ಬ್ಯಾಂಕ್ ನಲ್ಲಿರುವ ಕಪ್ಪುಹಣದ ಹರಿವನ್ನು ಪತ್ತೆ ಹಚ್ಚಲು ಆದಾಯ ತೆರಿಗೆ ಇಲಾಖೆ ಕ್ಲೀನ್ ಮನಿ ಎನ್ನುವ ಎರಡನೇ ಹಂತದ ಆಪರೇಶನ್ ಕೈಗೊಂಡಿದೆ. ಈ ಸಂಬಂಧ 60 ಸಾವಿರಕ್ಕೂ ಹೆಚ್ಚು ಸಂಸ್ಥೆ/ ವ್ಯಕ್ತಿಗಳಿಗೆ ನೊಟೀಸ್ ನೀಡಲಾಗಿದೆ.
ನವದೆಹಲಿ (ಏ.14): ಬ್ಯಾಂಕ್ ನಲ್ಲಿರುವ ಕಪ್ಪುಹಣದ ಹರಿವನ್ನು ಪತ್ತೆ ಹಚ್ಚಲು ಆದಾಯ ತೆರಿಗೆ ಇಲಾಖೆ ಕ್ಲೀನ್ ಮನಿ ಎನ್ನುವ ಎರಡನೇ ಹಂತದ ಆಪರೇಶನ್ ಕೈಗೊಂಡಿದೆ. ಈ ಸಂಬಂಧ 60 ಸಾವಿರಕ್ಕೂ ಹೆಚ್ಚು ಸಂಸ್ಥೆ/ ವ್ಯಕ್ತಿಗಳಿಗೆ ನೊಟೀಸ್ ನೀಡಲಾಗಿದೆ.
ಡಿಮಾನಿಟೈಸೇಶನ್ ಸಂದರ್ಭದಲ್ಲಿ 1300 ಕ್ಕೂ ಹೆಚ್ಚು ಪ್ರಭಾವಿ ವ್ಯಕ್ತಿಗಳು ಸೇರಿದಂತೆ 60 ಸಾವಿರ ಮಂದಿ ಹೆಚ್ಚು ನಗದು ವ್ಯವಹಾರ ನಡೆಸಿರುವುದು ವಿಚಾರಣೆ ವೇಳೆ ತಿಳಿದು ಬಂದಿದೆ. ಅತೀ ಹೆಚ್ಚು ಮೌಲ್ಯದ ಆಸ್ತಿ ಖರೀದಿಗಾಗಿ 6 ಸಾವಿರಕ್ಕೂ ಹೆಚ್ಚು ಟ್ರಾನ್ಸಾಕ್ಷನ್ ನಡೆದಿರುವುದು ಕಂಡು ಬಂದಿದೆ ಎಂದು ಸಿಬಿಡಿಟಿ ಹೇಳಿದೆ.
ಜನವರಿಯಲ್ಲಿ ಪ್ರಾಥಮಿಕ ಹಂತದ ಆಪರೇಶನ್ ಶುರು ಮಾಡಿದ್ದು ಡಿಮಾನಿಟೈಸೇಶನ್ ನಂತರ ಭಾರೀ ಪ್ರಮಾಣದ ನಗದು ಡಿಪಾಸಿಟ್ಟ ಮಾಡಿದವರನ್ನು ಇ-ವೇರಿಫಿಕೇಶನ್ ಮಾಡಲಾಗುವುದು ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ.
