Asianet Suvarna News Asianet Suvarna News

ಮತ್ತೊಂದು ಇತಿಹಾಸಕ್ಕೆ ‘ಜಿಗಿದ’ ಇಸ್ರೋ: 8 ಉಪಗ್ರಹಗಳೊಂದಿಗೆ ನಭಕ್ಕೆ ಹಾರಿದ PSLV-C35

Isro PSLVC35 launched

ಬೆಂಗಳೂರು(ಸೆ.26): ಇಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಐತಿಹಾಸಿಕ ಸಾಧನೆಗೈದಿದೆ. ಒಂದೇ ರಾಕೆಟ್​ ಮೂಲಕ ಎಂಟು ಉಪಗ್ರಹಗಳನ್ನು ಕಕ್ಷೆಗೆ ಸೇರಿಸಿದ ಕೀರ್ತಿಗೆ ಇಸ್ರೋ ಪಾತ್ರವಾಗಿದೆ.

ಬೆಳಗ್ಗೆ 9.12ಕ್ಕೆ ಆಂಧ್ರ ಪ್ರದೇಶದ ಶ್ರೀಹರಿಕೋಟಾದಿಂದ ಉಪಗ್ರಹಗಳ ಉಡಾವಣೆಯಾಗಿದ್ದು, ಇವುಗಳಲ್ಲಿ ಭಾರತದ ಮೂರು ಉಪಗ್ರಹಗಳು, 5 ವಿದೇಶಿ ಉಪಗ್ರಹಗಳಾಗಿವೆ. ಏಕಕಾಲದಲ್ಲಿ 8 ಉಪಗ್ರಹಗಳನ್ನು 2 ಬೇರೆ ಕಕ್ಷೆಗಳಿಗೆ  ಸೇರಿಸಿರುವುದು ಈ ಬಾರಿಯ ವಿಶೇಷವಾಗಿತ್ತು.

ಇಸ್ರೋ ಸಾಧನೆಯಲ್ಲಿ ಬೆಂಗಳೂರಿನ ಪಿಇಎಸ್ ಎಂಜಿನಿಯರಿಂದ ವಿದ್ಯಾರ್ಥಿಗಳ ಪಾಲೂ ಸೇರಿದೆ. 8 ಉಪಗ್ರಹಗಳ ಪಟ್ಟಿಯಲ್ಲಿ ಬೆಂಗಳೂರಿನ ಪಿಇಎಸ್ ಎಂಜಿನಿಯರಿಂಗ್​ ಕಾಲೇಜಿನ ವಿದ್ಯಾರ್ಥಿಗಳಿಂದ ರೂಪಿತವಾದ ಪೈಸ್ಯಾಟ್ ಹೆಸರಿನ ಉಪಗ್ರಹವೂ ಒಂದಾಗಿದೆ. 250 ವಿದ್ಯಾರ್ಥಿಗಳು ಸೇರಿ ನಿರ್ಮಿಸಿದ ಈ ಉಪಗ್ರಹವನ್ನು ಸಾಂಬಶಿವ ರಾವ್ ಹಾಗೂ ಅಗರ್​ವಾಲ್ ಮಾರ್ಗದರ್ಶನದಲ್ಲಿ ನಿರ್ಮಿಸಲಾಗಿತ್ತು.

ಇದನ್ನು ನಿರ್ಮಿಸಲು ಐದು ವರ್ಷಗಳ ತಗುಲಿದ್ದು, ಇದರ ಕಂಟ್ರೋಲಿಂಗ್ ವ್ಯವಸ್ಥೆ ಪಿಇಎಸ್ ಕಾಲೇಜಿನಲ್ಲೇ ಇದೆ ಹಾಗೂ ಇದರ ನಿರ್ಬಹಣೆಯನ್ನು ವಿದ್ಯಾರ್ಥಿಗಳೇ ನಿರ್ವಹಿಸಲಿದ್ದಾರೆ.

‘ಪೈಸ್ಯಾಟ್’ ಉಪಗ್ರಹದ ವಿಶೇಷತೆಗಳು

ಎಸ್​-ಬ್ಯಾಂಡ್​ ಫ್ರೀಕ್ವೆನ್ಸಿಯಲ್ಲಿ ಕಾರ್ಯನಿರ್ವಹಣೆ

670 ಕಿ.ಮೀ ಎತ್ತರದಲ್ಲಿ ಫೊಟೋ ಸೆರೆ ಹಿಡಿಯಲಿದೆ

90 ಮೆಗಾ ಪಿಕ್ಸೆಲ್ ಕ್ಯಾಮೆರಾದಿಂದ ಫೋಟೋ ಕ್ಲಿಕ್

5.25 ಕೆಜಿ ಪೈಸ್ಯಾಟ್​ ತಯಾರಿಕೆಗೆ 1.5 ಕೋಟಿ ರೂ ವೆಚ್ಚ

ಒಂದು ವರ್ಷದವರೆಗೆ ಭೂಕಕ್ಷೆಯಲ್ಲಿ ಸುತ್ತು ಹೊಡೆಯಲಿದೆ

ವಿದ್ಯಾರ್ಥಿಗಳ ಮುಂದಿನ ಪ್ರಾಜೆಕ್ಟ್ ವರ್ಕ್​ಗಳಿಗೆ ಬಳಕೆ ಆಗಲಿದೆ

Follow Us:
Download App:
  • android
  • ios