ಬೆಂಗಳೂರು (ಡಿ. 24): ಆದಾಯಕ್ಕನುಗುಣವಾಗಿ ತೆರಿಗೆ ಪಾವತಿಸದ ಹಿನ್ನೆಲೆಯಲ್ಲಿ ಗೋಪಾಲನ್ ಎಂಟರ್ ಪ್ರೈಸಸ್ ಸೇರಿದಂತೆ ಹಲವು ರಿಯಲ್ ಎಸ್ಟೇಟ್ ಕಂಪನಿಗಳ ಮೇಲೆ ಇಂದು ಕೂಡಾ ಐಟಿ ದಾಳಿ ನಡೆದಿದೆ. 

ನಿನ್ನೆ ರಾತ್ರಿ 2 ಗಂಟೆವರೆಗೆ ಐಟಿ ಅಧಿಕಾರಿಗಳು ದಾಖಲೆ ಪರಿಶೀಲಿಸಿದ್ದಾರೆ. ನೋಟು ನಿಷೇಧದ ಬಳಿಕ ನಕಲಿ ದಾಖಲೆ ಸೃಷ್ಟಿ ಮಾಡಿ ನಿರ್ಮಾಣ ಕಾಮಗಾರಿ ವಸ್ತುಗಳ ಖರೀದಿ ಮಾಡಿದ್ದಾರೆಂದು ಐಟಿ ಅಧಿಕಾರಿಗಳು ಸುವರ್ಣ ನ್ಯೂಸ್ ಗೆ ಸ್ಪಷ್ಟಪಡಿಸಿದ್ದಾರೆ.

ಗೋಪಾಲನ್ ಎಂಟರ್ ಪ್ರೈಸಸ್ ಬೆಂಗಳೂರಿನಾದ್ಯಂತ 35 ಕ್ಕೂ ಹೆಚ್ಚು ಅಪಾರ್ಟ್ ಮೆಂಟ್ ಮತ್ತು ಮಾಲ್ ಗಳನ್ನು ಹೊಂದಿದೆ. ಅಧಿಕಾರಿಗಳ ಪರಿಶೀಲನೆ ಮುಂದುವರೆದಿದೆ.