ರಾಜ್ಯದ ಬೇರೆ ಬೇರೆ ಕಡೆ ಬೆಳ್ಳಂಬೆಳಗ್ಗೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿ ಶಾಕ್ ನೀಡಿದ್ದಾರೆ. 

ಬೆಂಗಳೂರು (ಮಾ. 09): ರಾಜ್ಯದ ಬೇರೆ ಬೇರೆ ಕಡೆ ಬೆಳ್ಳಂಬೆಳಗ್ಗೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿ ಶಾಕ್ ನೀಡಿದ್ದಾರೆ. 

ನಂದಿನಿ ಲೇಔಟ್’ನಲ್ಲಿರುವ ಬಿಬಿಎಂಪಿ ಎಇಇ ಗಂಗಾಧರ್ ಮನೆ ಮತ್ತು ಮಾಗಡಿ ರಸ್ತೆಯಲ್ಲಿರುವ ಬಿಬಿಎಂಪಿ ಕಚೇರಿ ಮೇಲೆ ದಾಳಿ ನಡೆಸಿದ್ದಾರೆ. ಆದಾಯಕ್ಕೂ ಮೀರಿ ಅಧಿಕ ಆಸ್ತಿ ಸಂಪಾದನೆ ಆರೋಪದ ಮೇಲೆ ದಾಳಿ ಮಾಡಲಾಗಿದೆ. 
ಕೆಜಿಐಡಿ ಸೂಪರಿಂಟೆಂಡೆಂಟ್ ರುದ್ರಪ್ರಸಾದ್ ಮನೆ ಮೇಲೂ ದಾಳಿ ಆಗಿದೆ. ವಿವಿ ಟವರ್ ಕಚೇರಿ ಹಾಗೂ ಮಲ್ಲತ್ತಹಳ್ಳಿಯ ಮನೆ ಮತ್ತು ತುಮಕೂರಿನ ಮನೆ ಮೇಲೆ ಅಟ್ಯಾಕ್ ಮಾಡಿದ್ದಾರೆ. ಎಲ್ಲಾ ಕಡೆಗಳಲ್ಲಿ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. 

ಹುಬ್ಬಳ್ಳಿ 
ವಿಶೇಷ ಭೂ ಸ್ವಾಧೀನ ಅಧಿಕಾರಿ ರಾಜಶ್ರೀ ಜೈನಾಪುರ ಸಂಬಂಧಿ‌ ಮನೆ ಮೇಲೆ ಎಸಿಬಿ ಇನ್ಸ್​ಪೆಕ್ಟರ್ ಪ್ರಮೋದ್ ಹಾಗೂ ರಾಘವೇಂದ್ರ ಮತ್ತು ಅವರ ತಂಡ ದಾಳಿ ಮಾಡಿದೆ. ಅಪಾರ ಪ್ರಮಾಣ‌ದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಶೋಧ ಕಾರ್ಯ ಮುಂದುವರೆದಿದೆ. 

ಕೋಲಾರ 
ಸಣ್ಣ ನೀರಾವರಿ ಹಾಗೂ ನೈರ್ಮಲ್ಯ ಇಲಾಖೆಯ ಅಧಿಕಾರಿ ಅಪ್ಪಿರೆಡ್ಡಿ ಮನೆಯ ಮೇಲೆ ದಾಳಿ ನಡೆದಿದೆ. ಶ್ರೀನಿವಾಸಪುರದ ತೋಟದ ಮನೆ, ಫಾರಂ ಹೌಸ್, ಮನೆ ಮೇಲೆ ಏಕ ಕಾಲದಲ್ಲಿ ದಾಳಿ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.