ಪಾಕ್, ಚೀನಾ ಕಡಿವಾಣಕ್ಕೆ ಇಸ್ರೋದಿಂದ ಉಪಗ್ರಹ

ಗಡಿಯಲ್ಲಿ ಸದಾ ತಂಟೆ ಮಾಡುವ ಪಾಕಿಸ್ತಾನ ಹಾಗೂ ಚೀನಾದ ಸೇನೆಗಳ ಚಟುವಟಿಕೆ ಮೇಲೆ ಕಣ್ಣಿಡಲು ಇಸ್ರೋ ಕೆಲ ತಿಂಗಳಲ್ಲಿ ಬೇಹುಗಾರಿಕಾ ಉಪಗ್ರಹ ಹಾರಿ ಬಿಡಲಿದೆ. ಇದೇ ಅಕ್ಟೋಬರ್‌ನಲ್ಲಿ 800 ಕೋಟಿ ರು. ವೆಚ್ಚದ ಚಂದ್ರಯಾನ ಯೋಜನೆ ನಡುವೆಯೇ ದೇಶದ ಸೇನಾಪಡೆಗಳಿಗೆ ವಿದೇಶಿ ಸೇನಾಪಡೆಗಳ ಮೇಲೆ ಕಣ್ಣಿಡಲು ನೆರವಾಗುವ ಗುಪ್ತಚರ ಉಪಗ್ರಹಗಳನ್ನು  ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ (ಇಸ್ರೋ) ಅಂತರಿಕ್ಷಕ್ಕೆ ಕಳುಹಿಸಲು ನಿರ್ಧರಿಸಿದೆ.

ISRO Launch a Satellite

ನವದೆಹಲಿ (ಏ. 24): ಗಡಿಯಲ್ಲಿ ಸದಾ ತಂಟೆ ಮಾಡುವ ಪಾಕಿಸ್ತಾನ ಹಾಗೂ ಚೀನಾದ ಸೇನೆಗಳ ಚಟುವಟಿಕೆ ಮೇಲೆ ಕಣ್ಣಿಡಲು ಇಸ್ರೋ ಕೆಲ ತಿಂಗಳಲ್ಲಿ ಬೇಹುಗಾರಿಕಾ ಉಪಗ್ರಹ ಹಾರಿ ಬಿಡಲಿದೆ. ಇದೇ ಅಕ್ಟೋಬರ್‌ನಲ್ಲಿ 800 ಕೋಟಿ ರು. ವೆಚ್ಚದ ಚಂದ್ರಯಾನ ಯೋಜನೆ ನಡುವೆಯೇ ದೇಶದ ಸೇನಾಪಡೆಗಳಿಗೆ ವಿದೇಶಿ ಸೇನಾಪಡೆಗಳ ಮೇಲೆ ಕಣ್ಣಿಡಲು ನೆರವಾಗುವ ಗುಪ್ತಚರ ಉಪಗ್ರಹಗಳನ್ನು  ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ (ಇಸ್ರೋ) ಅಂತರಿಕ್ಷಕ್ಕೆ ಕಳುಹಿಸಲು ನಿರ್ಧರಿಸಿದೆ.

ದೇಶದ ಭೂ ಗಡಿ ಹಾಗೂ ಸಮುದ್ರ ಗಡಿಗಳ ಮೇಲೆ ಈ ಉಪಗ್ರಹಗಳು ಕಣ್ಣಿಡಲಿವೆ. ಈ ಭಾಗದಲ್ಲಿ ಪಾಕಿಸ್ತಾನ, ಚೀನಾ ಸೇರಿದಂತೆ ಯಾವುದೇ ದೇಶದ ಸೇನಾಪಡೆಗಳು ಏನಾದರೂ ಚಟುವಟಿಕೆ ಕೈಗೊಂಡರೆ ತಕ್ಷಣ ಅದರ ಮಾಹಿತಿ ಸೇನಾಪಡೆಗಳಿಗೆ ಸಿಗಲಿದೆ.

ಜಿಸ್ಯಾಟ್-7 ಎ ಉಪಗ್ರಹವನ್ನು ಸೆಪ್ಟೆಂಬರ್‌ನಲ್ಲಿ ಉಡಾಯಿಸಲಾಗುತ್ತಿದ್ದು, ಇದು ಭಾರತೀಯ ವಾಯುಪಡೆಗೆ ಗುಪ್ತಚರ ಮಾಹಿತಿ ಒದಗಿಸಲಿದೆ. ಇನ್ನು, ಸರ್ವೇಕ್ಷಣಾ ಉಪಗ್ರಹ ರಿಸ್ಯಾಟ್-2 ಎಯನ್ನು ಈ ವರ್ಷಾಂತ್ಯದೊಳಗೆ ಉಡಾಯಿಸಲಾಗುತ್ತದೆ.  

Latest Videos
Follow Us:
Download App:
  • android
  • ios