ಬೆಂಗಳೂರು :  ಸ್ಯಾಂಡಲ್‌ವುಡ್ ನಟ ಹಾಗೂ ನಿರ್ಮಾಪಕರ ಮೇಲಿನ ಐಟಿ ದಾಳಿಗೆ ಮೂರು ತಿಂಗಳ ಕಾಲ ಮೆಗಾ ಪ್ಲಾನ್ ವೊಂದು ರೂಪಿಸಲಾಗಿತ್ತು ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ. 

ದಾಳಿಗೂ ಮುನ್ನ 3 ತಿಂಗಳ ಕಾಲ ಅಗತ್ಯ ಮಾಹಿತಿ ಕಲೆಹಾಕಲಾಗಿತ್ತು. ಕಾರ್ಯಚರಣೆ ನಡೆಸುವ ಪ್ರದೇಶ ಗಳನ್ನು ಗುರುತಿಸಿ, ಅಧಿಕಾರಿಗಳು ನಿಯೋಜಿಸಲಾಗಿತ್ತು. 

ಸಿನಿರಂಗದವ ರಿಗೆ ಸೇರಿದ ಐದು ಪ್ರದೇಶಗಳ ಸರ್ವೇ ನಡೆಸಿ 21 ಆವರಣಗಳಲ್ಲಿ ಕಾರ್ಯಾಚರಣೆ ನಡೆಸಲಾಗಿದ್ದು, ಕರ್ನಾಟಕ-ಗೋವಾ ವಲಯದ ವಿವಿಧ ಪ್ರದೇಶಗಳ ಒಟ್ಟು 180 ಕ್ಕೂ ಅಧಿಕಾರಿಗಳು ಈ ದಾಳಿಯಲ್ಲಿ ಭಾಗವಹಿಸಿದ್ದರು.