ದೇಶದ ಹಲವೆಡೆ ಇದೀಗ, ಐಟಿ ಶಾಕ್'ನದ್ದೇ ಸುದ್ದಿ, ಕಪ್ಪುಕುಳಗಳ ಬೆನ್ನತ್ತಿ ತೆರಿಗೆ ಇಲಾಖೆ ಮಾಡುತ್ತಿರುವ ದಾಳಿಗಳು ದಿನಗಳೆದಂತೆ ಜಾಸ್ತಿಯಾಗ್ತಾನೇ ಇದೆ. ಕಳೆದ 24 ಗಂಟೆಗಳಲ್ಲಿ  ತೆರಿಗೆ ವಂಚಕರ ಮೇಲೆ ದಾಳಿ ನಡೆಸಿರುವ ಐಟಿ ಅಧಿಕಾರಿಗಳು, ಕಪ್ಪುಕುಳಗಳ ಭ್ರಷ್ಚಾಚಾರವನ್ನು ಬಯಲಿಗೆಳೆದಿದೆ.

ಬೆಂಗಳೂರು (ಡಿ.24): ನೋಟು ಅಮಾನ್ಯ ಕ್ರಮದ ಬಳಿಕ ದೇಶದೆಲ್ಲೆಡೆ ಅದೆಷ್ಟೋ ಐಟಿ ದಾಳಿಗಳು ನಡೆಯುತ್ತಲೇ ಇದೆ. ಇದಕ್ಕೆ ಕರ್ನಾಟಕ ಕೂಡ ಹೊರತಾಗಿಲ್ಲ. ಕಳೆದ 24 ಗಂಟೆಗಳಲ್ಲೂ ದೇಶದ ಹಲವೆಡೆ ಐಟಿ ರೇಡ್ ನಡೆದಿದ್ದು, ತೆರಿಗೆ ವಂಚಕರಿಗೆ ಬಿಸಿ ಮುಟ್ಟಿದೆ.

ದೇಶದ ಹಲವೆಡೆ ಇದೀಗ, ಐಟಿ ಶಾಕ್'ನದ್ದೇ ಸುದ್ದಿ, ಕಪ್ಪುಕುಳಗಳ ಬೆನ್ನತ್ತಿ ತೆರಿಗೆ ಇಲಾಖೆ ಮಾಡುತ್ತಿರುವ ದಾಳಿಗಳು ದಿನಗಳೆದಂತೆ ಜಾಸ್ತಿಯಾಗ್ತಾನೇ ಇದೆ. ಕಳೆದ 24 ಗಂಟೆಗಳಲ್ಲಿ ತೆರಿಗೆ ವಂಚಕರ ಮೇಲೆ ದಾಳಿ ನಡೆಸಿರುವ ಐಟಿ ಅಧಿಕಾರಿಗಳು, ಕಪ್ಪುಕುಳಗಳ ಭ್ರಷ್ಚಾಚಾರವನ್ನು ಬಯಲಿಗೆಳೆದಿದೆ.

24 ಗಂಟೆಗಳಲ್ಲಿದೇಶದಹಲವೆಡೆಐಟಿದಾಳಿ

  • ವಿಮಾನ ನಿಲ್ದಾಣದಲ್ಲಿ ನಡೆಯಿತು ಐಟಿ ರೇಡ್
  • ಸಿಕ್ಕಿದ್ದು 53.78 ಲಕ್ಷ ಹೊಸ ನೋಟುಗಳು
  • ಗೋಪಾಲನ್ ಸಮೂಹ ಸಂಸ್ಥೆಗೂ ಐಟಿ ಶಾಕ್
  • ​​ನಲ್ಲಿ 4 ಲಕ್ಷ ಹೊಸ ನೋಟು ಜಪ್ತಿ!

ರಾಷ್ಟ್ರ ರಾಜಧಾನಿ ದೆಹಲಿಯ ಇಂದಿರಾಗಾಂಧಿ ಏರ್​'ಪೋರ್ಟ್​ನಲ್ಲಿ 2000 ಮುಖಬೆಲೆಯ 53.78 ಲಕ್ಷ ಹೊಸ ನೋಟುಗಳು ಪತ್ತೆಯಾಗಿದ್ದು, ಕೈಗಾರಿಕಾ ಭದ್ರತಾ ಪಡೆಯಿಂದ ಈ ಹಣವನ್ನ ವಶಪಡಿಸಿಕೊಳ್ಳಲಾಗಿದೆ. ಇನ್ನು. ಸಿಲಿಕಾನ್ ಸಿಟಿಯ ಪ್ರಸಿದ್ಧ ಶಾಪಿಂಗ್ ಮಾಲ್ ಆದ ಗೋಪಾಲನ್ ಮಾಲ್​ನ ಸಮೂಹ ಸಂಸ್ಥೆ ಸೇರಿದಂತೆ 20ಕ್ಕೂ ಹೆಚ್ಚು ಕಡೆ ನಿನ್ನೆ ಬೆಳ್ಳಂಬೆಳಗ್ಗೆ ಐಟಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಈ ವೇಳೆ ದಾಖಲೆಗಳಿಲ್ಲದ 47.74 ಕೋಟಿ ಹಣವಿರೋ ಮಾಹಿತಿ ಸಿಕ್ಕಿದೆ. ಇತ್ತ, ರಾಜ್ಯದ ಗಡಿ ನಾಡು ಬೀದರ್ ನಗರದಲ್ಲೂ ದಾಖಲೆ ಇಲ್ಲದ 2 ಸಾವಿರ ಮುಖಬೆಲೆಯ 4 ಲಕ್ಷ ಹೊಸ ನೋಟುಗಳನ್ನು ಜಪ್ತಿ ಮಾಡಲಾಗಿದೆ.

2015-16ನೇ ಸಾಲಿನಲ್ಲಿ 70 ಲಕ್ಷ ತೆರಿಗೆ ವಂಚಕರು!

ಮತ್ತೊಂದು ಕುತೂಹಲಕಾರಿ ಅಂಶವೆಂದರೆ 2015 ಮತ್ತು 2016 ನೇ ಸಾಲಿನಲ್ಲಿ, ದೇಶದಾದ್ಯಂತ 70 ಲಕ್ಷ ತೆರಿಗೆದಾರದು ತೆರಿಗೆಯನ್ನೇ ಕಟ್ಟಿಲ್ಲ ಅನ್ನೋ ಸತ್ಯ ಬಯಲಾಗಿದೆ.