ತನ್ನ ಇತಿಹಾಸದಲ್ಲೇ ಅತ್ಯಂತ ಭಾರದ ರಾಕೆಟ್ ಉಡ್ಡಯನಕ್ಕೆ ಇಸ್ರೋ ಸಜ್ಜಾಗಿದೆ. ಭಾರತದ ದೂರಸಂಪರ್ಕ ಕ್ಷೇತ್ರದಲ್ಲಿ ಕ್ರಾಂತಿಗೆ ಜಿಸ್ಯಾಟ್-11 ಉಪಗ್ರಹವನ್ನು ಭಾರತ ಫ್ರಾನ್ಸ್ ಕೌರು ಉಡ್ಡಯನ ನೆಲೆಯಿಂದ ಉಡಾವಣೆ ಮಾಡಲು ನಿರ್ಧರಿಸಿದೆ.

ನವದೆಹಲಿ(ಜ.07): ತನ್ನ ಇತಿಹಾಸದಲ್ಲೇ ಅತ್ಯಂತ ಭಾರದ ರಾಕೆಟ್ ಉಡ್ಡಯನಕ್ಕೆ ಇಸ್ರೋ ಸಜ್ಜಾಗಿದೆ. ಭಾರತದ ದೂರಸಂಪರ್ಕ ಕ್ಷೇತ್ರದಲ್ಲಿ ಕ್ರಾಂತಿಗೆ ಜಿಸ್ಯಾಟ್-11 ಉಪಗ್ರಹವನ್ನು ಭಾರತ ಫ್ರಾನ್ಸ್ ಕೌರು ಉಡ್ಡಯನ ನೆಲೆಯಿಂದ ಉಡಾವಣೆ ಮಾಡಲು ನಿರ್ಧರಿಸಿದೆ.

6 ಟನ್ ತೂಕದ ಉಪಗ್ರಹ ಹಾರಿಬಿಡುವ ಸಾಮರ್ಥ್ಯ ಇಸ್ರೋಗೆ ಇನ್ನೂ ಪೂರ್ಣ ಪ್ರಮಾಣದಲ್ಲಿ ಸಿದ್ಧಿಸಿಲ್ಲ. ಹೀಗಾಗಿ ಫ್ರಾನ್ಸ್‌ನ ಏರಿಯಾನ್-5 ರಾಕೆಟ್ ಮೂಲಕ ಮುಂದಿನ ಜೂನ್‌ನಲ್ಲಿ ಹಾರಿಬಿಡಲಾಗುವುದು. ಈ ಉಪಗ್ರಹ ಮೊದಲ ಬಾರಿ ಗ್ರಾಮೀಣ ಭಾರತದಲ್ಲಿ ಸೆಟಲೈಟ್ ಆಧಾರಿತ ಇಂಟರ್ನೆಟ್ ಸೇವೆಗಳನ್ನು ಒದಗಿಸಲಿದೆ.