ಎನ್.ಚಲುವರಾಯಸ್ವಾಮಿ ಆಪ್ತನ ಮನೆ ಮೇಲೆ ಐಟಿ ದಾಳಿ ನಡೆದಿದೆ. ಚೆಲುವರಾಯ ಸ್ವಾಮಿ  ಆಪ್ತ, ಉದ್ಯಮಿ ಲಕ್ಷ್ಮಿನಾರಾಯಣ್ ಮನೆ ಮೇಲೆ ಬೆಂಗಳೂರು, ಮೈಸೂರಿನಿಂದ ಬಂದಿದ್ದ ಸುಮಾರು 30 ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.   

ಬೆಂಗಳೂರು (ಏ.29): ಎನ್.ಚಲುವರಾಯಸ್ವಾಮಿ ಆಪ್ತನ ಮನೆ ಮೇಲೆ ಐಟಿ ದಾಳಿ ನಡೆದಿದೆ. 

ಚೆಲುವರಾಯ ಸ್ವಾಮಿ ಆಪ್ತ, ಉದ್ಯಮಿ ಲಕ್ಷ್ಮಿನಾರಾಯಣ್ ಮನೆ ಮೇಲೆ ಬೆಂಗಳೂರು, ಮೈಸೂರಿನಿಂದ ಬಂದಿದ್ದ ಸುಮಾರು 30 ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಮನೆಯಲ್ಲಿ ಸಿಕ್ಕ 30 ಸಾವಿರ ಹಣವನ್ನು ವಿಚಾರಣೆ ಬಳಿಕ ಅಧಿಕಾರಿಗಳು ವಾಪಸ್ ನೀಡಿದ್ದಾರೆ. ಅದೇ ಗ್ರಾಮದ ಚಲುವನಾರಾಯಣಸ್ವಾಮಿ ಆಪ್ತರಾದ ಧನಂಜಯ್, ಬೆಟ್ಟೇಗೌಡ ಮನೆ ಮೇಲೂ ಐಟಿ ದಾಳಿ ನಡೆದಿದೆ. 

ಚುನಾವಣೆಗೆ ಹಣ ಸಾಗಿಸುತ್ತಿದ್ದಾರೆ ಎಂಬ ಆರೋಪದ ಮೇಲೆ ಐಟಿ ದಾಳಿ ನಡೆಸಲಾಗಿದೆ.