯಾರೋಪ ಎಲ್ಲವೂ ನಡೆಯುತ್ತಿದೆ ನಿಜ. ಆದರೆ ದೂರು ದಾಖಲಿಸಿದ ಆ ಎಸ್ ವೆಂಕಟೇಶ್ ಯಾರೆಂಬುದು ಮಾತ್ರ ಇನ್ನೂ ಖಚಿತವಾಗಿಲ್ಲ.

Follow Us:
Download App:
  • android
  • ios