ರಾತ್ರಿಯಿಡೀ ಡಿಕೆಶಿ ಮನೆಯಲ್ಲಿ ದಾಖಲೆಗಳ ಪರಿಶೀಲನೆ ಕಾರ್ಯ ಸಾಗಿತ್ತು. ಇದಕ್ಕಾಗಿ ಐಟಿ ಕೇಂದ್ರ ಕಚೇರಿಯಿಂದ ಮೂವರು ಲೆಕ್ಕ ಪರಿಶೋಧಕರನ್ನು ಕರೆಸಿಕೊಳ್ಳಲಾಗಿತ್ತು. ಡಿಕೆಶಿಯವರ ಆಪ್ತ ಸಹಾಯಕ ಚಂದ್ರಶೇಖರ್ ಅವರ ಜೊತೆಯಲ್ಲಿ ಲೆಕ್ಕಪರಿಶೋಧಕರು ಡಿಕೆಶಿ ಮನೆಗೆ ತೆರಳಿದರು. 6ಕ್ಕೂ ಹೆಚ್ಚು ತಂಡಗಳಿಂದ ಡಿಕೆಶಿ ಮನೆಯಲ್ಲಿ ಕಡತಗಳ ಪರಿಶೀಲನೆ ಮತ್ತು ಮಹಜರು ಕಾರ್ಯ ನಡೆಯಿತು.

ಬೆಂಗಳೂರು(ಆ. 05): ಸಚಿವ ಡಿಕೆ ಶಿವಕುಮಾರ್ ಮನೆಯಲ್ಲಿ ಐಟಿ ಅಧಿಕಾರಿಗಳು ತಡರಾತ್ರಿಯೂ ತಪಾಸಣೆ ಬಿಡಲಿಲ್ಲ. ಕುತೂಹಲದ ವಿಷಯವೆಂದರೆ ಮಧ್ಯರಾತ್ರಿ ಐಟಿ ಅಧಿಕಾರಿಗಳ ಚಟುವಟಿಕೆ ಇನ್ನಷ್ಟು ಚುರುಕುಗೊಂಡಿತ್ತು. ವಿವಿಧ ಕಡೆ ದಾಳಿಗೆ ತೆರಳಿದ್ದ ಅಧಿಕಾರಿಗಳು ರಾತ್ರಿ ಡಿಕೆಶಿ ಮನೆಗೆ ದೌಡಾಯಿಸಿ ಹೋದರು. ರಾತ್ರಿಯಿಡೀ ಡಿಕೆಶಿ ಮನೆಯಲ್ಲಿ ದಾಖಲೆಗಳ ಪರಿಶೀಲನೆ ಕಾರ್ಯ ಸಾಗಿತ್ತು. ಇದಕ್ಕಾಗಿ ಐಟಿ ಕೇಂದ್ರ ಕಚೇರಿಯಿಂದ ಮೂವರು ಲೆಕ್ಕ ಪರಿಶೋಧಕರನ್ನು ಕರೆಸಿಕೊಳ್ಳಲಾಗಿತ್ತು. ಡಿಕೆಶಿಯವರ ಆಪ್ತ ಸಹಾಯಕ ಚಂದ್ರಶೇಖರ್ ಅವರ ಜೊತೆಯಲ್ಲಿ ಲೆಕ್ಕಪರಿಶೋಧಕರು ಡಿಕೆಶಿ ಮನೆಗೆ ತೆರಳಿದರು. 6ಕ್ಕೂ ಹೆಚ್ಚು ತಂಡಗಳಿಂದ ಡಿಕೆಶಿ ಮನೆಯಲ್ಲಿ ಕಡತಗಳ ಪರಿಶೀಲನೆ ಮತ್ತು ಮಹಜರು ಕಾರ್ಯ ನಡೆಯಿತು.