ರಾಂ ರಹೀಂ'ನ ಡೇರಾ ಸಚ್ಚಾ ಸೌಧ ಆಸ್ತಿಗಳನ್ನು ತನಿಖೆ ನಡೆಸುವಂತೆ ಆದಾಯ ತೆರಿಗೆ ಇಲಾಖೆ ಹಾಗೂ ಜಾರಿ ನಿರ್ದೇಶನಾಲಯಕ್ಕೆ ಆದೇಶ ನೀಡಿದೆ.
ಚಂಡೀಘಡ(ಸೆ.28): ಅತ್ಯಾಚಾರ ಆರೋಪದ ಮೇಲೆ 20 ವರ್ಷ ಜೈಲು ಸೇರಿರುವ ಡೇರಾ ಸಚ್ಚಾ ಸೌಧ ಸಂಘಟನೆಯ ಮುಖ್ಯಸ್ಥ ರಾಂ ರಹೀಂ'ಗೆ ಮತ್ತೊಂದು ಸಂಕಷ್ಟ ಶುರುವಾಗಿದೆ.
ಪಂಜಾಬ್ ಹಾಗೂ ಹರ್ಯಾಣ ಹೈಕೋರ್ಟ್ ರಾಂ ರಹೀಂ'ನ ಡೇರಾ ಸಚ್ಚಾ ಸೌಧ ಆಸ್ತಿಗಳನ್ನು ತನಿಖೆ ನಡೆಸುವಂತೆ ಆದಾಯ ತೆರಿಗೆ ಇಲಾಖೆ ಹಾಗೂ ಜಾರಿ ನಿರ್ದೇಶನಾಲಯಕ್ಕೆ ಆದೇಶ ನೀಡಿದೆ. ಆದೇಶದಲ್ಲಿಸ್ಥಿರಾಸ್ತಿ ಹಾಗೂ ಚರಾಸ್ತಿ ಎರಡನ್ನು ತನಿಖೆ ನಡೆಸಬೇಕೆಂದು ತಿಳಿಸಲಾಗಿದೆ.
ಈ ಬಗ್ಗೆ ಮಾತನಾಡಿದ ಅರ್ಜಿದಾರರ ಪರ ವಕೀಲರಾದ ನವಕೃಷ್ಣನ್ ಸಿಂಗ್, ಐಟಿ ಹಾಗೂ ಇಡಿ ಅಧಿಕಾರಿಗಳು ಹರ್ಯಾಣದ ಮುಖ್ಯ ಲೆಕ್ಕಪರಿಶೋಧಕ ಕಚೇರಿಯಲ್ಲಿ ಯಾವುದೇ ದಾಖಲೆಗಳನ್ನು ಪರಿಶೀಲನೆಗೊಳಪಡಿಸಲು ಸ್ವತಂತ್ರ ನೀಡಲಾಗಿದೆ. ಎರಡೂ ಸಂಸ್ಥೆಗಳು ಆದಾಯ ತೆರಿಗೆ ವಂಚನೆ ಸೇರಿದಂತೆ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಲಿವೆ' ಎಂದಿದ್ದಾರೆ.
ರವೀಂದ್ರ ಧುಲ್ ಎಂಬುವವರು ಶಿಕ್ಷೆಗೊಳಪಡಿಸುವ ಸಂದರ್ಭದಲ್ಲಿ ಆದ ಗಲಭೆಯ ನಷ್ಟದ ಪರಿಹಾರವನ್ನು ತುಂಬಿಕೊಡುವಂತೆ ಕೋರ್ಟ್'ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಅರ್ಜಿಯನ್ನು ಸಲ್ಲಿಸಿದ್ದರು.
