ಚಂದ್ರಯಾನ-2 ನೌಕೆಯ ಜೋಡಣೆ ಕಾರ್ಯವನ್ನು ಈಗಾಗಲೇ ಇಸ್ರೋ ಪ್ರಾರಂಭಿಸಿದೆ.
ಹೈದರಾಬಾದ್(ಅ.26): ಭಾರತೀಯ ಬಾಹ್ಯಾಕಾಶ ಸಂಸ್ಥೆ(ಇಸ್ರೋ), ಮಾರ್ಚ್'ನಲ್ಲಿ ಮತ್ತೊಂದು ಚಂದ್ರಯಾನಕ್ಕೆ ಅಣಿಯಾಗುತ್ತಿದೆ. 2008ರಲ್ಲಿ ಚಂದ್ರನ ಕಕ್ಷೆಗೆ ಮೊದಲ ಬಾರಿಗೆ ನೌಕೆ ಕಳುಹಿಸಿ ಅಮೂಲ್ಯ ಮಾಹಿತಿ ಸಂಗ್ರಹಿಸಿದ್ದ ಇಸ್ರೋ, ಈ ಬಾರಿ ಚಂದ್ರನ ಮೇಲೆಯೇ ನೌಕೆ ಇಳಿಸುವ ಸಾಹಸಕ್ಕೆ ಮುಂದಾಗಿದ್ದು, ಅದಕ್ಕೆ ಬೇಕಾದ ತಾಲೀಮಿನಲ್ಲಿ ತೊಡಗಿದೆ.
ಚಂದ್ರಯಾನ-2 ನೌಕೆಯ ಜೋಡಣೆ ಕಾರ್ಯವನ್ನು ಈಗಾಗಲೇ ಇಸ್ರೋ ಪ್ರಾರಂಭಿಸಿದೆ. ಜತೆಗೆ ಚಂದ್ರನ ಅಂಗಳದ ಮೇಲೆ ನಿಧಾನವಾಗಿ ಇಳಿಯುವ ‘ಲ್ಯಾಂಡರ್’, ಅದರಿಂದ ಹೊರಬಂದು ಚಂದ್ರನ ಅಂಗಳದಲ್ಲಿ ಅಡ್ಡಾಡಿ ಮಣ್ಣು ಸೇರಿದಂತೆ ವಿವಿಧ ವಸ್ತು ಪರಿಶೀಲಿಸಿ, ದೃಶ್ಯ ಸೇರಿದಂತೆ ಹಲವು ವಿವರ ಸಂಗ್ರಹಿಸಿ ಭೂಮಿಯಲ್ಲಿರುವ ವಿಜ್ಞಾನಿಗಳಿಗೆ ರವಾನಿಸುವ ‘ರೋವರ್’ ಉಪಕರಣಗಳನ್ನು ಪ್ರಯೋಗಕ್ಕೆ ಒಳಪಡಿಸಿದೆ.
ಚಂದ್ರನ ಅಂಗಳದಲ್ಲಿನ ಅಮೂಲ್ಯ ಮಾಹಿತಿ ಸಂಗ್ರಹಿಸುವ ಉದ್ದೇಶ ಇಸ್ರೋ ಹೊಂದಿದೆ.
