ಬೆಳ್ಳಂ ಬೆಳಗ್ಗೆ ಎಸಿಬಿ ಅಧಿಕಾರಿಗಳು, ಬಿಡಿಎ ಉಪ ನಿರ್ದೇಶಕ ತ್ಯಾಗರಾಜ್ ಅವರಿಗೆ ಸೇರಿರುವ ಮನೆ, ಕಚೇರಿ ಮೇಲೆ ದಾಳಿ ನಡೆಸಿದ್ದಾರೆ. ಮಹಾಲಕ್ಷ್ಮಿ ಲೇಔಟ್ ಪ್ರಸನ್ನ ಆಂಜನೇಯ ಬಳಿ ಇರುವ ತ್ಯಾಗರಾಜ್ ಮನೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು, ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.

ಬೆಂಗಳೂರು(ಜ.04): ಉದ್ಯಮಿ ಹಾಗೂ ರಾಜಕಾರಣಿ ಕೆಪಿ ನಂಜುಂಡಿ ಅವರಿಗೆ ಸೇರಿರುವ ಜ್ಯುವೆಲ್ಸ್ ಮತ್ತು ಸಿಲ್ಕ್ ಶೋ ರೂಂ, ಚಾನಲ್ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

Add Asianetnews Kannada as a Preferred SourcegooglePreferred

ಬೆಂಗಳೂರು, ಧಾರವಾಡ ಸೇರಿದಂತೆ ಅನೇಕ ಕಡೆ ಬೆಂಗಳೂರು ಹಾಗೂ ಗೋವಾ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇಲ್ಲಿನ ಎರಡು ಮನೆ ಮತ್ತು ಶೋ ರೂಂ ಮೇಲೆ ದಾಳಿ ನಡೆಸಿದ ಅಧಿಕಾರಿಗಳು ದಾಖಲೆ ಪರಿಶೀಲನೆ ನಡೆಸುತ್ತಿದ್ದಾರೆ. ಅಲ್ಲದೇ ಇವರಿಗೆ ಸೇರಿರುವ ಕಂಪನಿಯ ಉನ್ನತ ಹುದ್ದೆಯಲ್ಲಿರುವವರ ಮನೆ ಮೇಲೂ ದಾಳಿ ನಡೆಸಲಾಗಿದ್ದು ದಾಖಲೆ ಪತ್ರಗಳನ್ನು ಪರಿಶೀಲಿಸುತ್ತಿದ್ದಾರೆ.

ಎಸಿಬಿ ಬಿಸಿ:

ಬೆಳ್ಳಂ ಬೆಳಗ್ಗೆ ಎಸಿಬಿ ಅಧಿಕಾರಿಗಳು, ಬಿಡಿಎ ಉಪ ನಿರ್ದೇಶಕ ತ್ಯಾಗರಾಜ್ ಅವರಿಗೆ ಸೇರಿರುವ ಮನೆ, ಕಚೇರಿ ಮೇಲೆ ದಾಳಿ ನಡೆಸಿದ್ದಾರೆ. ಮಹಾಲಕ್ಷ್ಮಿ ಲೇಔಟ್ ಪ್ರಸನ್ನ ಆಂಜನೇಯ ಬಳಿ ಇರುವ ತ್ಯಾಗರಾಜ್ ಮನೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು, ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.

ವಿಜಯಪುರದಲ್ಲಿಯೂ ಎಸಿಬಿ ದಾಳಿ

ಜಿಲ್ಲಾ ಪಂಚಾಯಿತಿ ಎಂಜಿನಿಯರಿಂಗ್ ವಿಭಾಗದ ಸುಪರಿಡೆಂಟ್ ಸೋಮಪ್ಪ ನಾಯಕ್ ಅವರಿಗೆ ಸೇರಿರುವ ಎರಡು ಮನೆಗಳ ಮೇಲೂ ಎಸಿಬಿ ದಾಳಿ ಮುಂದುವರಿದಿದೆ. ನಗರದ ಹರಿಕಾರ್ ಲೇಔಟ್ ಹಾಗೂ ಬಾರಾಕುಟ್ರಿ ತಾಂಡಾದಲ್ಲಿರುವ ಮನೆಗಳ ಮೇಲೆ ದಾಳಿ ನಡೆದಿದೆ. ಡಿವೈಎಸ್ಪಿ ಮಲ್ಲೇಶ ನೇತೃತ್ವದಲ್ಲಿ ದಾಳಿ ನಡೆದಿದ್ದು, ಮಹತ್ವದ ದಾಖಲಾತಿಗಳನ್ನು ಪರಿಶೀಲಿಸಲಾಗುತ್ತಿದೆ. ಹತ್ತಕ್ಕೂ ಹೆಚ್ಚು ಅಧಿಕಾರಿಗಳಿಂದ ಬ್ಯಾಂಕ್ ಖಾತೆ, ಲಾಕರ್ ಗಳನ್ನು ಪರಿಶೀಲಿಸಲಾಗುತ್ತಿದ್ದಾರೆ.