ನಿಮ್ಮ ಬಗ್ಗೆ ನಮ್ಮಲ್ಲಿ ಮಾಹಿತಿಯಿದೆ, ತಡ ಮಾಡಬೇಡಿ, ಕಪ್ಪು ಹಣ ಘೋಷಿಸಿಕೊಳ್ಳಿ: ಆದಾಯ ತೆರಿಗೆ ಇಲಾಖೆ ಎಚ್ಚರಿಕೆ
ನವದೆಹಲಿ (ಮಾ.24): ಈಗಲೂ ತಮ್ಮ ಬಳಿ ಕಪ್ಪು ಹಣ ಶೇಖರಿಸಿಟ್ಟವರಿಗೆ ಆದಾಯ ತೆರಿಗೆ ಇಲಾಖೆ ಎಚ್ಚರಿಕೆ ನೀಡಿದೆ.
ನಿಮ್ಮ ನಗದು ಜಮಾವಣೆ ಬಗ್ಗೆ ನಮ್ಮ ಬಳಿ ಮಾಹಿತಿಯಿದೆ. ಆದುದರಿಂದ ಆದಷ್ಟು ಬೇಗ ತಮ್ಮ ಕಪ್ಪು-ಹಣದ ಬಗ್ಗೆ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿ ಘೋಷಿಸಿಕೊಳ್ಳಿ ಹಾಗೂ ದಂಡದಿಂದ ಪಾರಾಗಿ ಎಂದು ಆದಾಯ ತೆರಿಗೆ ಇಲಾಖೆ ಎಚ್ಚರಿಕೆ ನೀಡಿದೆ.

ಕಪ್ಪು ಹಣ ಹೊಂದಿದ್ದಲ್ಲಿ ಮಾ.31ವರೆಗೆ ಸಮಯಾವಕಾಶವಿದೆ, ಆ ಬಳಿಕ ಭಾರೀ ದಂಡ ತೆರಬೇಕಾಗುವುದೆಂದು ಇಲಾಖೆಯ ಪ್ರಕಟಣೆ ಹೇಳಿದೆ.
