ಇನ್ನು ಕರ್ನಾಟಕ ಎಐಎಡಿಎಂಕೆ ಕಾರ್ಯದರ್ಶಿ ಪುಗಳೇಂದಿ ಮನೆ ಮೇಲೂ ಐಟಿ ದಾಳಿ ನಡೆದಿದ್ದು, ಮಹತ್ವದ ದಾಖಲೆ ಪತ್ರ ಪರಿಶೀಲನೆ ನಡೆಯುತ್ತಿದೆ.
ಚೆನ್ನೈ(ನ.09): ಇಂದು ಬೆಳ್ಳಂಬೆಳಗ್ಗೆ ಐಟಿ ಅಧಿಕಾರಿಗಳು ಎಐಎಡಿಎಂಕೆ ನಾಯಕಿ ಶಶಿಕಲಾ ಆಪ್ತರ ಮನೆಗಳ ಮೇಲೆ ದಾಳಿ ನಡೆಸಿದ್ದು, ತೀವ್ರ ತಪಾಸಣೆ ನಡೆಸುತ್ತಿದ್ದಾರೆ.
ತಮಿಳುನಾಡಿನ 120 ಸ್ಥಳಗಳು ಸೇರಿದಂತೆ ಹೈದರಾಬಾದ್, ಬೆಂಗಳೂರು, ಮುಂಬೈ, ದೆಹಲಿ ಮೇಲೆ ಐಟಿ ದಾಳಿ ನಡೆಸಿದ್ದು ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.

ಪ್ರಮುಖವಾಗಿ ಜಯಾ ಟಿವಿ ಚಾನಲ್ ಕಚೇರಿ, ಅದರ ಎಂಡಿ ವಿವೇಕ್ ಜಯರಾಮನ್, ಶಶಿಕಲಾ ಒಡೆತನದ ಕಂಪನಿಗಳ ಮೇಲೆ, ಟಿಟಿವಿ ದಿನಕರನ್ ಹಾಗೂ ಆತನ ಸಂಬಂಧಿಕರ ಮನೆ, ಜೆ. ಇಳವರಸಿ ಪುತ್ರಿಯರ ಮನೆ ಸೇರಿದಂತೆ ಒಟ್ಟಾರೆ 160 ಸ್ಥಳಗಳಲ್ಲಿ 700 ಐಟಿ ಅಧಿಕಾರಿಗಳ ತಂಡ ಏಕಕಾಲದಲ್ಲಿ ದಾಳಿ ನಡೆಸಿದೆ.
ಇನ್ನು ಕರ್ನಾಟಕ ಎಐಎಡಿಎಂಕೆ ಕಾರ್ಯದರ್ಶಿ ಪುಗಳೇಂದಿ ಮನೆ ಮೇಲೂ ಐಟಿ ದಾಳಿ ನಡೆದಿದ್ದು, ಮಹತ್ವದ ದಾಖಲೆ ಪತ್ರ ಪರಿಶೀಲನೆ ನಡೆಯುತ್ತಿದೆ.