ಸೌತ್ ಏಷಿಯಾ ಸ್ಯಾಟಲೈಟ್ ಯಶಸ್ವೀ ಉಡಾವಣೆಯ ನಂತರ ಇಸ್ರೋ ಮತ್ತೊಂದು ದಾಖಲೆ ಬರೆಯಲು ಸಿದ್ಧತೆ ನಡೆಸುತ್ತಿದೆ. 640 ಟನ್ ಭಾರೀ ತೂಕದ ರಾಕೆಟ್ ಜೆಎಸ್’ಎಲ್’ವಿ ಎಂಕೆ 3 ಯನ್ನು ತಯಾರಿಸುತ್ತಿದೆ.
ಚೆನ್ನೈ (ಮೇ.14): ಸೌತ್ ಏಷಿಯಾ ಸ್ಯಾಟಲೈಟ್ ಯಶಸ್ವೀ ಉಡಾವಣೆಯ ನಂತರ ಇಸ್ರೋ ಮತ್ತೊಂದು ದಾಖಲೆ ಬರೆಯಲು ಸಿದ್ಧತೆ ನಡೆಸುತ್ತಿದೆ. 640 ಟನ್ ಭಾರೀ ತೂಕದ ರಾಕೆಟ್ ಜೆಎಸ್’ಎಲ್’ವಿ ಎಂಕೆ 3 ಯನ್ನು ತಯಾರಿಸುತ್ತಿದೆ.
ಈ ರಾಕೆಟ್ ನ ಪ್ರಮುಖ ಅಂಶವೆಂದರೆ ದೊಡ್ಡ ಕ್ರಿಯೋಜೆಮಿಕ್ ಎಂಜಿನನ್ನು ಒಳಗೊಂಡಿದೆ.ಚೆನ್ನೈನ ಬಾಹ್ಯಾಕಾಶ ವಿಜ್ಞಾನಿಗಳನ್ನು ಇದನ್ನು ಅಭಿವೃದ್ಧಿಪಡಿಸಿದ್ದಾರೆ.
ನಮ್ಮ 12 ವರ್ಷಗಳ ಶ್ರಮ ಈ ಜೂನ್ ನಲ್ಲಿ ಫಲ ನೀಡಲಿದೆ. ಜೆಎಸ್’ಎಲ್’ವಿ ಎಂಕೆ 3 ರಾಕೆಟ್ ಸಂವಹನ ಉಪಗ್ರಹ ಜಿಸ್ಯಾಟ್-19 ನ್ನು ಕೊಂಡೊಯ್ಯಲಿದೆ. ಈ ಮಿಷನ್ ಯಶಸ್ವಿಯಾಗುವುದೆಂಬ ನಂಬಿಕೆ ನಮಗಿದೆ. ಎಲ್ಲಾ ಪರೀಕ್ಷೆಗಳು ಮುಗಿದಿವೆ. . ಶ್ರೀಹರಿಕೋಟಾದಿಂದ ಜೂನ್ ಮೊದಲ ವಾರ ಉಡಾವಣೆಯಾಗುವ ಸಾಧ್ಯತೆಯಿದೆ ಎಂದು ವಿಕ್ರಮ್ ಸಾರಾಬಾಯಿ ಬಾಹ್ಯಾಕಾಶ ಕೇಂದ್ರದ ನಿರ್ದೇಶಕ ಕೆ. ಸಿವನ್ ಹೇಳಿದ್ದಾರೆ.
