ಕರ್ನಾಟಕದ ಪ್ರಭಾವಿ ರಾಜಕಾರಣಿ ಡಿ.ಕೆ.ಶಿವಕುಮಾರ್ ‘ಸಾಮ್ರಾಜ್ಯ'ದ ವಿರುದ್ಧ ದಾಳಿಗಿಳಿಯುವ ಮೂಲಕ ರಾಷ್ಟ್ರ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿರುವ ಆದಾಯ ತೆರಿಗೆ ಇಲಾಖೆಯು, ತನ್ನ ಈ ಶಿಕಾರಿಗೆ ಆರು ತಿಂಗಳ ಹಿಂದಿನಿಂದಲೇ ಸಕಲ ರೀತಿಯಲ್ಲೂ ಪೂರ್ವ ಸಿದ್ಧತೆ ನಡೆಸಿತ್ತು ಎಂಬ ಕುತೂಹಲಕಾರಿ ಮಾಹಿತಿ ಹೊರಬಿದ್ದಿದೆ.

ಬೆಂಗಳೂರು(ಆ.03): ಕರ್ನಾಟಕದ ಪ್ರಭಾವಿ ರಾಜಕಾರಣಿ ಡಿ.ಕೆ.ಶಿವಕುಮಾರ್ ‘ಸಾಮ್ರಾಜ್ಯ'ದ ವಿರುದ್ಧ ದಾಳಿಗಿಳಿಯುವ ಮೂಲಕ ರಾಷ್ಟ್ರ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿರುವ ಆದಾಯ ತೆರಿಗೆ ಇಲಾಖೆಯು, ತನ್ನ ಈ ಶಿಕಾರಿಗೆ ಆರು ತಿಂಗಳ ಹಿಂದಿನಿಂದಲೇ ಸಕಲ ರೀತಿಯಲ್ಲೂ ಪೂರ್ವ ಸಿದ್ಧತೆ ನಡೆಸಿತ್ತು ಎಂಬ ಕುತೂಹಲಕಾರಿ ಮಾಹಿತಿ ಹೊರಬಿದ್ದಿದೆ.

ದಾಳಿ ಎಷ್ಟು ಮಹತ್ವ ಪಡೆದಿತ್ತು ಎಂದರೆ ಬು‘ವಾರ ಸಂಜೆ ಖುದ್ದು ಪ್ರಧಾನಿ ಕಚೇರಿ, ಹಣಕಾಸು ಇಲಾಖೆಯು ಆಪರೇಷನ್‌ನಲ್ಲಿ ತೊಡಗಿದ್ದ ಅಧಿಕಾರಿಗಳಿಂದ ಮಾಹಿತಿ ಪಡೆದಿವೆ ಎನ್ನಲಾಗಿದೆ. ಹೀಗಾಗಿ ಇಡೀ ಕಾರ್ಯಾಚರಣೆ ಪೂರ್ವ ಸಿದ್ಧತೆ ಮತ್ತು ನಂತರ ಬೆಳವಣಿಗೆ ಕುರಿತ ಚಿತ್ರಣ ಹೀಗಿದೆ.

ದಾಳಿಗೆ ಸಿದ್ಧತೆ ಹೀಗಿತ್ತು:

ಈ ಬಹುದೊಡ್ಡ ರಾಜಕೀಯ ಬೇಟೆಗೆ ಕೇಂದ್ರ ಹಣಕಾಸು ಸಚಿವಾಲಯ ಮುಂದಾಗಿತ್ತು. ಇದರ ಯಶಸ್ವಿಗೆ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರ ಪರಮಾಪ್ತ ಅಧಿಕಾರಿ ಆಗಿರುವ ತೆರಿಗೆ ಇಲಾಖೆಯ ತನಿಖಾ ವಿಭಾಗದ ಡಿಜಿಪಿ ಬಾಲಕೃಷ್ಣ ಅವರಿಗೆ ಸಾರಥ್ಯವಹಿಸಿತ್ತು. ಚೆನ್ನೈ ಪ್ರಾದೇಶಿಕ ಡಿಜಿಪಿ ಆಗಿದ್ದ ಬಾಲಕೃಷ್ಣನ್ ಅವರನ್ನು 6 ತಿಂಗಳ ಹಿಂದೆ ಕರ್ನಾಟಕ ಮತ್ತು ಗೋವಾ ಪ್ರಾದೇಶಿಕ ವಿಭಾಗಕ್ಕೆ ಕೇಂದ್ರ ಸರ್ಕಾರವು ವರ್ಗಾವಣೆಗೊಳಿಸಿತ್ತು. ಕರ್ನಾಟಕ ವಲಯಕ್ಕೆ ಬರುವ ಮುನ್ನ ಬಾಲಕೃಷ್ಣ ಅವರೇ, ತಮಿಳುನಾಡಿನಲ್ಲಿ ಅಕ್ರಮ ಗುಟಕಾ ಮಾರಾಟ ಹಗರಣ ಬಯಲುಗೊಳಿಸಿದ್ದರು. ಈ ಹಗರಣದಲ್ಲಿ ಅಲ್ಲಿನ ಸಚಿವರು ಹಾಗೂ ಅಧಿಕಾರಿಗಳು ಸಿಲುಕಿದ್ದು, ಈಗ ಸಚಿವರ ತಲೆ ದಂಡಕ್ಕೆ ವಿಪಕ್ಷಗಳು ಹೋರಾಟಕ್ಕಿಳಿದಿವೆ. ಚಾಣಾಕ್ಷ ತನಿಖೆಗೆ ಹೆಸರು ಗಳಿಸಿರುವ ಬಾಲ ಕೃಷ್ಣ ಅವರು, ರಾಜ್ಯದಲ್ಲಿ ಆದಾಯ ಅಕ್ರಮ ಗಳ ಮಾಹಿತಿ ಹೆಕ್ಕುವ ಕಾರ್ಯವನ್ನು ಬಿರುಸು ಗೊಳಿಸಿದ್ದರು. ಮಾಹಿತಿ ಪತ್ತೆ ಮುಗಿದ ನಂತರ ಅವರ ಐಟಿ ತಂಡವು, ಸಚಿವ ರಮೇಶ್ ಜಾರಕಿಹೊಳಿ, ಮೇಲ್ಮನೆ ಸದಸ್ಯ ಕೆ.ಗೋವಿಂದ ರಾಜು, ರಾಜ್ಯ ಕಾಂಗ್ರೆಸ್ ಮಹಿಳಾ ವಿಭಾಗದ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳಕರ್ ಹಾಗೂ ಸಹಕಾರ ವಲಯದ ಹೀಗೆ ಸರಣಿ ದಾಳಿ ಮೂಲಕ ಕಾಂಗ್ರೆಸ್ ಪಾಳಯದಲ್ಲಿ ನಡುಕ ಹುಟ್ಟಿಸಿತ್ತು.

ಶಿವನಿಗೆ ಕಾಡಿದ ‘ಲಕ್ಷ್ಮೀ’:

ಡಿ.ಕೆ.ಶಿವ ಕುಮಾರ್ ಸಾಮ್ರಾಜ್ಯದ ಮೇಲಿನ ದಾಳಿಗೆ, ಈ ಹಿಂದೆ ನಡೆದಿದ್ದ ಮೂರು ಪ್ರಕರಣಗಳಿಂದಾಗಿ ಆದಾಯ ತೆರಿಗೆ ಇಲಾಖೆಗೆ ಸುಳಿವು ಸಿಕ್ಕಿತ್ತು ಎಂದು ತಿಳಿದು ಬಂದಿದೆ. ಕಾಂಗ್ರೆಸ್ ನಾಯಕಿ ಲಕ್ಷ್ಮೀ ಹೆಬ್ಬಾಳಕರ್ ನಿವಾಸದ ಮೇಲೆ ದಾಳಿ ವೇಳೆ, ತುಮಕೂರು ಹಾಗೂ ಬೆಂಗಳೂರು ಗ್ರಾಮಾಂತರ-ರಾಮನಗರ ಡಿಸಿಸಿ ಬ್ಯಾಂಕ್'ಗಳಲ್ಲಿ ಸಾಲ ಪಡೆಯಲು ಅವರಿಗೆ ಸಚಿವರು ಸಹಕರಿಸಿದ್ದ ಎಂಬ ಆರೋಪ ಬಂದಿತ್ತು. ಅಲ್ಲದೆ, ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಹಾಗೂ ವಿಧಾನಪರಿಷತ್ ಸದಸ್ಯ ಎಸ್.ರವಿ ಅವರು ಡಿಕೆಶಿ ಸೋದರ ಸಂಬಂಧಿಯೂ ಆಗಿರುವುದು ಮತ್ತಷ್ಟು ಪುಷ್ಟಿ ನೀಡಿತ್ತು. ನೋಟು ಅಮಾನ್ಯೀಕರಣ ಬಳಿಕ ಅಕ್ರಮ ಹಣ ಹರಿದಿದೆ ಎಂದು ಶಂಕೆ ಮೇರೆಗೆ ಸಹಕಾರಿ ವಲಯದ ಮೇಲೆ ಐಟಿ ದಾಳಿ ನಡೆಸಿತ್ತು. ಹೈಕಮಾಂಡ್ ಕಪ್ಪ ಕಾಣಿಕೆ ವಿವಾದದಲ್ಲಿ ಎಂಎಲ್ಸಿ ಕೆ.ಗೋವಿಂದರಾಜು ಡೈರಿಯಲ್ಲಿ ಶಿವಕುಮಾರ್ ಹೆಸರು ಉಲ್ಲೇಖವಾಗಿತ್ತು. ಈ ಸಂಬಂಧ ಐಟಿ ವಿಚಾರಣೆ ಸಹ ಎದುರಿಸಿದ್ದರು. ಈ ಪ್ರಕರಣದ ಬೆನ್ನಹತ್ತಿದ ಬಾಲಕೃಷ್ಣ ನೇತೃತ್ವದ ತಂಡವು, ಆರು ತಿಂಗಳಿಂದ ಇಂಧನ ಸಚಿವರ ಆದಾಯ ವ್ಯವಹಾರ ಕುರಿತು ಮಾಹಿತಿ ಸಂಗ್ರಹಕ್ಕಿಳಿದಿತ್ತು ಎನ್ನಲಾಗಿದೆ. ಹೀಗೆ ಸಚಿವರ ಆಪ್ತ, ಸಂಬಂಧಿಕರು ಸೇರಿದಂತೆ ಹಲವು ಮೂಲಗಳಿಂದ ಮಾಹಿತಿ ಕಲೆ ಹಾಕಿದ ಐಟಿ ತಂಡವು, ಮಂಗಳವಾರ ರಾತ್ರಿ ಕೇಂದ್ರದ ಸಮ್ಮತಿ ಪಡೆದು ಬುಧವಾರ ಬೆಳಗಿನ ಜಾವ ದಾಳಿಗಿಳಿದಿದೆ ಎಂದು ಐಟಿ ಮೂಲಗಳು ‘ಕನ್ನಡಪ್ರ‘’ಕ್ಕೆ ಮಾಹಿತಿ ನೀಡಿವೆ.

300 ಅಧಿಕಾರಿಗಳ ಟೀಂ:.

ಡಿಕೆಶಿ ಕೋಟೆ ಮೇಲೆ ದಾಳಿಗಿಳಿಯಲು ನಿ‘ರ್ರಿಸಿದ್ದ ಬಾಲಕೃಷ್ಣ ಅವರು, ಇದಕ್ಕಾಗಿ 300 ಅಧಿಕಾರಿಗಳ ಬೃಹತ್ ತಂಡ ಕಟ್ಟಿದ್ದರು. ಈ ತಂಡಗಳಿಗೆ ಇಂ‘ನ ಸಚಿವರ ಸಂಬಂಧಿಕರು, ಆಪ್ತರು ಹಾಗೂ ಪಾಲುದಾರಿಕೆ ಹೊಂದಿರುವ ಸಂಸ್ಥೆಗಳ ತಪಾಸಣೆಗೆ 39 ಸರ್ಚ್ ವಾರೆಂಟ್'ಗಳನ್ನು ನೀಡಿದ ಡಿಜಿಪಿ, ಚೆನ್ನೆ‘, ದೆಹಲಿ, ಬೆಂಗಳೂರು, ಮೈಸೂರು ಹಾಗೂ ಕನಕಪುರದ ಸುಮಾರು 60 ಸ್ಥಳಗಳ ಮೇಲೆ ದಾಳಿಗೆ ಸೂಚಿಸಿದ್ದರು.

ಚೆನ್ನೈ ಮೂಲದ ಎಲ್‌ಇಡಿ ಕಂಪನಿಯಲ್ಲಿ ಡಿಕೆಶಿ ಪಾಲುದಾರಿಕೆ ಹೊಂದಿದ್ದು, ಈ ಹಿನ್ನೆಲೆಯಲ್ಲಿ ಆ ಕಂಪನಿ ತಪಾಸಣೆ ನಡೆದಿದೆ ಎಂದು ಗೊತ್ತಾಗಿದೆ. ಬೆಂಗಳೂರು ಕೇಂದ್ರ ಕಚೇರಿಯಿಂದಲೇ ಇಡೀ ಕಾರ್ಯಾಚರಣೆ ಉಸ್ತುವಾರಿ ವಹಿಸಿದ್ದ ಬಾಲಕೃಷ್ಣ ಅವರು, ಪ್ರತಿ ಕ್ಷಣ ಮಾಹಿತಿಯನ್ನು ಕೇಂದ್ರ ಸರ್ಕಾರಕ್ಕೆ ರವಾನಿಸಿದ್ದಾರೆ. ಪೂರ್ವ ಸೂಚನೆಯಿಂತ ಗಾಲ್ಫ್ ಆಟದಲ್ಲಿ ನೆಪದಲ್ಲಿ ಈಗಲ್ ಟನ್ ರೆಸಾರ್ಟ್‌ಗೆ ಅಧಿಕಾರಿಗಳು ನುಗ್ಗಿದ್ದಾರೆ ಎಂದು ಮೂಲಗಳು ಹೇಳಿವೆ.