ಅಪನಗದೀಕರಣ ಘೋಷಣೆಯ ಬಳಿಕ ತಮ್ಮ ಹಣ ಕೈಜಾರದಂತೆ ತಡೆಯಲು ಖಾತೆದಾದರು ವಿವಿಧ ಕುತಂತ್ರ ಮಾರ್ಗದ ಮೂಲಕ ಬ್ಯಾಂಕುಗಳಲ್ಲಿ ಭಾರಿ ಮೊತ್ತದ ಹಣವನ್ನು ಠೇವಣಿ ಇಟ್ಟಿದ್ದರು. ಈ ರೀತಿಯ ಬ್ಯಾಂಕ್ ಖಾತೆಗಳನ್ನು ಪರಿಶೀಲನೆ ನಡೆಸಲಾಗಿದ್ದು, ಸಂಪತ್ತಿನ ಮೂಲವನ್ನು ವಿವರಿಸುವಂತೆ ಸೂಚಿಸಲಾಗಿದೆ.
ನವದೆಹಲಿ(ಮಾ.01): ಅಪನವದೀಕರಣ ಅವಧಿಯಲ್ಲಿ ಒಂದು ಕೋಟಿ ರು.ಗಿಂತಲೂ ಹೆಚ್ಚು ಹಣವನ್ನು ಬ್ಯಾಂಕ್‌ನಲ್ಲಿ ಠೇವಣಿ ಇರಿಸಿದ 200 ಖಾತೆದಾರರಿಗೆ ಆದಾಯ ತೆರಿಗೆ ಇಲಾಖೆ ನೋಟಿಸ್ ಜಾರಿ ಮಾಡಿದೆ.
ಅಪನಗದೀಕರಣ ಘೋಷಣೆಯ ಬಳಿಕ ತಮ್ಮ ಹಣ ಕೈಜಾರದಂತೆ ತಡೆಯಲು ಖಾತೆದಾದರು ವಿವಿಧ ಕುತಂತ್ರ ಮಾರ್ಗದ ಮೂಲಕ ಬ್ಯಾಂಕುಗಳಲ್ಲಿ ಭಾರಿ ಮೊತ್ತದ ಹಣವನ್ನು ಠೇವಣಿ ಇಟ್ಟಿದ್ದರು. ಈ ರೀತಿಯ ಬ್ಯಾಂಕ್ ಖಾತೆಗಳನ್ನು ಪರಿಶೀಲನೆ ನಡೆಸಲಾಗಿದ್ದು, ಸಂಪತ್ತಿನ ಮೂಲವನ್ನು ವಿವರಿಸುವಂತೆ ಸೂಚಿಸಲಾಗಿದೆ.
‘ಆರೇಷನ್ ಕ್ಲೀನ್ ಮನಿ’ ಎರಡನೇ ಹಂತದ ಕಾರ್ಯಾಚರಣೆಯನ್ನು ಮಾರ್ಚ್‌ನಿಂದ ಆರಂಭಿಸುವುದಾಗಿ ತೆರಿಗೆ ಇಲಾಖೆ ಕಳೆದ ವಾರ ತಿಳಿಸಿತ್ತು. ಅಪನಗದೀಕರಣ ಮತ್ತು ಅದಕ್ಕಿಂತ ಮುಂಚಿನ ಅವಯಲ್ಲಿ ಬ್ಯಾಂಕ್ ಖಾತೆಗಳಲ್ಲಿ ಠೇವಣಿಯ ವಿಶ್ಲೇಷಣೆಗೆ ಇಬ್ಬರು ಡೇಟಾ ವಿಶ್ಲೇಷಕರನ್ನು ನೇಮಿಸಿಕೊಳ್ಳಲಾಗುವುದು ತೆರಿಗೆ ಇಲಾಖೆ ತಿಳಿಸಿದೆ.