ಜಯಾ ಆಪ್ತಸಹಾಯಕನ ಕಚೇರಿ ಮೇಲೂ ಏಕಕಾಲದಲ್ಲಿ ಐಟಿ ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ಐಟಿ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ
ಚೆನ್ನೈ(ನ.17): ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ ಜಯಲಲಿತಾ ಖಾಸಗಿ ನಿವಾಸದ ಮೇಲೆ ಐಟಿ ದಾಳಿ ನಡೆದಿದೆ. ಇಂದು ಸಂಜೆ ಚೆನ್ನೈನಲ್ಲಿರುವ ಜಯಾ ಒಡೆತನ ನಿವಾಸ ಫೊಯಸ್ ಗಾರ್ಡ್ನ್ ಮೇಲೆ ಐಟಿ ದಾಳಿ ನಡೆಸಲಾಗಿದೆ. ಮೂರು ಸದಸ್ಯರ ತಂಡ ದಾಳಿ ನಡೆಸಿದ್ದು, ಜಯಾ ಸಿಕ್ರೆಟ್ ರೂಮ್ನಲ್ಲಿ ದಾಖಲೆ ಪರಿಶೀಲನೆ ನಡೆಸುತ್ತಿದೆ. ಅಲ್ಲದೇ ಜಯಾ ಸಂಬಂಧಿಕರ ಮನೆ, ಜಯಾ ಆಪ್ತಸಹಾಯಕನ ಕಚೇರಿ ಮೇಲೂ ಏಕಕಾಲದಲ್ಲಿ ಐಟಿ ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ಐಟಿ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಇಡೀ ರಾತ್ರಿ ದಾಖಲೆ ಪರಿಶೀಲನೆ ನಡೆಯಲಿದೆ ಎಂಬ ಮಾಹಿತಿಗಳು ದೊರೆತಿವೆ.
