Asianet Suvarna News Asianet Suvarna News

ಡಿಕೆಶಿ ಆಪ್ತ ವಿಜಯ್ ಮುಳಗುಂದ ಮೇಲೆ ಐಟಿ ರೇಡ್; ಕಾಂಗ್ರೆಸ್'ಗೆ ಮತ್ತೆ ಶಾಕ್!

ಇಂಧನ ಸಚಿವ ಡಿಕೆ ಶಿವಕುಮಾರ್ ಆಪ್ತರಾಗಿರುವ ವಿಜಯ್ ಮುಳಗುಂದ ಅವರು ಕೆಪಿಸಿಸಿ ಕಾರ್ಯದರ್ಶಿಯಾಗಿದ್ದಾರೆ. ಗುಜರಾತ್'ನ ಕಾಂಗ್ರೆಸ್ ಶಾಸಕರಿಗೆ ಡಿಕೆಶಿ ಆತಿಥ್ಯ ಕೊಟ್ಟಾಗ ಅದರ ಜವಾಬ್ದಾರಿಯನ್ನು ನಿಭಾಯಿಸಿದವರಲ್ಲಿ ವಿಜಯ್ ಮುಳಗುಂದ ಕೂಡ ಒಬ್ಬರು. ಎಸ್ಸೆಮ್ ಕೃಷ್ಣ ಆಡಳಿತದ ಅವಧಿಯಲ್ಲಿ ಕಾವೇರಿ ಹ್ಯಾಂಡ್'ಲೂಮ್ ಅಧ್ಯಕ್ಷರಾಗಿದ್ದರು.

it raid on dks close aide vijay mulugund

ಬೆಂಗಳೂರು(ಆ. 30): ಕಾಂಗ್ರೆಸ್ ಮುಖಂಡರ ಮೇಲಷ್ಟೇ ಐಟಿ ರೇಡ್ ನಡೆಯುತ್ತಿದೆ ಎಂಬ ಆರೋಪ ಕೇಳಿಬರುತ್ತಿರುವ ಬೆನ್ನಲ್ಲೇ ಇದೀಗ ಡಿಕೆಶಿ ಆಪ್ತರೆನಿಸಿರುವ ವಿಜಯ್ ಮುಳಗುಂದ್ ಎಂಬುವರ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ಮಾಡಿದೆ. ವಿಜಯ್ ಮುಳಗುಂದ ಅವರ ರಾಜಾಜಿನಗರದಲ್ಲಿನ ನಿವಾಸದ ಮೇಲೆ ಬುಧವಾರ ಐಟಿ ರೇಡ್ ಆಗಿದೆ.

ಇಂಧನ ಸಚಿವ ಡಿಕೆ ಶಿವಕುಮಾರ್ ಆಪ್ತರಾಗಿರುವ ವಿಜಯ್ ಮುಳಗುಂದ ಅವರು ಕೆಪಿಸಿಸಿ ಕಾರ್ಯದರ್ಶಿಯಾಗಿದ್ದಾರೆ. ಗುಜರಾತ್'ನ ಕಾಂಗ್ರೆಸ್ ಶಾಸಕರಿಗೆ ಡಿಕೆಶಿ ಆತಿಥ್ಯ ಕೊಟ್ಟಾಗ ಅದರ ಜವಾಬ್ದಾರಿಯನ್ನು ನಿಭಾಯಿಸಿದವರಲ್ಲಿ ವಿಜಯ್ ಮುಳಗುಂದ ಕೂಡ ಒಬ್ಬರು. ಎಸ್ಸೆಮ್ ಕೃಷ್ಣ ಆಡಳಿತದ ಅವಧಿಯಲ್ಲಿ ಕಾವೇರಿ ಹ್ಯಾಂಡ್'ಲೂಮ್ ಅಧ್ಯಕ್ಷರಾಗಿದ್ದರು.

ಒರಾಯನ್ ಮಾಲ್ ಸಮೀಪವಿರುವ ಮುಳಗುಂದ ಅವರ ಮನೆ ಮೇಲೆ ದಾಳಿ ಮಾಡಿರುವ ಐಟಿ ಅಧಿಕಾರಿಗಳು ಮಧ್ಯಾಹ್ನದವರೆಗೂ ಶೋಧ ಕಾರ್ಯವನ್ನು ಮುಂದುವರಿಸುವ ಸಾಧ್ಯತೆ ಇದೆ.

ಡಿಕೆ ಶಿವಕುಮಾರ್ ಮೇಲೆ ಐಟಿ ದಾಳಿಯಾದಾಗ ಅವರ ಅನೇಕ ಆಪ್ತರ ಮನೆಗಳ ಮೇಲೂ ದಾಳಿಯಾಗಿತ್ತು. ಆದರೆ, ಗುಜರಾತ್ ಶಾಸಕರ ಆತಿಥ್ಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ವಿಜಯ್ ಮುಳಗುಂದ ಅವರ ಮೇಲೆ ಆಗ ಯಾಕೆ ರೇಡ್ ಆಗಲಿಲ್ಲ ಎಂಬ ಪ್ರಶ್ನೆ ಸಹಜವಾಗೇ ಏಳುತ್ತಿದೆ. ಇಷ್ಟು ದಿನವಾದ ಮೇಲೆ ಮುಳಗುಂದ ಮನೆ ಮೇಲೆ ದಾಳಿ ನಡೆದಿರುವುದರ ಹಿಂದಿನ ಉದ್ದೇಶ ಏನು ಎಂಬುದು ಸದ್ಯಕ್ಕೆ ಗೊತ್ತಾಗಿಲ್ಲ.

Follow Us:
Download App:
  • android
  • ios