ಗೋಪಾಲನ್ ಎಂಟರ್ ಪ್ರೈಸಸ್ ಗ್ರೂಪ್ ಸೇರಿದಂತೆ ಬೆಂಗಳೂರಿನಾದ್ಯಂತ ಅಪಾರ್ಟ್'ಮೆಂಟ್ ಮತ್ತು ಮಾಲ್ ಗಳನ್ನು ಹೊಂದಿರುವ ಕಂಪನಿ ಮೇಲೆ ದಾಳಿ ನಡೆಸಿದ್ದಾರೆ.

ಬೆಂಗಳೂರು (ಡಿ. 23): ಗೋಪಾಲನ್ ಸಮೂಹ ಸೇರಿದಂತೆ ಇಪ್ಪತ್ತಕ್ಕೂ ಹೆಚ್ಚು ಕಡೆ ಇಂದು ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಗೋಪಾಲನ್ ಎಂಟರ್ ಪ್ರೈಸಸ್ ಗ್ರೂಪ್ ಸೇರಿದಂತೆ ಬೆಂಗಳೂರಿನಾದ್ಯಂತ ಅಪಾರ್ಟ್'ಮೆಂಟ್ ಮತ್ತು ಮಾಲ್ ಗಳನ್ನು ಹೊಂದಿರುವ ಕಂಪನಿ ಮೇಲೆ ದಾಳಿ ನಡೆಸಿದ್ದಾರೆ.

35ಕ್ಕೂ ಹೆಚ್ಚು ಅಪಾರ್ಟ್​ಮೆಂಟ್, ಮಾಲ್​ಗಳನ್ನು ಗೋಪಾಲನ್ ಕಂಪನಿ ಹೊಂದಿದ್ದು, ಅಕ್ರಮ ಹಣದ ವಹಿವಾಟು ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದೆ.

ಬೆಳಗ್ಗೆಯಿಂದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಖಲೆ ಪರಿಶೀಲನೆ ಮಾಡುತ್ತಿದ್ದಾರೆ.